December 20, 2024

Bhavana Tv

Its Your Channel

ಪುರಸಭೆ ಮೂಲಕ ಆಶ್ರಯ ಯೋಜನೆ ಅಡಿಯಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನಗಳಲ್ಲಿ ಯಾವುದೇ ತರಹದ ಅಕ್ರಮ ನಡೆದಿಲ್ಲ, ಪುರಸಭಾ ಅಧ್ಯಕ್ಷ ಪಿ. ಗಿರೀಶ್ ಸ್ಪಷ್ಟನೆ.

ಗುಂಡ್ಲುಪೇಟೆ :- ಪುರಸಭೆ ಮೂಲಕ ಅಶ್ರಯ ಯೋಜನೆ ಅಡಿಯಲ್ಲಿ ಹಂಚಿಕೆ ಮಾಡಲಾಗಿರುವ ನಿವೇಶನ ಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಸ್ಪಷ್ಟನೆ ನೀಡಿದ್ದಾರೆ ,
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಆಡಳಿತ ಅವಧಿಯಲ್ಲಿ ಅಶ್ರಯ ಸಮಿತಿ ಅಧ್ಯಕ್ಷ ರಾದ ಕ್ಷೇತ್ರದ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ಹಾಗೂ ಅಶ್ರಯ ಸಮಿತಿ ಸದಸ್ಯರು ಗಳನ್ನು ಒಳಗೊಂಡAತೆ ಪಟ್ಟಣದ 1058 ಮಂದಿ ನಿರ್ಗತಿಕ ಫಲಾನುಭವಿಗಳಿಗೆ ಪಕ್ಷಾತೀತವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ .
ಅದರೆ ಕೆಲ ಕಾಂಗ್ರೆಸ್ ಪಕ್ಷದ ಪುರಸಭಾ ಸದಸ್ಯರು ವಿನಾಕಾರಣ ನಿವೇಶನ ಹಂಚಿಕೆ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ ,
ಅದರೆ ಅರೋಪ ಮಾಡುತ್ತಿರುವ ಪುರಸಭಾ ಸದಸ್ಯರು ತಮ್ಮ ಕುಟುಂಬ ಸದಸ್ಯರು ಗಳಿಗೆ ಹಾಗೂ ನಿವೇಶನ ಕೊಡಿಸುವುದಾಗಿ ಫಲಾನುಭವಿಗಳಿಂದ ಹಣಕಾಸು ಪಡೆದುಕೊಂಡಿದ್ದು ಅವರಿಗೆ ಈ ಸಾಲಿನಲ್ಲಿ ನಿವೇಶನ ಮಂಜೂರು ಮಾಡಿಲ್ಲ ಆದಕಾರಣ ನಮ್ಮ ವಿರುದ್ದ ವಿನಾಕಾರಣ ಸುಳ್ಳು ಅರೋಪ ಮಾಡುತ್ತಿದ್ದಾರೆ.
ಆರೋಪ ಮಾಡುತ್ತಿರುವ ಪುರಸಭಾ ಸದಸ್ಯರುಗಳ ಬಳಿ ಅಕ್ರಮ ನಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ, ಇಲ್ಲವಾದಲ್ಲಿ ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲ್ ಹಾಕಿದರು ,
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರು ಗಳಾದ ನಾಗೇಶ್ , ಕುಮಾರ್ .ಪಟ್ಟಾಬಿ , ಪಿ.ಶಶಿಧರ್ , ಬಸವರಾಜು,ಸೇರಿದಂತೆ ಸರ್ದಾರ್ .ನವೀದ್ , ಹಲವಾರು ಸದಸ್ಯರುಗಳು ಇದ್ದರು.

ವರದಿ: ಸದಾನಂದ ಕನ್ನೇಗಾಲ

error: