June 13, 2024

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಜೀರ್ಣೋದ್ಧಾರವಾಗುತ್ತಿರುವ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನಕ್ಕೆ ೦೩ ಲಕ್ಷರೂಪಾಯಿ ಬೆಲೆ ಬಾಳುವ ೫ ಅಡಿ ಎತ್ತರದ ಸಾಲಿಗ್ರಾಮ ಶಿಲೆಯ ಶ್ರೀ ನಾರಾಯಣಸ್ವಾಮಿ ಹಾಗೂ ೪ಅಡಿ ಎತ್ತರದ ಶ್ರೀ ಲಕ್ಷ್ಮೀದೇವಿ ಅಮ್ಮನವರ ವಿಗ್ರಹವನ್ನು ಕೊಡುಗೆ ನೀಡಲು ಬೆಂಗಳೂರಿನ ದಾನಿಗಳು ಮುಂದೆ ಬಂದಿದ್ದಾರೆ

ಬೆAಗಖಳೂರು ಮೂಲದ ಶಾರದ ಗೋಪಿಚಂದ್ ಮತ್ತು ಪ್ರಿಯಾಂಕಾವಿಶ್ವಾಸ್ ದಂಪತಿಗಳು ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮಾರ್ಗದರ್ಶನದಂತೆ ಶ್ರೀರಂಗಪಟ್ಟಣದ ಶಿಲ್ಪಿ ಶ್ರೀಧರಶರ್ಮ ಅವರ ಶಿಲ್ಪಕಲಾ ಶಾಲೆಗೆ ತೆರಳಿ ಬೃಹತ್ ಗಾತ್ರದ ಎರಡು ಸಾಲಿಗ್ರಾಮ ಶಿಲೆಗಳಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ನಾರಾಯಣಾಚಾರ್ಯರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ನಾರಾಯಣಸ್ವಾಮಿ ಮತ್ತು ಮಹಾಲಕ್ಷ್ಮೀ ಅಮ್ಮನವರ ಮೂರ್ತಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು…

ದೇವಾಲಯ ಜೀರ್ಣೋದ್ಧಾರ ಸಮಿತಿಯ ಸದಸ್ಯೆ ಸಮಾಜಸೇವಕಿ ಪರಿಮಳ ನಾಗರಾಜಶೆಟ್ಟಿ ಅವರ ಮನವಿಯ ಮೇರೆಗೆ ಶಾರದಾ ಗೋಪಿಚಂದ್ ಅವರು ದೇವಾಲಯದ ಎರಡು ಪ್ರಮುಖ ಮೂರ್ತಿಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ…ಇತ್ತೀಚೆಗೆ ಕೃಷ್ಣರಾಜಪೇಟೆ ಪಟ್ಟಣಕ್ಕೆ ಆಗಮಿಸಿದ್ದಾಗ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ ತಾವೂ ಕೂಡ ದೇವಾಲಯದ ನಿರ್ಮಾಣಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂದು ನಿರ್ಧರಿಸಿ ಭಗವಂತನ ಪ್ರೇರಣೆಯಂತೆ ಶ್ರೀ ನಾರಾಯಣಸ್ವಾಮಿ ಹಾಗೂ ಮಹಾಲಕ್ಷ್ಮೀ ಅಮ್ಮನವರ ಸಾಲಿಗ್ರಾಮ ಶಿಲೆಯ ಮೂರ್ತಿಗಳನ್ನು ನಿರ್ಮಿಸಿ ಕೊಡುಗೆ ನೀಡಲು ಮುಂದಾಗಿದ್ದೇವೆ ಎಂದು ದಾನಿಗಳಾದ ಶಾರದಾಗೋಪಿಚಂದ್ ವಿವರಿಸಿದರು…

ಈ ಸಂದರ್ಭದಲ್ಲಿ ಜನಪರ ಹೋರಾಟಗಾರ ಚಂದ್ರೇಗೌಡ, ದಾನಿಗಳಾದ ಕೆ.ಆರ್.ನಾಗರಾಜಶೆಟ್ಟಿ, ಪರಿಮಳಾ, ಶ್ರೀಧರ, ವಿಶ್ವಾಸ್, ಪ್ರಿಯಾಂಕ, ಶ್ರೀ ನಾರಾಯಣಾಚಾರ್ಯ, ಮೋಹನ್ ಮತ್ತಿತರರು ಉಪಸ್ಥಿತರಿದ್ದರು….

error: