ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬೇಗೂರು ಹೋಬಳಿಯ ಹೀರಿಕಾಟಿ ಗ್ರಾಮದಲ್ಲಿ ರೈತರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರು ತಮ್ಮ ಬದುಕು ಹಸನು ಮಾಡಿಕೊಳ್ಳಲು ಕುಮಾರಸ್ವಾಮಿ ಸರ್ಕಾರದಿಂದ ಮಾತ್ರ ಸಾಧ್ಯ, ಸದಾ ಕುಮಾರ ಸ್ವಾಮಿ ರವರು ಸರ್ವರಿಗೂ ಸಮಾನವಾಗಿ ಯೋಜನೆಗಳು ತಲುಪಬೇಕೆಂದು ಶತ ಪ್ರಯತ್ನ ಮಾಡುತ್ತಿದ್ದಾರೆ, ಈ ಬಾರಿ ಜೆಡಿಎಸ್ ಸ್ವಂತ ಬಲ ದಿಂದ ಅಧಿಕಾರಕ್ಕೆ ಬರಬೇಕೆಂದು ಪಂಚರತ್ನ ಯಾತ್ರೆಯ ಮೂಲಕ ರಾಜ್ಯಾದ್ಯಂತ ಸಂಚಲನವನ್ನು ಉಂಟು ಮಾಡಿದ್ದಾರೆ, ಎಲ್ಲಾ ಕಡೆ ಅಭೂತಪೂರ್ವದ ಒಲವು ಜೆಡಿಎಸ್ ನ ಮೇಲೆ ಈ ಬಾರಿ ಇದೆ, ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡಂಕಿ ದಾಟಲ್ಲ , ಕುಮಾರಸ್ವಾಮಿ ನೇತೃತ್ವದ ಸರ್ಕಾರ ಈ ಬಾರಿ ರಚನೆಯಾಗಲಿದೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ರೈತರ ಸಾಲ ಮನ್ನಾ ಆಗುತ್ತದೆ, ರೈತರ ವ್ಯವಸಾಯಕ್ಕೆ ಎಕರೆಗೆ 10,000 ವ್ಯವಸಾಯ ಪ್ರೋತ್ಸಾಹಧನ ದೊರಕುತ್ತದೆ, ವೃದ್ಧಪ್ಯಾವೇತನ 5,000ಕ್ಕೆ ಹೆಚ್ಚಳವಾಗುತ್ತದೆ. ಮಹಿಳಾ ಸಂಘಗಳ ಸಾಲ ಮನ್ನವಾಗುತ್ತದೆ, ಅಂಗವಿಕಲರಿಗೆ ,ಅವಿವಾಹಿತ ಮಹಿಳೆಯರಿಗೆ , 2,500 ಸಹಾಯಧನ ನಮ್ಮ ಸರ್ಕಾರ ಬಂದರೆ ನೀಡಲಾಗುತ್ತದೆ. ವಾರ್ಷಿಕ 10 ಗ್ಯಾಸ್ ಸಿಲಿಂಡರಿಗೆ ಪ್ರೋತ್ಸಾಹ ಧನ, ಹೀಗೆ ಹತ್ತು ಹಲವು ಯೋಜನೆಗಳು ಜಾರಿಗೆ ಬರಲು ಕುಮಾರಸ್ವಾಮಿ ಸರ್ಕಾರದಿಂದ ಮಾತ್ರ ಸಾಧ್ಯ, ಜೆಡಿಎಸ್ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದರೆ ತಾಲೂಕಿನ 33,000 ಕುಟುಂಬಗಳಿಗೆ ಉಚಿತ ವಿದ್ಯುತ್ತನ್ನು ವೈಯಕ್ತಿಕವಾಗಿ ಸ್ವಂತ ಖರ್ಚಿನಿಂದ ಒದಗಿಸುತ್ತೇನೆ ಎಂದು ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಮತದಾರರಲ್ಲಿ ಮನವಿ ಮಾಡಿಕೊಂಡರು.
ಸುಮಾರು 120ಕ್ಕೂ ಅಧಿಕ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಪಕ್ಷಗಳನ್ನು ತೊರೆದು ಪಟಾಕಿ ಸಿಡಿಸಿ ಮೆರವಣಿಗೆಯೊಂದಿಗೆ ಸಂಭ್ರಮಿಸಿ ಕಡಬೂರು ಮಂಜುನಾಥ್ ನಾಯಕತ್ವಕ್ಕೆ ಬೆಂಬಲ ಸೂಚಿಸಿ ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು.
ಹೀರಿಕಾಟಿ ಗ್ರಾಮದ ಮುಖಂಡರಾದ ಚಿಕ್ಕಣ್ಣ, ನಾಗರಾಜು, ಮಹೇಶ್, ಮಂಜುನಾಥ್, ನಾಗರಾಜು, ದೊಡ್ಡಸ್ವಾಮಿ, ಸಿದ್ದರಾಜು, ಸ್ವಾಮಿ, ಪುಟ್ಟರಾಜು, ಅನಿಲ್, ಅರುಣ್, ಚಂದು, ಸುದೀ, ಯೋಗೇಶ್, ನವೀನ್, ಕೃಷ್ಣ, ನೀಲಕಂಠ, ಕಿಟ್ಟಿ ಹಾಗೂ ಇತರರು ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ಮುಖಂಡರುಗಳಾದ ಹುಲಸಗುಂದಿ ಮುತ್ತಣ್ಣ, ಬಾಚಳ್ಳಿ ಮಣಿ, ಹೊಸೂರು ಪ್ರದೀಪ್, ಕಂದೆಗಾಲ ಪ್ರಸಾದ್, ಇನ್ನು ಮುಂತಾದವರು ಉಪಸ್ಥಿತರಿದ್ದರು
ವರದಿ: ಸದಾನಂದ ಕನ್ನೇಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.