October 4, 2024

Bhavana Tv

Its Your Channel

ಕೃಷಿವಲಯ ಸೊರಗುತ್ತಿದ್ದು ಕೃಷಿಕರು ಬೇಸಾಯದಿಂದ ವಿಮುಖರಾಗುತ್ತಿರುವದು ಉತ್ತಮ ಬೆಳವಣಿಗೆಯಲ್ಲ -ಸಿಂಡಿಕೇಟ್ ಬ್ಯಾಂಕನ ಕೃಷಿ ಅಧಿಕಾರಿ ಮಣಿವಣ್ಣನ

ಅವರು ಮಂಗಳವಾರ ಸಿಂಡಿಕೇಟ್ ಬ್ಯಾಂಕ್ ವಲಯ ಕಛೇರಿ ಮಣಿಪಾಲ್ ದಲ್ಲಿ ನಡೆದ ಗ್ರಾಮೀಣ ಕೃಷಿ ವಿಸ್ತರಾಣಾ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಆರಂಭದಿAದಲೂ ಸಿಂಡಿಕೇಟ್ ಬ್ಯಾಂಕ್ ಕೃಷಿಕರು ಮತ್ತು ಸಣ್ಣ ಉದ್ದಿಮೆದಾರರ ಪರವಾಗಿದೆ. ಕೃಷಿ ಚಟುವಟಿಕೆ ಮತ್ತು ಅದರ ಸಂಭAದಿ ಚಟುವಟಿಕೆಗಳಿಗೆ ನಮ್ಮ ಬ್ಯಾಂಕ್ ಸಹಾಯ ಮಾಡಲು ಸದಾ ಸಿದ್ದವಿದೆ. ಪ್ರಧಾನಿ ನರೇಂದ್ರ ಮೋದಿಯವರು ೨೦೨೨ರಲ್ಲಿ ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಕನಸು ಕಂಡಿದ್ದು ಅದಕ್ಕೆ ಪೂರಕ ವಾತಾವರಣ ನಿರ್ಮಿಸಲು ಬ್ಯಾಂಕ ವಿವಿದ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು. ಮಣಿಪಾಲ ವಲಯದ ಜನರಲ್ ಮ್ಯಾನೆಜರ್ ಭಾಸ್ಕರ ಹಂಡೆ, ಬ್ಯಾಂಕಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ನಾಗೇಶ್ವರ ರಾವ್, ಡಿಐಸಿಯ ಜಾಯಿಂಟ್ ಡೈರೆಕ್ಟರ್ ಗೋಕುಲದಾಸ ನಾಯಕ, ಜನರಲ್ ಮ್ಯಾನೆಜರ್ ಎಸ್ ಎಸ್ ಹೆಗಡೆ, ಸಹಾಯಕ ತೋಟಗಾರಿಕೆ ನಿರ್ದೇಶಕ ಕೆಂಪೇಗೌಡ, ಅರ್ ಎಮ್ ರಾಮ ನಾಯ್ಕ, ಭಟ್ಕಳ ಶಾಖೆಯ ಸಿನಿಯರ್ ಮ್ಯಾನೆಜರ್ ಸಂಜೀತ್ ಸಿಂಗ್ ಮಾತನಾಡಿದರು.
ಈ ಸಂದರ್ಭದಲ್ಲಿ ಉದಯೋನ್ಮುಖ ಯಶಸ್ವಿ ಉದ್ಯಮಿ ಎಂದು ಭಟ್ಕಳದ ವರದಿಗಾರ ರಾಮಚಂದ್ರ ಕಿಣಿ ಹಾಗೂ ತಾಲೂಕಿನ ಕೋಣಾರದ ಉಮೇಶ ನಾಯ್ಕ ಸೇರಿದಂತೆ ಕೃಷಿ ಹಾಗೂ ಸಣ್ಣ ಉದ್ಯಮರಂಗದಲ್ಲಿ ಸಾಧನೆ ಮೆರದವರಿಗೆ ಸನ್ಮಾನಿಸಿ ಗೌರವಿಸಲಾಯಿತು

error: