October 5, 2024

Bhavana Tv

Its Your Channel

ಕರೋನಾ ವೈರಸ್ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ.ಡಾ|| ಕೃಷ್ಟಾ ಜಿ ಹೇಳಿದ್ದರು.

ಅವರು ತಾಲೂಕಾ ಆಸ್ಪತ್ರೆಯಲ್ಲಿ ಸೇರಿದ ಸಾರ್ವಜನಿಕರನ್ನು ಉದ್ದೇಶಿಸಿ ಕರೋನಾ ವೈರಸ್ ಕುರಿತು ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
“ಕರೋನಾ ವೈರಸ್ ನಮ್ಮ ದೇಶಕ್ಕೂ ಕಾಲಿಟ್ಟಿದ್ದು ನಾವೆಲ್ಲ ಎಚ್ಚರಿಕೆಯಿಂದ ಇರಬೇಕಾಗಿದೆ. ವಿದೇಶದಿಂದ ಬಂದವರೂ, ಮತ್ತು ಅವರ ಜೊತೆ ಸಂಪರ್ಕಕಕ್ಕೆ ಬಂದವರೂ ಜ್ವರ, ನೆಗಡಿ,ಕೆಮ್ಮು,ಬೇದಿ ಅಂತಹ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ಮತ್ತು ಸರಿಯಾದ ಮಾಹಿತಿಯನ್ನು ಆರೋಗ್ಯ ಸಿಬ್ಬಂದಿಗಳಿಗೆ ನೀಡುವುದು ಅವಶ್ಯವಾಗಿದೆ. ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತç ಅಡ್ಡ ಹಿಡಿಯುವ ಮೂಲಕ ಮತ್ತು ಕೈಯನ್ನು ಚೆನ್ನಾಗಿ ಆಗಾಗ ತೊಳೆದುಕೊಳ್ಳುವ ಮೂಲಕ ನೈರ್ಮಲ್ಯವನ್ನು ಅಭ್ಯಾಸ ಮಾಡಿಕೊಳ್ಳುವುದರ ಮೂಲಕ ಕರೋನಾ ವೈರಸ್ ಒಳಗಾಗದಂತೆ ಮುಂಜಾಗೃತವಹಿಸಬಹುದು. ಮಾಂಸ ಸರಿಯಾಗಿ ಬೇಯಿಸಿ ತಿನ್ನುವುದು.ತುರ್ತ ಅಗತ್ಯಗಳಿಲ್ಲದೆ ದೂರದ ಪ್ರಯಾಣವನ್ನು ರದ್ದುಗೊಳಿಸುವುದು ಉತ್ತಮ ಎಂದು ಹೇಳಿದ್ದರು. ಕಾರ್ಯಕ್ರಮದಲ್ಲಿ ತಜ್ಞವೈದ್ಯರುಗಳಾದ ಡಾ|| ಮಂಜುನಾಥ ಶೆಟ್ಟಿ ಡಾ|| ಶಿವಾನಂದ ಹೆಗಡೆ,ಡಾ|| ರಮೇಶ ಗೌಡ ಡಾ|| ಜೈಮಿನಿ,ಡಾ|| ಅನುರಾಧ ಡಾ|| ಗುರುದತ್ತ ಕುಲಕರ್ಣಿ, ಸೇರಿದಂತೆ ಆಸ್ಪತ್ರೆಯ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.ಆಪ್ತಸಮಾಲೋಚಕ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದ್ದರು.

error: