ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದಲ್ಲಿ ನಡೆದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಲಿಂಗ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಕಾರ್ಯಕ್ರಮವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು ಮತ್ತು ತಾಲೂಕಿನ ಮಠಾಧಿಪತಿಗಳು ಒಟ್ಟಾಗಿ ಸೇರಿ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ನಂತರ ಮಾತನಾಡಿದ ಶ್ರೀಗಳು ಭಗವಂತನಿಗೆ ಭಕ್ತಿಯನ್ನು ಸಮರ್ಪಣೆ ಮಾಡಿಕೊಳ್ಳುವುದಕ್ಕೆ ದೇವಸ್ಥಾನಗಳು ಒಂದು ತಾನವಾಗಿದೆ .ಹಾಗೆ ಮನುಷ್ಯನಿಗೆ ನಂಬಿಕೆ ಇರುವುದು ದೇವಸ್ಥಾನದಲ್ಲಿ ದೇವರಿದ್ದಾನೆ ಎಂದು ಅದನ್ನು ನಾವು ಮತ್ತು ನೀವೆಲ್ಲರೂ ನಂಬಬೇಕು ಮತ್ತು ಒಳ್ಳೆಯ ಪವಿತ್ರವಾದ ಮನಸ್ಸು ಇಟ್ಟುಕೊಂಡು ದೇವಸ್ಥಾನಗಳಿಗೆ ಹೋದರೆ ಅಲ್ಲಿ ಭಗವಂತನನ್ನು ಕಾಣಬಹುದು ಎಂದರು. ಈ ಸಂದರ್ಭದಲ್ಲಿ ಶ್ರೀ ಸಿದ್ದ ಮಲ್ಲಪ್ಪ ಸ್ವಾಮಿಗಳು ವೀರ ಸಿಂಹಾಸನ ಶೀಲಾ ಮಠ ಸೋಮ ಹಳ್ಳಿ, ಶ್ರೀ ತೋಟದಾರ ಸ್ವಾಮಿಗಳು ವಿರಕ್ತಮಠ ಮಾದಾಪಟ್ಟಣ, ಶ್ರೀ ಸರ್ಪಭೂಷಣ ಸ್ವಾಮಿಗಳು ವಿರಕ್ತಮಠ ಹರವೆ, ಚನ್ನವೀರ ಸ್ವಾಮಿಗಳು ಶಿವಪೂಜೆ ಮಠ ಚಿಕ್ಕತುಪ್ಪೂರು, ಚೆನ್ನ ಬಸವ ಸ್ವಾಮಿಗಳು ಶ್ರೀಮಠ ನವಿಲೂರು ಮತ್ತು ಚುಂಚನಹಳ್ಳಿ, ಶ್ರೀ ನಂಜುAಡಸ್ವಾಮಿಗಳು ಶ್ರೀಮಠ ಬೋಗಯ್ಯನಹುಂಡಿ ,ಮತ್ತು ಚೆನ್ನಬಸವ ಸ್ವಾಮಿಗಳು ಶ್ರೀಮಠ ಕೊಡಗಾಪುರ, ಮತ್ತು ಮುಖ್ಯ ಅತಿಥಿಗಳಾಗಿ ಶಾಸಕರಾದ ಸಿ ಎಸ್ ನಿರಂಜನ್ ಕುಮಾರ್ ,ಹಾಗೂ ಯುವ ಮುಖಂಡ ಎಚ್ ಎಂ ಗಣೇಶ್ ಪ್ರಸಾದ್, ಹಾಗೂ ಮುಖ್ಯ ಭಾಷಣಕಾರರಾದ ವಸಂತ್ ಕುಮಾರ್ , ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಶ್ರೇಯೋಭಿವೃದ್ಧಿ ಸಮಿತಿ ರಂಗೂಪುರ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ: ಸದಾನಂದ ಕನ್ನೆಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.