September 16, 2024

Bhavana Tv

Its Your Channel

ಪುತ್ತನಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

ಗುಂಡ್ಲುಪೇಟೆ:- ಪುತ್ತನಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಕಡಬೂರು ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು

ಗುAಡ್ಲುಪೇಟೆ ತಾಲೂಕಿನ ಪುತ್ತನಪುರ ಗ್ರಾಮದಲ್ಲಿ ಗ್ರಾಮದ 20ಕ್ಕೂ ಹೆಚ್ಚು ಜನ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ರವರ ನೇತೃತ್ವದಲ್ಲಿ ಸೇರ್ಪಡೆಗೊಂಡರು. ನಂತರ ಮಾತನಾಡಿದ ಮಂಜುನಾಥ್ ರಾಜ್ಯದಲ್ಲಿ ನಮ್ಮ ಕುಮಾರಸ್ವಾಮಿ ಸರ್ಕಾರ ಬಂದರೆ ಗ್ರಾಮ ಪಂಚಾಯಿತಿಗೊAದು ಹೈಟೆಕ್ ಶಾಲೆ, ಹೈಟೆಕ್ ಆಸ್ಪತ್ರೆ, 5000 ರೂ ವೃದ್ಧವೇತನ, ರೈತರ ಮಗನ ಮದುವೆಯಾದ ಹೆಣ್ಣು ಮಕ್ಕಳಿಗೆ 2 ಲಕ್ಷ ರೂ, ರೈತರ ಸಾಲ ಮನ್ನಾ, 10 ಎಕರೆಯವರೆಗೆ ಎಕರೆಗೆ ರೂ.10,000 , ಅಂಗವಿಕಲರಿಗೆ, ಅವಿವಹಿತಾ ಮಹಿಳೆಯರಿಗೆ, ವಿಧವೆಯರಿಗೆ, ತಲಾ 2500 ರೂ,ಪ್ರತಿಯೊಬ್ಬರ ಮನೆಗೂ ಉಚಿತ ವಿದ್ಯುತ್ ಹೀಗೆ ಹತ್ತು ಹಲವು ಯೋಜನೆಗಳು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಪುತ್ತನಪುರ ಗ್ರಾಮದ ಯುವಕರಾದ ದೊರೆಸ್ವಾಮಿ, ಜಯಂತ್, ಭಾಸ್ಕರ್, ರಾಜು, ಮಹದೇವ್, ಪ್ರತಾಪ್, ಕೆಂಪರಾಜು, ಗಜೇಂದ್ರ, ರಾಜು, ಜೀವನ್, ವಿನೋದ್, ಶ್ರೀಧರ್, ಉಮೇಶ್, ರಾಮ್, ಜಗದೀಶ್ ಹಾಗೂ ಇನ್ನೂ ಹಲವರು ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವರದಿ:- ಸದಾನಂದ ಕನ್ನೆಗಾಲ

error: