April 26, 2024

Bhavana Tv

Its Your Channel

ರಂಗಿನ ಹೋಕಳಿಯನ್ನು ಹೊನ್ನಾವರ ತಾಲೂಕಿನಾದ್ಯಂತ ಸಡಗರದಿಂದ ಆಚರಿಸಲಾಯಿತು.

ರಂಗು ರಂಗಿನ ಬಣ್ಣದ ಹೋಕಳಿಯಲ್ಲಿ ಎಲ್ಲಾ ವಯಸ್ಸಿನವರು ಕುಣಿದು ಕುಪ್ಪಳಿಸಿ ಸಂಭ್ರಮಿಸುವ ಹಬ್ಬವಾದ ಹೋಳಿ ಹಬ್ಬದ ತನ್ನದೇ ಆದ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಯುವಕರು ಬಣ್ಣವನ್ನು ಮೈಗೆ ಹಚ್ಚಿಕೊಂಡು ಮಡಿಕೆ ಒಡೆದು ಸಂಭ್ರವಿಸುದು ಎಲ್ಲಡೆ ಕಂಡುಬAದಿತು. ಪಟ್ಟಣದ ಪ್ರಬಾತನಗರದ ಯುವಕರು ಸಂಭ್ರಮದಿAದ ಕುಣಿದು ಕುಪ್ಪಿಸಲಿ ರಂಗಿನ ಹೋಕಲಿಯ ಸಂಭ್ರಮ ಸುತ್ತಮುತ್ತಲಿನವರಿಗೆ ಸಂತಸ ಮೂಡಿಸಿತು.
ಇನ್ನೊಂದಡೆ ಹಾಲಕ್ಕಿ ಒಕ್ಕಲಿಗರು, ಗೊಂಡ ಸಮಾಜದವರು ಮರಾಠಿಗರು, ಹರಿಜನರಿರುವಲ್ಲಿ ಹೆಚ್ಚಾಗಿ ಕಾಣಬಹುದಾದÀ ಹೋಲಿ ಹುಣ್ಣಿಮೆಯಲ್ಲಿ ಸುಗ್ಗಿ ಕುಣಿತದ ಸಂಪ್ರದಾಯ ಆಚರಣೆಗಳು ಆಧುನಿಕ ಜಗತ್ತಿನ ಯಾಂತ್ರಿಕತೆಯ ಮಾಯೆಯ ಸುಳಿಗೆ ಸಿಲುಕದೇ ಉಳಿದುಕೊಂಡಿರುವುದು ವಿಶೇಷವಾಗಿದೆ. ಕೆಲವರು ಶಿವರಾತ್ರಿ ಪೂರ್ವದಲ್ಲಿಯೇ ಸುಗ್ಗಿಕಟ್ಟಿದರೆ ಹಾಲಕ್ಕಿ ಹಾಗೂ ಹರಿಜನರು ಹೋಳಿಹಬ್ಬದ ಸಂದರ್ಭದಲ್ಲಿ ಸುಗ್ಗಿ ಕಟ್ಟುತ್ತಾರೆ. ಸಂಪ್ರದಾಯಬದ್ದ ವೇಷಗಳ ಜೊತೆ ಜೊತೆಯೇ ಹುಲಿ, ಕರಡಿ, ಪೊಲೀಸ್, ವೇಷಗಳನ್ನೂ ತೊಟ್ಟು ಜನರನ್ನು ರಂಜಿಸುವ ಇವರು ಹಣ ಅಥವಾ ಅಕ್ಕಿ ಕಾಯಿಯಂತ ವಸ್ತುಗಳ ರೂಪದಲ್ಲಿ ಕಾಣಿಕೆಯನ್ನು ಸ್ವೀಕರಿಸುತ್ತಾರೆ. ಒಂದೆಡೆ ಸುಗ್ಗಿಕುಣಿತದಂತ ಸಂಪ್ರದಾಯ ಪಾಲನೆಯಾಗುತ್ತಿದ್ದರೆ ಇನ್ರ‍್ನೆಂದೆಡೆ ಹೋಳಿ ಹಬ್ಬದ ದಿನ ಮೈಗೆ ಬಣ್ಣ ಎರಚಿಕೊಂಡು ಸಂಭ್ರಮಿಸುವವರು ಹೆಚ್ಚಿನವರಿದ್ದಾರೆ.
ಸಮೃದ್ಧಿಯ ಸಂಕೇತವಾಗಿರುವ ಸುಗ್ಗಿಕುಣಿತ ಹಾಗೂ ಹೋಳಿ ರೈತರು ಬೆಳೆದ ಬೆಳೆ ಮನೆಬಾಗಿಲಿಗೆ ಬರುವ ಅದೃಷ್ಟದ ಆಚರಣೆಯಾಗಿದೆ. ದಾರ್ಮಿಕ ಹಬ್ಬವಾಗಿದ್ದು ಇದರ ಸಂಭ್ರಮ ಎಲ್ಲಡೆ ಮನೆ ಮಾಡಿದೆ

error: