May 19, 2024

Bhavana Tv

Its Your Channel

ಜೈ ಗಣೇಶ ಕ್ಷೌರಿಕ ಅಭಿವೃದ್ಧಿ ವತಿಯಿಂದ ಗ್ರಾಂ ಪ ಅಧ್ಯಕ್ಷರಿಗೆ ಮನವಿ

ಭಟ್ಕಳ:ತಾಲೂಕಿನ ಶಿರಾಲಿಯಲ್ಲಿ ಮೂಲ ಕ್ಷೌರಿಕದಾರರಿಗೆ ಪರ್ಯಾಯವಾಗಿ ಬಂಡವಾಳ ಶಾಹಿಗಳ ಸೆಲೂನಗಳು ಕ್ಷೌರ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿಕ್ಷೌರಿಕ ಸಮಾಜಕ್ಕೆಅನ್ಯಾಯವಾಗುತ್ತಿರುವ ಹಿನ್ನೆಲೆಯಲ್ಲಿ ಶಿರಾಲಿ ಜೈ ಗಣೇಶ ಕ್ಷೌರಿಕ ಅಭಿವೃದ್ಧಿ ವತಿಯಿಂದ ಗ್ರಾಂ ಪ ಅಧ್ಯಕ್ಷರಿಗೆ ಮನವಿಯನ್ನು ಸಲ್ಲಿಸಲಾಯಿತು.

ಮನವಿಯಲ್ಲಿ ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಸವಿತಾ ಸಮಾಜದಕ್ಷೌರಿಕ ವೃತ್ತಿದಾರರಾದ ನಮಗೆ ಕ್ಷೌರಿಕತೆಯೆ ಮೂಲ ಕಸುಬಾಗಿರುತ್ತದೆ. ನಾವು ಇದನ್ನೆ ನಂಬಿ ಬದುಕುತ್ತಿದ್ದೇವೆ. ನಾವು ಬೇರೆ ಕೆಲಸಗಳು ನಮಗೆ ತಿಳಿದಿಲ್ಲ. ಈ ಕಸುಬಿನಿಂದಲೆಜೀವನ ನಡೆಸುತ್ತಿದ್ದೇವೆ. ಹೀಗಿರುವಾಗಇತ್ತೀಚಿನ ದಿನಗಳಲ್ಲಿ ಬಂಡವಾಳ ಶಾಹಿಗಳು ಅಂದರೆ ಹಣ ಉಳ್ಳವರು ತಮ್ಮ ಹಣದದರ್ಪದಿಂದತಮಗೆಯಾವುದೆರೀತಿಯಕ್ಷೌರಿಕ ವೃತ್ತಿಯ ಬಗ್ಗೆ ಮಾಹಿತಿಇಲ್ಲದಿದ್ದರು ಲಕ್ಷಗಟ್ಟಲೆ ಹಣವನ್ನು ಹಾಕಿ ಹೈಟೆಕ್‌ಅಂಗಡಿಯನ್ನು ಮಾಡಿಹೊರರಾಜ್ಯದಿಂದಅಂದರೆ ಬಿಹಾರ್, ರಾಜಸ್ಥಾನದಿಂದ ಹಾಗೂ ದೂರದ ಬಾಂಗ್ಲಾದೇಶಿಗರನ್ನು ಬಾಡಿಗೆಆದಾರದ ಮೇಲೆ ಕಾರ್ಮಿಕರನ್ನಾಗಿ ಇಟ್ಟುಕೊಳ್ಳುತ್ತಾರೆ. ಇವರು ಅಶಿಕ್ಷಿತರು, ದುರ್ವೆಸನಿಗಳು, ಅತ್ಯಾಚಾರಿಗಳು, ದೇಶದೋಹಿ ಕೆಲಸ ಮಾಡುವಂತವರುಅಥವಾ ಭಯೋತ್ಪಾದಕರುಇರಬಹುದು.ಇಂತವರನ್ನುಇಟ್ಟುಕೊಂಡು ಹೈಟೆಕ್‌ಅಂಗಡಿಯನ್ನು ನಡೆಸುತ್ತಾರೆ
.ಈಗಾಗಲೇ ನಮ್ಮಲ್ಲಿ ನಮ್ಮಅವಶ್ಯಕತೆಗೆತಕ್ಕಂತೆ ಅಂUಡಿಗಳಿದ್ದವು.ಆದರೆ ಇತ್ತೀಚಿನ ದಿನಗಳಲ್ಲಿ ಈ ಬಂಡವಾಳ ಶಾಹಿಗಳ ಕಾರಣ ಅವುಗಳ ಸಂಖೈ ಹೆಚ್ಚಾಗುತ್ತಿರುವುದರಿಂದ ನಮ್ಮ ಸಮಾಜ ಭಾಂದವರುಜೀವನ ನಡೆಸುವುದು ಕಷ್ಟವಾಗಿದೆ.ಸ್ಥಳೀಯ ಆಡಳಿತ ಯಂತ್ರವಾದತಾವುಇದರ ಬಗ್ಗೆ ಸೂಕ್ತ ಕ್ರಮವನ್ನುಕೈಗೊಂಡು ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಶಿರಾಲಿ ಜೈಗಣೇಶಕ್ಷೌರಿಕಅಭಿವೃದ್ಧಿ ಸಂಘದಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: