ಕರೋನಾ ಎಫೆಕ್ಟ್ ಹಲವು ಉದ್ಯಮ ಹಾಗೂ ಅಂಗಡಿ ಹೋಟೇಲ್, ಶಾಲಾ ಕಾಲೇಜು, ಮಾಲ್‌ಗಳಿಗೆ ತಟ್ಟಿದ್ದು ಇತ್ತ ಖಾಸಗಿ ಬಸ್ ಕೂಡಾ ಹೊರತಾಗಿಲ್ಲ ಜಿಲ್ಲೆಯಿಂದ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಶ್ರೀ ಕುಮಾರ್ ಬಸ್ ಕೂಡಾ ಇದೀಗ ಕರ್ಕಿ ಸಮೀಪದ ಪ್ರದಾನ ಕಛೇರಿ ಮುಂಭಾಗದಲ್ಲಿ ನಿಂತಿದೆ ಬೆಂಗಳೂರಿನ ಪ್ರಯಾಣ ಸ್ಥಗಿತ ಹಿನ್ನಲೆ ಶ್ರೀಕುಮಾರ ಸೇರಿದಂತೆ ವಿವಿಧ ಬಸ್‌ಗಳು ಪ್ರಯಾಣಿಕರಿಲ್ಲದ ಹಿನ್ನಲೆ ಕೆಲವು ಬಸ್ಸುಗಳನ್ನು ತಾತ್ಕಲಿಕ ರದ್ದುಮಾಡುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರಿನತ್ತ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಪ್ರಯಾಣ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಬಸ್ಸುಗಳು ನಷ್ಟದತ್ತ ಸಾಗುತ್ತಿದೆ. ಇದರ ಪರಿಣಾಮ ಜಿಲ್ಲೆಯ ಹೆಮ್ಮೆಯ ಖಾಸಗಿ ಬಸ್ ಆಗಿದ್ದ ಶ್ರೀ ಕುಮಾರ್ ಟಾವೆಲ್ಸ ೩೬ ಬಸ್ಸುಗಳಲ್ಲಿ ಕಳೆದ ಕೆಲ ದಿನಗಳಿಂದ ನಾಲ್ಕು ಬಸ್ಸುಗಳು ಮಾತ್ರ ಬೆಂಗಳೂರಿಗೆ ಚಲಿಸುತ್ತಿದ್ದು ರವಿವಾರದಿಂದ ಅದು ಕೂಡಾ ಬಂದ್ ಆಗಲಿದೆ. ಬೆಂಗಳೂರಿನಿAದ ವಾಪಸ್ಸಾಗುತ್ತಿದ್ದವರು ಈಗಾಗಲೇ ಮುಂಚಿತವಾಗಿ ಟಿಕೇಟ್ ಬುಕ್ಕಿಂಗ್ ಮಾಡಿದ ಹಿನ್ನಲೆಯಲ್ಲಿ ರವಿವಾರದವರೆಗೆ ಸೇವೆ ನೀಡಲು ಸಂಸ್ಥೆ ಮುಂದಾಗಿದೆ. ಇದರ ಪರಿಣಾಮ ಬೆಂಳೂರಿನತ್ತ ಹೊರಡುವವರು ತಮ್ಮ ಪ್ರಯಾಣ ದಿನಾಂಕವನ್ನು ಸದ್ಯದ ಮಟ್ಟಿಗೆ ಮುಂದುವುಡು ಒಳಿತು ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.
ಈ ಬಗ್ಗೆ ವಾಹಿನಿಯೊಂದಿಗೆ ಶ್ರೀಕುಮಾರ ಮಾಲೀಕರಾದ ವೆಂಕ್ರಟಮಣ ಹೆಗಡೆ ಮಾತನಾಡಿ ಕಳೆದ ಒಂದು ವಾರದಿಂದ ನಮ್ಮ ಸಂಸ್ಥೆಯ ೩೬ ಬಸ್ ಗಳಲ್ಲಿ ಪ್ರತಿನಿತ್ಯವೂ ಕಡಿಮೆ ಮಾಡುತ್ತಾ ಬಂದಿದ್ದು ಇದೀಗ ೪ ಬಸ್ ಮಾತ್ರ ಬೆಂಗಳೂರಿಗೆ ಕಳುಹಿಸುತ್ತಿದ್ದೇವೆ. ಮುಂದಿನ ರವಿವಾರದಿಂದ ತಾತ್ಕಲಿಕವಾಗಿ ಅದನ್ನು ಕೂಡಾ ನಿಲ್ಲಿಸಲಿದ್ದು ನಮ್ಮ ಜಿಲ್ಲೆಯ ಸುರಕ್ಷತೆಯೂ ಕೂಡಾ ಮುಖ್ಯವಾಗಿದೆ. ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮ ಕತ್ಯರ್ವ ಅದು ಪಾಲಿಸುತ್ತಿದ್ದೇವೆ ಎಂದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.