ಹೊನ್ನಾವರ ತಾಲೂಕಾ ಮಂಕಿ ಗ್ರಾಮದ ದೇವರಗದ್ದೆಯ ಯುವಕರು ಸೇರಿ “ಕೋಚಾಪು” ಕ್ರಿಕೆಟ್ ಮೈದಾನದಲ್ಲಿ ಎರಡು ದಿವಸಗಳ ಉ.ಕ. ಜಿಲ್ಲಾಮಟ್ಟದ ನಾಮಧಾರಿ ಸಮಾಜದವರ ಕ್ರಿಕೆಟ್ ಪಂದ್ಯಾವಳಿಯನ್ನು ರ‍್ಪಡಿಸಿದ್ದರು.
ಮಾಜಿ ಸೈನಿಕ ಭಾರತ ಸೇವಾದಳದ ತಾಲೂಕಾ ಅಧ್ಯಕ್ಷರಾದ ವಾಮನ್ ಎಸ್ ನಾಯ್ಕ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಈ ಪಂದ್ಯಾವಳಿಯನ್ನು ಯುವ ಮುಖಂಡ ಭಾಸ್ಕರ ಸುಬ್ರಾಯ ನಾಯ್ಕರ ಮುಂದಾಳತ್ವದಲ್ಲಿ ವೆಂಕಟೇಶ ನಾಯ್ಕರ ಅಧ್ಯಕ್ಷತೆಯಲ್ಲಿ ದೇವರಗದ್ದೆ ಯುವಕರು ಸೇರಿ ಹೊನ್ನಾವರ ತಾಲೂಕಿನಲ್ಲಿ ಪ್ರಥಮವಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿದ್ದರು.
ಜಿಲ್ಲೆಯಿಂದ ಸುಮಾರು ೧೬ ತಂಡಗಳು ಭಾಗವಹಿಸಿ ಕೊನೆಯಲ್ಲಿ ಮಂಕಿ ಹಾಗೂ ಕುಮಟಾ ತಂಡದವರು ಫೈನಲ್ ಗೆ ಬಂದು, ಮಂಕಿ ತಂಡ ವಿಜಯಶಾಲಿಯಾಗಿ ಟ್ರೋಪಿ ಗೆದ್ದುಕೊಂಡಿತ್ತು. ನಂತರ ಮುಕ್ತಾಯ ಸಮಾರಂಭದಲ್ಲಿ ಮಾಜಿ ಸೈನಿಕ ವಾಮನ್ ನಾಯ್ಕ ಮಂಕಿ ತಂಡಕ್ಕೆ ಟ್ರೋಪಿಯನ್ನು ನೀಡಿ, ಪ್ರಥಮ ಬಹುಮಾನ ಮೊತ್ತ ರೂ.೩೦,೦೦೦/- ರೂಪಾಯಿಗಳನ್ನು ನೀಡಿದರು. ಏರಡನೇ ಬಹುಮಾನ ರೂ. ೨೦,೦೦೦/- ಬಹುಮಾನ ಹಾಗೂ ಟ್ರೋಪಿಯನ್ನು ಕುಮಟಾ ತಂಡಕ್ಕೆ ವಿತರಿಸಲಾಯಿತು.
ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯೆಯಾದ ಶ್ರೀಮತಿ ಪರ‍್ವತಿ ನಾಯ್ಕ , ಗ್ರಾ.ಪಂ. ಸದಸ್ಯರಾದ ಸಿಧ್ದಿಕ್ಕಿ (Siಜಜiಞಞi), ಅನಂತವಾಡಿ ಗ್ರಾ.ಪಂ. ಸದಸ್ಯ ಮೋಹನ್ ನಾಯ್ಕ , ಮಾಜಿ ಗ್ರಾ. ಪಂ. ಸದಸ್ಯ ಗೋವಿಂದ ನಾಯ್ಕ , ಮಂಕಿ ಗ್ರಾಮ ಲೆಕ್ಕಾಧಿಕಾರಿ ಕೇಶವ ನಾಯ್ಕ , ಊರ ಗಣ್ಯರು ದಾನಿಗಳಾದ ಮೋಹನ್ ನಾಯ್ಕ , ಗಂಗಾಧರ ನಾಯ್ಕ , ನಾಗೇಂದ್ರ ನಾಯ್ಕ , ಮಂಜುನಾಥ ನಾಯ್ಕ , ದೇವೇಂದ್ರ ನಾಯ್ಕ , ದೊಡ್ಡಯ್ಯ ನಾಯ್ಕ , ಹಾಗೂ ಬಳ್ಕೂರಿನ ಗಂಗಾಧರ ಜಿ ನಾಯ್ಕ , ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.