ತಾಲುಕಾ ಕಾನೂನು ಸೇವಾ ಸಮಿತಿ, ಹೊನ್ನಾವರ, ವಕೀಲರ ಸಂಘ, ಕಂದಾಯ ಇಲಾಖೆ, ತಹಶೀಲ್ದಾರರ ಇಲಾಖೆ, ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಮತ್ತು ವಿವಿಧ ಸಂಘ ಸಂಸ್ಥೆಗಳು ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರಥ ರಥ ಸಂಚಾರ ಹಾಗೂ ಜನತಾ ನ್ಯಾಯಾಲಯ ಅಭಿಯನಕ್ಕೆ ಚಾಲನೆ ನಿಡಲಾಯಿತು.
ಸಮಾರಂಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ್ ಪಿ. ಭಾಗವತ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶ್ರೀಮತಿ ಸನ್ಮತಿ ಎಸ್. ಆರ್. , ಅಧ್ಯಕ್ಷ ಕೆ.ವಿ. ನಾಯ್ಕ, ಸಹಾಯಕ ಸರ್ಕಾರಿ ಅಭಿಯೋಜಕ ಬದರಿನಾಥ ನಾಯರಿ ಕೆ., ಹೆಚ್ಚುವರಿ ಸರ್ಕಾರಿ ವಕೀಲ ಪ್ರಮೋದ ಎಲ್. ಭಟ್ಟ, ಕಾರ್ಯದರ್ಶಿ ಸೂರಜ್ ಜಿ. ನಾಯ್ಕ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉದ್ಘಾಟರಾಗಿ ಆಗಮಿಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಎಮ್ ವಿ. ಚೆನ್ನಕೇಶವ ರೆಡ್ಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು . ಸಮಾರಂಭದ ಅದ್ಯಕ್ಷರಾಗಿ ಕೆ.ವಿ.ನಾಯ್ಕ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಪಿ. ಭಾಗವತ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶ್ರೀಮತಿ ಸನ್ಮತಿ ಎಸ್.ಆರ್, ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿ ವೀರುಪಾಕ್ಷ ಗೌಡ ಪಾಟೀಲ್ ಅವರು ಅಥಿತಿಗಳಾಗಿ ಉಪಸ್ಥಿತರಿದ್ದರು. ಉಪನ್ಯಾಸಕ ಎಚ್ ಪಿ. ಎಸ್. ಸ್ಥಿತಿಗಾರ ಎಮ್. ಎಸ್. ಹೆಗಡೆ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು.
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ