October 5, 2024

Bhavana Tv

Its Your Channel

ಪ್ರೋ. ಎಂ ಡಿ ನಂಜುoಡಸ್ವಾಮಿಯವರ 87 ನೇಯ ಜಯಂತಿ ಅಂಗವಾಗಿ ರೈತರ ನೇರ ಮಾರುಕಟ್ಟೆ ಎಂಬ ವಿನೂತನವಾದ ಸಾವಯವ ರೈತ ಸಂತೆ

ಗುಂಡ್ಲುಪೇಟೆ ;- ವಿಶ್ವ ರೈತ ಚೇತನ ಪ್ರೋ. ಎಂ ಡಿ ನಂಜುoಡಸ್ವಾಮಿಯವರ 87 ನೇಯ ಜಯಂತಿಯAದು ಅವರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ಯಕ್ಕಾಗಿ ರೈತರ ನೇರ ಮಾರುಕಟ್ಟೆ ಎಂಬ ವಿನೂತನವಾದ ಸಾವಯವ ರೈತ ಸಂತೆ ಉದ್ಘಾಟನೆ

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಾವಯವ ಕೃಷಿಕರು ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಹೊಮ್ನೂರು ಪ್ರಕಾಶ್ ಮಾತನಾಡಿ ನಮ್ಮದು ರೈತ ಉತ್ಪಾದಕರ ಕಂಪನಿ ಚಾಮರಾಜನಗರ ಸಾವಯವ ರೈತ ಸಂತೆ ಎಂಬ ಸಾವಯವ ಪದಾರ್ಥಗಳ ಸಂತೆಯನ್ನ ಗುಂಡ್ಲುಪೇಟೆ ಪಟ್ಟಣದ ಬಯಲು ರಂಗಮAದಿರದಲ್ಲಿ 6ನೇ ತಾರೀಕು ಸೋಮವಾರ ಮೂರು ಗಂಟೆಗೆ ಆಯೋಜಿಸಿದ್ದು ಇದರ ಉದ್ಘಾಟನೆಗೆ ಜಿಲ್ಲಾಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಪೂರ್ವಿತ ಎಸ್, ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಿವಾಸ್ ,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಜಂಟಿ ನಿರ್ದೇಶಕರಾದ ಮಧುಸೂದನ್, ಈ ಎಲ್ಲಾ ಅಧಿಕಾರಿಗಳು ಆಗಮಿಸುತಿದ್ದಾರೆ. ಎಂದು ಪತ್ರಿಕೆಗೋಷ್ಠಿಯಲ್ಲಿ ತಿಳಿಸಿದರು. ಅಲ್ಲದೆ ಇಂದಿನ ಆರೋಗ್ಯ ಸ್ಥಿತಿ ನೋಡಿದರೆ ಹಿಂದೆ ನಮ್ಮ ತಾತ ಮುತ್ತಾತಂದಿರಕಾಲದಲ್ಲಿ ಸಾವಯವ ಕೃಷಿಗೆ ಒತ್ತು ನೀಡುತ್ತಿದ್ದರು. ಅದರ ಉಪಯೋಗವನ್ನು ಪಡೆದುಕೊಂಡು ಅವರುಗಳು ಶತಾಯುಷಿಗಳಾಗಿದ್ದರು .ಈಗಿನ ಕಾಲದ ಯುವಕರು ಮತ್ತು ಪ್ರಜೆಗಳು ಅಲ್ಪ ಅವಧಿಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಇದರ ಪರಿಣಾಮ ನಾವು ತಿನ್ನುವ ಆಹಾರ ಎಲ್ಲವೂ ವಿಷ ಪದಾರ್ಥವಾಗಿದೆ. ಹಾಗಾಗಿ ಸಾವಯವವನ್ನು ಪ್ರತಿಯೊಬ್ಬ ರೈತರು ಮಾಡಿದರೆ ಆರೋಗ್ಯದ ಹಿತ ದೃಷ್ಟಿಯಿಂದ ಮತ್ತು ರೈತರಿಗೆ ನೇರವಾಗಿ ಹಣ ಸಿಗುತ್ತದೆ . ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆಮತ್ತುಯಾವುದೇ ರೀತಿಯ ನಷ್ಟ ಆಗುವುದಿಲ್ಲ ಎಂದು ತಮ್ಮ ಅನುಭವದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳಾದ ಮಾಡ್ರಳ್ಳಿ ಮಹದೇವಪ್ಪ, ಕುಂದುಕೆರೆ ಸಂಪತ್ತು ,ಹೊಸೂರು ಮಹೇಶ್, ಸೇರಿದಂತೆ ಇನ್ನು ಮುಂತಾದವರು ಇದ್ದರು..

ವರದಿ:ಸದಾನಂದ ಗುಂಡ್ಲಪೇಟೆ

error: