April 25, 2024

Bhavana Tv

Its Your Channel

ಕರೋನಾ ವೈರಸ್ ಕುರಿತು ಜನರು ಜಾಗೃತರಾಗಿರಬೇಕು – ಉಪ ವಿಭಾಗಾಧಿಕಾರಿ ಗೌತಮ

ಭಟ್ಕಳ: ಕರೋನಾ ವೈರಸ್ ಕುರಿತು ಜನರು ಜಾಗೃತರಾಗಿರಬೇಕು ವಿದೇಶದಿಂದ ಬಂದವರು ಕನಿಷ್ಟ ೧೪ ದಿನಗಳ ಕಾಲ ಮನೆಯಲ್ಲಿಯೇ ಇರಬೇಕು ಎಂದು ಉಪ ವಿಭಾಗಾಧಿಕಾರಿ ಗೌತಮ ಅವರು ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಭಟ್ಕಳದಲ್ಲಿ ಓರ್ವರನ್ನು ಪ್ರತ್ಯೇಕ ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಈ ಹಿಂದೆ ಹೃದಯ ಚಿಕಿತ್ಸೆಗೆ ಒಳಗಾಗಿದ್ದವರಾಗಿದ್ದು ಜ್ವರ ಬಂದಿರುವ ಕಾರಣ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಕರೋನಾ ಸೋಂಕಿತರೇ ಎನ್ನುವ ಸಂಶಯದಿAದ ಅವರನ್ನು ಪ್ರತ್ಯೇಕ ವಾರ್ಡಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಅವರ ಕಫ, ರಕ್ತದ ಮಾದರಿಯನ್ನು ಕಳುಹಿಸಿ ಕೊಡಲಾಗಿದ್ದು ಪರೀಕ್ಷೆಯ ನಂತರವಷ್ಟೇ ನಿಜಾಂಶ ತಿಳಿಯಲಿದೆ ಎಂದರು.
ಇಲ್ಲಿಯ ತನಕ ಭಟ್ಕಳ ಉಪ ವಿಭಾಗದಲ್ಲಿ ಯಾವುದೇ ಕರೋನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಉಪ ವಿಭಾಗದಲ್ಲಿ ಐದು ಕಡೆಗಳಲ್ಲಿ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ. ಪ್ರವಾಸಿಗರು ಯಾವುದೇ ಸಂಶಯವಿದ್ದಲ್ಲಿ ಹೆಲ್ಪ್ ಡೆಸ್ಕ್ಗೆ ಭೇಟಿ ನೀಡಿ ಮಾಹಿತಿ ನೀಡಬಹುದು. ಅಲ್ಲಿರುವ ಥರ್ಮಲ್ ಸ್ಕಾನರ್ ಮೂಲಕ ದೇಹದ ಉಷ್ಟತೆಯನ್ನು ಪರೀಕ್ಷಿಸಿಕೊಳ್ಳಬಹುದು ಎಂದೂ ಅವರು ಹೇಳಿದರು.
ಉಪ ವಿಭಾಗದ ಉಪಾಧೀಕ್ಷಕ ನಿಖಿಲ್ ಮಾತನಾಡಿ ಸಾಮಾಜಿಕ ಜಾಲ ತಾಣದಲ್ಲಿ ಹಲವರು ತಪ್ಪು ಸಂದೇಶಗಳನ್ನು ಶೇರ್ ಮಾಡುತ್ತಿರುವ ಕುರಿತು ತಿಳಿದು ಬಂದಿದೆ. ಯಾವುದೇ ರೀತಿಯಿಂದ ತಪ್ಪು ಸಂದೇಶ ಹರಡುವುದನ್ನು ಇಲಾಖೆ ಸಹಿಸುವುದಿಲ್ಲ. ಅಂತಹ ಗ್ರೂಪ್‌ಗಳನ್ನು ಮೊನಿಟರ್ ಮಾಡುತ್ತಿದ್ದು ಗ್ರೂಪ್ ಅಡ್ಮಿನ್ ಹಾಗೂ ಶೇರ್ ಮಾಡಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ ಮಾತನಾಡಿ ವಿದೇಶದಿಂದ ಬಂದವರನ್ನು ಕಡ್ಡಾಯವಾಗಿ ೧೪ ದಿನಗಳ ಕಾಲ ಮನೆಯಲ್ಲಿಯೇ ಇರಲು ಸೂಚಿಸಲಾಗಿದೆ. ಆದರೆ ಓರ್ವರು ಮನೆಯಿಂದ ಹೊರಕ್ಕೆ ಬಂದಿರುವ ವಿಷಯ ತಿಳಿದು ಅವರನ್ನು ತಕ್ಷಣ ಮನೆಯಲ್ಲಿಯೇ ಇರುವಂತೆ ಮುನ್ನೆಚ್ಚರಿಕೆ ನೀಡಿ ಮನೆಗೆ ಕಳಹಿಸಲಾಗಿದೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ ಅವರು ಮಾತನಾಡಿ ಪ್ರತಿಯೋರ್ವರೂ ಕೂಡಾ ಪ್ರತಿ ಎರಡು ಗಂಟೆಗೊಮ್ಮೆ ತಮ್ಮ ಕೈಗಳನ್ನು ಸ್ವಚ್ಚವಾಗಿ ಸೋಪಿನಿಂದ ತೊಳೆದು ಕೊಳ್ಳಬೇಕು. ಕನಿಷ್ಟ ೩೦ ಸೆಕುಂಡ್‌ಗಳ ಕಾಲ ಕೈತೊಳೆಯಬೇಕು. ಯಾವುದೇ ವ್ಯಕ್ತಿಯಿಂದ ಕನಿಷ್ಟ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಎಂದ ಅವರು ಸಾಮೂಹಿಕವಾಗಿ ಯಾವುದೇ ಮಾಸ್ಕ ಬಳಸುವ ಅಗತ್ಯವಿಲ್ಲ, ಆದರೆ ಸಂಶಯಿತರು ಮಾತ್ರ ಮಾಸ್ಕ ಬಳಸಬೇಕು ಎಂದರು.

error: