May 4, 2024

Bhavana Tv

Its Your Channel

ಅರ್ಹರ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ :ತಹಶೀಲ್ದಾರ್ ಡಿ.ಎ.ದಿವಾಕರ್

ಬಾಗೇಪಲ್ಲಿ:-ಹಿರಿಯ ನಾಗರಿಕರು ಪಿಂಚಣಿಗಾಗಿ ತಾಲ್ಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಅವರ ಮನೆ ಬಾಗಿಲಿಗೆ ಅಧಿಕಾರಿಗಳು ಖುದ್ದು ಭೇಟಿ ನೀಡಿ, ಅರ್ಜಿ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡುವ ವಿನೂತನ ಯೋಜನೆಯನ್ನು ಜಿಲ್ಲಾಡಳಿತ ಜಾರಿ ಗೊಳಿಸಿದ್ದು ಈ ಸೌಲಭ್ಯವನ್ನು ಎಲ್ಲರೂ ಕಾಲಮಿತಿಯೊಳಗೆ ಅಂದರೆ ಆಗಸ್ಟ್ ೧೨ ಒಳಗೆ ಸದುಪಯೋಗ ಪಡಿಸಿಕೊಂಡು ಪಿಂಚಣಿ ಮುಕ್ತ ತಾಲ್ಲೂಕನ್ನಾಗಿ ಮಾಡಲು ಬಾಗೇಪಲ್ಲಿ ಪಟ್ಟಣದ ತಹಶಿಲ್ದಾರ್ ಡಿ. ಎ.ದಿವಾಕರ್ ರವರು ಮನವಿ ಮಾಡಿದರು.

ಬಾಗೇಪಲ್ಲಿ ಪಟ್ಟಣದ ತಹಶಿಲ್ದಾರ್ ಸಭಾಂಗಣದಲ್ಲಿ ಶನಿವಾರ ಮಾನ್ಯ ಜಿಲ್ಲಾಡಳಿತ ಆದೇಶ ಮೇರೆಗೆ ಪಿಂಚಣಿ ಅದಾಲತ್ ಆಂದೋಲನದ ಹಾಗೂ ಜನರಿಗೆ ಮಾಹಿತಿಯನ್ನು ಪತ್ರಿಕಾಗೋಷ್ಠಿ ಸಭೆಯಲ್ಲಿ ಅವರು ಮಾತನಾಡಿದರು.

ಪಿಂಚಣಿ ಅದಾಲತ್ ನಿರಂತರ ನಡೆಸುವ ಮೂಲಕ ಸಂಕಷ್ಟದಲ್ಲಿರುವAತಹ ಅಂಗವಿಕಲರು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ಮೇಲೆ ಸೌಲಭ್ಯ ದೊರಕಿಸುವಂತೆ
ಅಧಿಕಾರಿಗಳಿಗೆ ಅವರು ಸೂಚಿಸಿದ್ದು ತಾಲ್ಲೂಕು ಆಡಳಿತ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರ ಕೇಳುವ ದಾಖಲಾತಿಗಳನ್ನು ನೀಡಿ ಹಿರಿಯ ನಾಗರಿಕರು ಸೌಲಭ್ಯವನ್ನು ಪಡೆದು ಪಿಂಚಣಿ ಮುಕ್ತ ತಾಲ್ಲೂಕನ್ನಾಗಿ ಮಾಡಲು ಪತ್ರಕರ್ತರು ತಮ್ಮ ಪತ್ರಿಕೆಯ ಮೂಲಕ ವ್ಯಾಪಕ ಪ್ರಚಾರ ಮಾಡಿ ಪಿಂಚಣಿ ಮುಕ್ತ ತಾಲ್ಲೂಕನ್ನಾಗಿ ಮಾಡಲು ಮನವಿ ಮಾಡಿದರು.

ಸೇವಾ ಮಿತ್ರ ಯೋಜನೆಯಡಿ ಪಿಂಚಣಿ ಸವಲತ್ತು ಪಡೆಯಲು ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿಯನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು.

ಅಂಗವಿಕಲ ವೇತನಕ್ಕಾಗಿ ಅಂಗವಿಕಲ ಪ್ರಮಾಣ ಪತ್ರ, ಮನಸ್ವಿನಿ ಸೌಲಭ್ಯಕ್ಕಾಗಿ ಅವಿವಾಹಿತರು ಅಥವಾ ವಿಚ್ಛೇದಿತರು ಎಂಬುದಕ್ಕೆ ಸ್ವಯಂ ಘೋಷಿತ ಪ್ರಮಾಣ ಪತ್ರ ಹಾಗೂ ಮೈತ್ರಿ ಯೋಜನೆಗಾಗಿ ನೋಂದಾಯಿತ ಸಂಸ್ಥೆಯಿAದ ಪ್ರಮಾಣ ಪತ್ರವನ್ನು ಹೆಚ್ಚುವರಿಯಾಗಿ ಸಲ್ಲಿಸಬೇಕಾಗುತ್ತದೆ. ಜತೆಗೆ ಗ್ರಾಮ ಲೆಕ್ಕಾಧಿಕಾರಿಯಿಂದ ವಾಸಸ್ಥಳ ಪ್ರಮಾಣ ಪತ್ರ ಮತ್ತು ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನೂ ಒದಗಿಸಬೇಕು ಎಂದು ಹೇಳಿದರು.

ವರದಿ : ರಾ.ನ.ಗೋಪಾಲ ರೆಡ್ಡಿ ಬಾಗೇಪಲ್ಲಿ

error: