ಭಟ್ಕಳ ; ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ನ್ಯಾಯವಾದಿ ಹಾಗೂ ವಕೀಲರ ಸಂಘದ ಅಧ್ಯಕ್ಷ ಆರ್. ಆರ್. ಶ್ರೇಷ್ಟಿಯವರು ಭಟ್ಕಳ ವಕೀಲರ ಸಂಘವು ನಡೆದು ಬಂದ ದಾರಿ, ಸಂಘಕ್ಕೆ ಮಹಿಳಾ ನ್ಯಾಯವಾದಿಗಳ ಸೇರ್ಪಡೆ ಮತ್ತು ಸಂಘದ ಸದಸ್ಯರುಗಳು ನ್ಯಾಯಾಂಗದಲ್ಲಿ ಸೇರ್ಪಡೆಗೊಂಡು ಸಂಘಕ್ಕೆ ಹೆಸರು ತಂದಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಕೀಲರ ಸಂಘದಿAದ ಇಬ್ಬರು ಮಹಿಳಾ ನ್ಯಾಯವಾದಿಗಳು ಸರಕಾರಿ ವಕೀಲರುಗಳಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೇ, ಇಂದಿರಾ ನಾಯ್ಕ ಅವರು ಪದೋನ್ನತಿಯನ್ನು ಹೊಂದಿ ವರ್ಗಾವಣೆ ಗೊಂಡು ಹೆಚ್ಚಿನ ಸೇವೆಗಾಗಿ ತೆರಳುತ್ತಿರುವುದು ನಮ್ಮ ವಕೀಲರ ಸಂಘಕ್ಕೆ ಹೆಮ್ಮ ಎಂದರು. ಭಟ್ಕಳದ ನ್ಯಾಯಾಲಯದಲ್ಲಿ ಅವರು ಸಹಾಯಕ ಸರಕಾರಿ ಅಭಿಯೋಜಕಿಯಾಗಿ ನೀಡಿದ ಸೇವೆಯನ್ನು ಸ್ಮರಿಸಿದರು ಅವರು ಸಂಘದ ಸದಸ್ಯೆಯಾಗಿ ಅವರು ಸಂಘಕ್ಕೆ ನೀಡಿದ ಕೊಡುಗೆಯನ್ನು ಕೂಡಾ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಿ ಮಾತನಾಡಿದ ಇಂದಿರಾ ನಾಯ್ಕ ಅವರು ಇಲ್ಲಿನ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಹಕರಿಸಿದ ಎಲ್ಲ ವಕೀಲ ಮಿತ್ರರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಗಣೇಶ ದೇವಾಡಿಗ, ಹಿರಿಯ ನ್ಯಾಯವಾದಿ ಜೆ.ಡಿ.ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಡಿ.ಕೆ. ಜೈನ್ ಅವರು ಇಂದಿರಾ ನಾಯ್ಕ ಅವರು ಭಟ್ಕಳದಲ್ಲಿ ಸಹಾಯಕ ಸರಕಾರಿ ವಕೀಲರಾಗಿ ಉತ್ತಮ ಸೇವೆ ಸಲ್ಲಿಸಿದ್ದರು ಎಂದರು.
ನ್ಯಾಯವಾದಿಗಳಾದ ಎಂ.ಎಲ್.ನಾಯ್ಕ, ಎಸ್.ಬಿ.ಬೊಮ್ಮಾಯಿ, ಕೆ.ಎಚ್. ನಾಯ್ಕ, ವಿ.ಎಫ್. ಗೋಮ್ಸ, ಎಸ್.ಕೆ.ನಾಯ್ಕ, ರಾಜೇಶ ನಾಯ್ಕ, ಜೆ.ಡಿ. ಭಟ್ಟ, ನಾಗರಾಜ ಈ.ಎಚ್., ಎಸ್.ಜೆ.ನಾಯ್ಕ, ಎಂ.ಟಿ.ನಾಯ್ಕ, ನಾಗರಾಜ ನಾಯ್ಕ, ಸಂತೋಷ ನಾಯ್ಕ, ಪಾಂಡು ನಾಯ್ಕ, ಎಸ್.ಎಂ.ಖಾನ್, ದಿನಕರ ಪಿ.ಬಿ., ಪೂರ್ಣಮಾ, ನಾಗರತ್ನಾ ಸೇರಿದಂತೆ ಹೆಚ್ಚಿನ ನ್ಯಾಯವಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ.ಜೆ. ನಾಯ್ಕ ಸ್ವಾಗತಿಸಿದರು. ಡಿ.ಕೆ. ಜೈನ್ ನಿರ್ವಹಿಸಿದರು. ದುರ್ಗಪ್ಪ ಮೊಗೇರ ವಂದಿಸಿದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.