
ಗುಂಡ್ಲುಪೇಟೆ; ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಮಲೆ ಮಹದೇಶ್ವರ ಜಾತ್ರೆಯಲ್ಲಿ ಶ್ರೀ ಮಹದೇಶ್ವರ ರಥೋತ್ಸವ ಅದ್ದೂರಿಯಾಗಿ ಬಹಳ ವಿಜೃಂಭಣೆಯಿAದ ನಡೆಯಿತು.
ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಭಕ್ತಾದಿಗಳು ಮತ್ತು ಗ್ರಾಮಸ್ಥರು ಶ್ರೀಮಲೆ ಮಹದೇಶ್ವರ ರಥಕ್ಕೆ ಈಡುಗಾಯಿ ಹೊಡೆಯುವುದರ ಮುಖಾಂತರ ದೇವರ ಕೃಪೆಗೆ ಪಾತ್ರರಾದರು. ಬಂದAತಹ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಶ್ರೀ ಮಲೆ ಮಹದೇಶ್ವರ ಉತ್ಸವ ಮೂರ್ತಿಯನ್ನು ಗ್ರಾಮದ ಬೀದಿಗಳಲ್ಲಿ ವಾದ್ಯಗಳ ಮೂಲಕ,ನಂದಿ ಕಂಬ, ವೀರಗಾಸೆ, ಸತ್ತಿಗೆ ಸುರಿಪಣಿ, ಮತ್ತು ಕಣ್ಣ ಕಣ್ಣಡಿ, ಹಾಲರುವೆ ಜೊತೆಗೂಡಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ತಾಲೂಕಿನಾದ್ಯಂತ ಭಕ್ತಾದಿಗಳು ಆಗಮಿಸಿದ್ದರು ಮತ್ತು ಗ್ರಾಮದ ಮುಖಂಡರುಗಳು ಯುವಕರು ಗ್ರಾಮಸ್ಥರುಗಳು ಇದ್ದರು
ವರದಿ: ಸದಾನಂದ ಕನ್ನೇಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.