ಪ್ರಧಾನಮಂತ್ರಿಗಳಾದ ನರೇಂದ್ರಮೋಧಿ ಅವರು ದೇಶದಾದ್ಯಂತ ಕರೆ ನೀಡಿರುವ ಕೊರೋನಾ ಜನತಾಕರ್ಫ್ಯೂ ಯಶಸ್ವಿಯಾಗಬೇಕು. ಭಾರತ ದೇಶದಿಂದ ಮಹಾಮಾರಿ ಕೊರೋನಾ ವೈರಾಣುವನ್ನು ಹೊಡೆದೋಡಿಸುವ ಶಕ್ತಿಯನ್ನು ಭೂವರಹಾನಾಥಸ್ವಾಮಿಯು ನೀಡಿ ಆಶೀರ್ವದಿಸಲಿ ಎಂದು ಭಕ್ತರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಟ್ರಸ್ಟಿ ಶ್ರೀನಿವಾಸರಾಘವನ್ ಅವರ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿದರು.ಸಾವಿರಾರು ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆಯು ಇಂದು ಕೊರೋನಾ ಭೀತಿಯಿಂದಾಗಿ ಇಳಿಮುಖವಾಗಿದೆ..ಭೂದೇವಿ ಸಮೇತನಾಗಿ ನೆಲೆಸಿರುವ ಭೂವರಹನಾಥಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ನೇತೃತ್ವದ ಆಗಮಿಕರ ತಂಡವು ಪೂಜಾ ವಿಧಿವಿಧಾನಗಳ ನೇತೃತ್ವವನ್ನು ವಹಿಸಿದ್ದರು….
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದ್ದ ಸಚಿವ ನಾರಾಯಣಗೌಡರ ಸಂಭದಿ ದಾನಿಗಳು ಹಾಗೂ ಕೃಷಿತಜ್ಞರಾದ ವಿಶ್ವನಾಥ್
ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು….
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.