December 22, 2024

Bhavana Tv

Its Your Channel

ಅನಗತ್ಯವಾಗಿ ರಸ್ತೆ ಮೇಲೆ ಓಡಾಟ ಮಾಡುವವರ ವಿರುದ್ಧ ಉತ್ತರ ಕನ್ನಡ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಓಡಾಡುವವರ ಡ್ರೈವಿಂಗ್ ಲೈಸೆನ್ಸ್ ಹಾಗೂ ವಾಹನ ನೋಂದಣಿಯನ್ನು ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ನಿನ್ನೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರು. ಆದರೂ ಕೆಲವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ, ರಸ್ತೆ ಮೇಲೆ ಓಡಾಟ ನಡೆಸುವವರ ವಿರುದ್ಧ ಜಿಲ್ಲಾಡಳಿತ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಿದೆ.

ಮೊದಲ ಬಾರಿಗೆ ವ್ಯಕ್ತಿ ಮನೆಯಲ್ಲಿ ಇರದೇ ಆದೇಶ ಉಲ್ಲಂಘಿಸಿದರೆ ಆತನಿಗೆ ಅಳಿಸಲಾಗದ ಶಾಹಿಯಿಂದ ಕೈಗೆ ವಿದೇಶದಿಂದ ಬಂದಾಗ ವಿಮಾನ ನಿಲ್ದಾಣದಲ್ಲಿ ಹಾಕುವ ಮುದ್ರೆ ಮಾದರಿಯಲ್ಲಿ ಮುದ್ರೆಹಾಕುವ ಕ್ರಮಕ್ಕೆ ಮುಂದಾಗಿದೆ.
ಎರಡನೇ ಬಾರಿಗೆ ಅದೇ ವ್ಯಕ್ತಿ ಮುದ್ರೆ ಹಾಕಿದ ನಂತರವೂ ಆದೇಶ ಉಲ್ಲಂಘಿಸಿದರೆ ಆತ ವಾಸಿಸುವ ವಸತಿ ಪ್ರದೇಶದಲ್ಲಿ ಅತನ ಹೆಸರನ್ನು ಸಾರ್ವಜನಿಕ ಪ್ರಕಟಣೆ ಮೂಲಕ ಘೋಷಿಸುವ ಕ್ರಮಕ್ಕೆ ಮುಂದಾಗಿದೆ.

ಮೂರನೇ ಬಾರಿಗೆ ಅದೇ ವ್ಯಕ್ತಿ ಆದೇಶ ಉಲ್ಲಂಘಿಸಿದರೆ ಜಿಲ್ಲಾಡಳಿತದ ವೆಬ್ ಸೈಟ್ ನಲ್ಲಿ ಆತನ ಫೋಟೋ ಹಾಕಿ ಜೊತೆಗೆ, ಸಾರ್ವಜನಿಕ ಸ್ಥಳದಲ್ಲಿ ಉಲ್ಲಂಘನೆ ಮಾಡಿದವರ ಫೋಟೋ ಹಾಕಿ ಪ್ರಕಟಣೆ ಮಾಡುವ ಕ್ರಮಕ್ಕೆ ಇದೀಗ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಮುಂದಾಗಿದ್ದಾರೆ.

error: