December 22, 2024

Bhavana Tv

Its Your Channel

ರಂಗಮOಟಪದಲ್ಲಿ ಕುಸಿದು ಬಿದ್ದು ಇಹಲೋಕ ತೊರೆದ ಚಂದ್ರಹಾಸ ಹುಡಗೋಡ ಪ್ರಥಮ ಪುಣ್ಯಸ್ಮರಣೆ

ಹೊನ್ನಾವರ ; ಕಲಾಶ್ರಿ ಯಕ್ಷಮಿತ್ರಮಂಡಳಿ ಹಡಿನಬಾಳ ಇವರ ವತಿಯಿಂದ ಪಟ್ಟಣದ ನಾಮಧಾರಿ ವಿದ್ಯಾರ್ಥಿ ನಿಲಯದ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಉದ್ಘಾಟಿಸಿದರು.
ನಂತರ ಮಾತನಾಡಿ ಶರಾವತಿ ಎಡಬಲದಂಡೆಯಲ್ಲಿ ಹಲವು ಕಲಾವಿದರು ತಮ್ಮ ಜೀವನವನ್ನು ಯಕ್ಷಗಾನ ಕಲೆಗೆ ಮೀಸಲಾಗಿಟ್ಟಿದ್ದಾರೆ. ಯಕ್ಷಗಾನ ಕಲೆ ಮತ್ತು ಕಲಾವಿದರನ್ನು ಶಿಕ್ಷಣರಂಗಕ್ಕೆ ಪರಿಚಯಿಸಿ ಪಠ್ಯದಲ್ಲಿ ಅಳವಡಿಸಿದರೆ ಈ ಕಲೆ ಮತ್ತು ಕಲಾವಿದರ ನೆನಪನ್ನು ಮುಂದಿನ ಪೀಳಿಗಿಗೆ ಪರಿಚಯಿಸಬೇಕಿದೆ. ಆಗ ಮಾತ್ರ ಈ ಕಲೆ ಶಾಶ್ವತವಾಗಿರಲಿದೆ ಎಂದರು.
ಈ ಬಾರಿ ಕಲಾಶ್ರಿ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀಪಾದ ಹೆಗಡೆ ಹಡಿನಬಾಳ ಇವರಿಗೆ ಪ್ರಧಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಅಭಿನೇತ್ರಿ ಟ್ರಸ್ಟ ಅಧ್ಯಕ್ಷರಾದ ಶಂಕರ ಹೆಗಡೆ ನಿಲ್ಕೋಡ್ ಮಾತನಾಡಿ ಕಲಾವಿದರಿಗೆ ಸದಾ ಪೋತ್ಸಾಹದಾಯಕರಾಗಿದ್ದ ಹುಡಗೋಡರು ಯಕ್ಷಗಾನದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದರು ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ರಮೇಶ ಭಂಡಾರಿ ಮಾತನಾಡಿ ಯಕ್ಷಗಾನಕ್ಕೆ ತನ್ನದೆ ಆದ ಹಿರಿಮೆ ಇದೆ ಇದನ್ನು ಬೆಳೆಸುವ ಅಗತ್ಯವಿಲ್ಲ. ಅದರ ಹಿರಿಮೆಯಿಂದಲೇ ಬೆಳೆಯುತ್ತದೆ. ಆದರೆ ಕಲಾವಿದರಿಗೆ ಆಯಾ ಪಾತ್ರ ಮಾಡಲು ಯೊಗ್ಯತೆ ಇರಬೇಕು. ಅಂತಹ ಕಲಾವಿದರು ಹುಡಗೋಡರು. ೨ ವರ್ಷದ ಕಲಾ ಮೇಳ ಕಟ್ಟಿಕೊಂಡು ಯಶಸ್ಸುಗಳಿಸಿದವರು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತರಾದ ಜಿ.ಯು. ಭಟ್ ಮಾತನಾಡಿ ಕಲಾವಿದರಿಗೆ ಜಾತಿ ಭೇದವಿಲ್ಲ .ಆದರೆ ಸ್ಪರ್ಧೆ ನಡುವೆ ಹುಡಗೋಡ ಯಕ್ಷರಂಗದಲ್ಲಿ ಸಾಧನೆ ಮಾಡಿದರು. ಹಲವು ಕಲಾವಿದರನ್ನು ಪೋತ್ಸಾಹಿಸಿ ಬೆಳೆಸಿದ ಮೇರು ಕಲಾವಿದರಾಗಿದ್ದಾರೆ. ಅಂತಹ ಕಲಾವಿದರು ನಡೆದ ಹಾದಿಯಲ್ಲಿ ಅವರ ಕುಟುಂಬ ಸಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ವೇದಿಕೆಯಲ್ಲಿ ಪ್ರಕಾಶ ನಾಯ್ಕ, ರಾಜು ಭಂಡಾರಿ, ಆರ್.ಪಿ.ನಾಯ್ಕ, ಹರಿಯಪ್ಪ ನಾಯ್ಕ, ಭಾಸ್ಕರ ನಾಯ್ಕ ಉಪಸ್ತಿತರಿದ್ದರು. ಎಂ. ಆರ್.ನಾಯ್ಕ ಹುಡಗೋಡ್ ಸ್ವಾಗತಿಸಿ, ಮೋಹನ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನೇರವೇರಿತು.

error: