March 21, 2023

Bhavana Tv

Its Your Channel

ಬ್ರಹ್ಮೈಕ್ಯ ಶ್ರೀರಾಮಚಂದ್ರ ಭಾರತೀ ಮಹಾಸ್ವಾಮಿಗಳ ೭೨ನೇ ಆರಾಧನಾ ಮಹೋತ್ಸವ

ಹೊನ್ನಾವರ: ಆರಾಧನಾ ಮಹೋತ್ಸವದ ಸಮಯದಲ್ಲಿ ಸಾಹಿತ್ಯಿಕ ಸಾಧನೆಯನ್ನು ಪರಿಗಣಿಸಿ ಬಾಗಲಕೋಟೆಯ ಸಂಧ್ಯಾ ಸಾಹಿತ್ಯ ವೇದಿಕೆ ಕೊಡಮಾಡುವ ರಾಜ್ಯಮಟ್ಟದ ವಿದ್ಯಾಸಾಗರ ಬಾಲ ಪುರಸ್ಕಾರ ಪಡೆದ ಹೊನ್ನಾವರ ತಾಲೂಕಿನ ಮೂಡ್ಕಣಿಯ ಸುನೀತಾ ಮತ್ತು ಸತೀಶ ಹೆಗಡೆದಂಪತಿಯ ಪುತ್ರ ಎಂ.ಎಸ್.ಶೋಭಿತ್ ಮತ್ತು ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದವರು ನಡೆಸಿದ ‘ಶ್ರೀಶಾರದಾ ಜ್ಞಾನಸುಧಾರಸಪ್ರಶ್ನೆ’ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಹೊನ್ನಾವರದ ವಿನುತಾ ಭಟ್ ಹಾಗೂ ಜಗದೀಶರಾವ್ ಬಿ.ಎಸ್. ಅವರ ಪುತ್ರಿ ಸಾನ್ವಿರಾವ್‌ಗೆ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಿಶೇಷ ಪುರಸ್ಕಾರ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಶ್ರೀರಾಮಚಂದ್ರಾಪುರ ಮಠದ ಛಾತ್ರಾ ವಿಭಾಗದ ಸಂಧ್ಯಾಕಾನತ್ತೂರು, ಹೊನ್ನಾವರ ಮಂಡಲದ ವಿದ್ಯಾರ್ಥಿ ವಾಹಿನಿಯ ಪ್ರಕಾಶ ಹೆಗಡೆ ಹಾನಬಿ ಮುಂತಾದವರು ಉಪಸ್ಥಿತರಿದ್ದರು.

About Post Author

error: