
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕರೋನಾ ರೋಗ ಹರಡದಂತೆ ಅಧಿಕಾರಿಗಳು ಜಾಗೃತಿ ಅಭಿಯಾನ ಕೈಗೊಂಡಿದ್ದಿದ್ದು ಶುಕ್ರವಾರ .ಲಿಕ್ಕರ್ ಷಾಪ್ ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಪುರಸಭೆಯ ಮುಖ್ಯಾಧಿಕಾರಿ, ಅಬಕಾರಿ ನಿರೀಕ್ಷಕರು ಹಾಗೂ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳ ದಿಢೀರ್ ದಾಳಿ ನಡೆಸಿ .ಗಣೇಶ ಬಾರ್, ವಿನಾಯಕ ಮಧ್ಯದಂಗಡಿ, ಶ್ರೀಗುರು ಲಿಕ್ಕರ್‌ಗಳ ಮೇಲೆ ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು ಕೆಲ ಲಿಕ್ಕರ್ ಶಾಪ್ ಗಳಲ್ಲಿನ ಅಶುಚಿತ್ವ, ಲಿಕ್ಕರ್ ಶಾಪ್ ಗಳಲ್ಲಿನ ಕೆಟ್ಟ ವಾತಾವರಣ ಕಂಡು ಆಕ್ರೋಶಗೊಂಡ ಅಬಕಾರಿ ನಿರೀಕ್ಷಕಿ ಭವ್ಯ ಮತ್ತು ಮುಖ್ಯಾಧಿಕಾರಿ ಸತೀಶ್ ಕುಮಾರ್.. ಶುಚಿತ್ವ ಕಾಪಾಡದಿದ್ದರೆ ಲಿಕ್ಕರ್ ಶಾಪ್ ಗಳು ಮತ್ತು ಬಾರ್ ಗಳ ಬಾಗಿಲು ಮುಚ್ಚಿಸುವುದಾಗಿ ಎಚ್ಚರಿಸಿದರು ಪುರಸಭೆ ಕಛೇರಿಗೆ ರಜೆ ಘೋಷಿಸಿ ಬಾಗಿಲು ಮುಚ್ಚಿಸಿದ ಮುಖ್ಯಾಧಿಕಾರಿ ಸತೀಶ್… ಕೊರೋನಾ ಬಗ್ಗೆ ಭೀತಿ ಬೇಡ ಜಾಗೃತಿ ಇರಲಿ .ಎಲ್ಲರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕೊರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಸಂಕಲ್ಪ ಮಾಡೋಣ ಎಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಅಬ್ಕಾರಿ ಸಬ್ ಇನ್ಸ್ ಪೆಕ್ಟರ್ ಪುಟ್ಟಸ್ವಾಮಿ, ಪರಿಸರ ಎಂಜಿನಿಯರ್ ರಕ್ಷಿತ್ ಗೌಡ, ಆರೋಗ್ಯ ಪರಿವೀಕ್ಷಕರಾದ ಅಶೋಕ್, ನರಸಿಂಹಶೆಟ್ಟಿ, ಪುರಸಭೆಯ ಸಿಬ್ಬಂಧಿಗಳು ಹಾಗೂ ಅಬಕಾರಿ ಇಲಾಖೆಯ ಸಿಬ್ಬಂದಿಗಳೂ ದಾಳಿ ಹಾಗೂ ಕೊರೋನಾ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.