March 21, 2023

Bhavana Tv

Its Your Channel

ಎಸ್.ಡಿ.ಎಮ್. ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳ ಸಾಧನೆ

೨೦೧೮-೧೯ ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿರುವ ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಮ್. ಮಹಾವಿದ್ಯಾಲಯದ ಕು. ವೈಷ್ಣವಿ ರಾಘವ ಬಾಳೇರಿ, ಇವರು ಶೇ. ೯೫.೪೬ ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ೯ನೇ ರ‍್ಯಾಂಕ್‌ನ್ನು ಹಾಗೂ ಕು. ಎಮ್.ವಿ. ಪ್ರಜ್ಞಾ ಇವರು ಶೇ.೯೫.೩೦ ಅಂಕ ಪಡೆದು ವಿಶ್ವವಿದ್ಯಾಲಯಕ್ಕೆ ೧೦ನೇ ರ‍್ಯಾಂಕ್‌ನ್ನು ಪಡೆದಿರುತ್ತಾರೆ.
ನಮ್ಮ ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಇವರಿಗೆ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ಸಮಸ್ತ ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳು.

About Post Author

error: