November 9, 2024

Bhavana Tv

Its Your Channel

ಅರಣ್ಯವಾಸಿಗಳ ಸಮಸ್ಯೆಗಳ ‘ಮಾಸಿಕ ಸ್ಪಂದನ’ ಕಾರ್ಯಕ್ರಮ

ಭಟ್ಕಳ: ಸರ್ವೋಚ್ಛ ಮತ್ತು ಉಚ್ಛ ನ್ಯಾಯಾಲಯದಲ್ಲಿ ವಾಸ್ತವ್ಯ ಮತ್ತು ಸಾಗುವಳಿಗಾಗಿ ಅವಲಂಬಿತವಾಗಿರುವ ಅರಣ್ಯವಾಸಿಗಳ ಪರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸ್ಪಷ್ಟ ನಿಲುವನ್ನು ಪ್ರಕಟಿಸದೇ ಇರುವುದು ಖೇದಕರ. ಈ ದಿಶೆಯಲ್ಲಿ ಶೀಘ್ರ ಪ್ರಮಾಣಪತ್ರ ಸಲ್ಲಿಸುವುದರೊಂದಿಗೆ ಅರಣ್ಯವಾಸಿಗಳ ಪರವಾದ ನಿಲುವನ್ನು ಪ್ರಕಟಿಸಬೇಕೆಂದು ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಅವರು ಭಟ್ಕಳದ ಖಾಸಗಿ ಹೋಟೇಲ್ ಸಭಾಂಗಣದಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ‘ಮಾಸಿಕ ಸ್ಪಂದನ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಪರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುವ ನಿಲುವು ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿರುವುದರಿಂದ ಸರ್ಕಾರದ ಸ್ಪಷ್ಟ ನಿಲುವು ಅತೀ ಅವಶ್ಯವಾಗಿದ್ದು ಇರುತ್ತದೆ. ಅಲ್ಲದೇ, ಸರ್ಕಾರ ಅರಣ್ಯವಾಸಿಗಳ ಪರವಾಗಿ ಬದಲೀ ಪರ್ಯಾಯ ವ್ಯವಸ್ಥೆ ಅಥವಾ ಹಕ್ಕಿಗೆ ಸಂಬAಧಿಸಿ ಸ್ಪಷ್ಟ ಅಭಿಪ್ರಾಯ ನ್ಯಾಯಾಲಯಕ್ಕೆ ವ್ಯಕ್ತಪಡಿಸಲು ಸರ್ಕಾರ ವಿಫಲವಾಗಬಾರದೆಂದು ಆಗ್ರಹಿಸಿದ್ದಾರೆ.

ಸರ್ಕಾರ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ ಶೇ. ೯೦ ರಷ್ಟು ಅರ್ಜಿಗಳು ಮಂಜೂರಿಗೆ ಮಾನ್ಯತೆ ಕಳೆದುಕೊಂಡಾಗಲೂ ಸಹಿತ ಸರ್ಕಾರ ಇಂದಿಗೂ ಅರಣ್ಯವಾಸಿಗಳ ಮಂಜೂರಿ ಹಕ್ಕಿಗೆ ಸಂಬAಧಿಸಿ ಸ್ಪಷ್ಟತೆ ವ್ಯಕ್ತಪಡಿಸದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ವಿಷಾದಿಸಿದರು.

ಸಮಸ್ಯೆಗಳ ಸ್ಪಂದನ ಕಾರ್ಯಕ್ರಮದಲ್ಲಿ ಅತಿಕ್ರಮಣದಾರರಿಗಾಗುವ ದೌರ್ಜನ್ಯ, ಮಂಜೂರಿಗೆ ಸಂಬAಧಿಸಿ ಕಾಯಿದೆಯ ಅವಲೋಕನ, ಅರಣ್ಯ ಕುಂಬ್ರಿ ಬೇಸಾಯಗಾರರ ಸಮಸ್ಯೆ, ಅರ್ಜಿ ತಿರಸ್ಕಾರದ ಮಂಜೂರಿಗೆ ಸಂಬAಧಿಸಿ ಕಾನೂನಾತ್ಮಕ ಅವಲೋಕನ ಕುರಿತು ಚರ್ಚಿಸಲಾಯಿತು.

ಜಿಲ್ಲೆಯಲ್ಲಿ ವಾಸ್ತವ್ಯ ಮಾಡುತ್ತಿರುವ ಜನ ಸಂಖ್ಯೆಯಲ್ಲಿ ೧/೩ ರಷ್ಟು ಅರಣ್ಯವಾಸಿಗಳೇ ವಾಸ್ತವ್ಯ ಮತ್ತು ಸಾಗುವಳಿಗೆ ಅವಲಂಬಿತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ಅಸ್ಪಷ್ಟ ನೀತಿಯಿಂದ ನ್ಯಾಯಾಲಯದಿಂದ ವ್ಯತಿರಿಕ್ತವಾದ ಆದೇಶ ಜಾರಿಯಾದಲ್ಲಿ ಜಿಲ್ಲೆಯು ನಿರಾಶ್ರಿತರ ಜಿಲ್ಲೆಯಾಗಿ ಪರಿವರ್ತನೆಗೊಳ್ಳುವುದು ಎಂದು ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ದೇವರಾಜ ಗೊಂಡ, ರಿಜ್ವಾನ ಸಾಬ, ಚಂದ್ರು ನಾಯ್ಕ, ನಾಗರಾಜ ನಾಯ್ಕ, ಖಯ್ಯೂಮ್ ಕೋಲಾ, ಪಾಂಡು ನಾಯ್ಕ ಬೆಳಕೆ, ರಾಜು ನಾಯ್ಕ, ಶಿವು ಮರಾಠಿ, ರಾಮ ನಾಯ್ಕ, ಮಂಜು ಗೊಂಡ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ವಾಗತ ಈಶ್ವರ ನಾಯ್ಕ ಮಾಡಿದರೆ ಚಂದ್ರಕಾAತ ಗೊಂಡ ವಂದಿಸಿದರು.

error: