
ಯಾರೂ ಕೂಡ ಸುಖಾ ಸುಮ್ಮನೆ ಮನೆಯಿಂದ ಹೊರಗೆ ಬರಬಾರದು. ಔಷಧಿ, ದಿನಸಿ ಸಾಮಾನು ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೇ ತಲುಪಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಶೀಘ್ರದಲ್ಲೇ ದಿನದ ೨೪ ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯವಾಗಿ ಅಂಗಡಿಗಳಲ್ಲಿ ದಿನಸಿಗಳನ್ನು ಪಡೆಯಬಹುದು. ಪ್ರತಿ ಗ್ರಾಮ ಮಟ್ಟದಲ್ಲಿ ಅಂಗಡಿಗಳನ್ನು ತೆರೆದಿರುವಂತೆ ನೋಡಿಕೊಳ್ಳಲು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ, ಖರೀದಿಯ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ೨೧ದಿನಗಳ ಕಾಲ ಯಾವುದೇ ತೊಂದರೆ ಆಗದಂತೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ಪೆಟ್ರೋಲ್ ಬಂಕ್ ಗೆ ಸಿಇಒ ಭೇಟಿ
ಕಾರವಾರದ ಸರ್ದಾರ್ ಜಿ ಪೆಟ್ರೋಲ್ ಬಂಕ್ ನಲ್ಲಿ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. ಬಂಕ್ ನ ಸಿಬ್ಬಂದಿ, ಸರ್ಕಾರಿ ವಾಹನಗಳಿಗೆ ಮಾತ್ರ ಪೆಟ್ರೋಲ್ ಹಾಕಿಸುವುದಾಗಿ ತಿಳಿಸಿದರು. ಇದರಿಂದಾಗಿ ಕೆಲವರು ಸಿಟ್ಟಿಗೆದ್ದು ಬಂಕ್ ಮಾಲೀಕರೊಂದಿಗೆ ಜಗಳಕ್ಕಿಳಿದರು.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಂಕ್ ನ ಸಿಬ್ಬಂದಿ, ಉಪವಿಭಾಗಾಧಿಕಾರಿ ಸೂಚನೆ ನೀಡುವವರೆಗೆ ಪೆಟ್ರೋಲ್ ತುಂಬಿಸಲಾರೆವು ಎಂದು ಗ್ರಾಹಕರೊಂದಿಗೆ ವಾಗ್ವಾದ ಮುಂದುವರೆಸಿದರು. ಬಳಿಕ ಬಂಕ್ ಗೆ ಬಂದ ಪೊಲೀಸರು, ಲಾಠಿಯಿಂದಾಗಿ ಎಲ್ಲರನ್ನೂ ಚದುರಿಸಿದರು.
ಬಳಿಕ ಮತ್ತಷ್ಟು ಗ್ರಾಹಕರು ಬಂಕ್ ನ ಎದುರು ಸಾಲುಗಟ್ಟಿದರು. ಈ ವೇಳೆ ಸಿಇಒ ರೋಶನ್ ಅವರು ಬಂಕ್ ಗೆ ಭೇಟಿ ನೀಡಿ, ಯಾರಿಗೂ ಪೆಟ್ರೋಲ್ ಹಾಕಿಸದಂತೆ ಸಿಬ್ಬಂದಿಗೆ ಸೂಚಿಸಿದರು. ಅಗತ್ಯ ಹಾಗೂ ತುರ್ತು ಕರ್ತವ್ಯದಲ್ಲಿರುವವರಿಗೆ ಮಾತ್ರ ಪೆಟ್ರೋಲ್ ನೀಡುವಂತೆ ತಿಳಿಸಿದರು. ಗ್ರಾಹಕರನ್ನೂ ವಾಪಸ್ ಕಳುಹಿಸಿದರು.
More Stories
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ ದಿ ನ್ಯೂ ಇಂಗ್ಲೀಷ ಪಿ ಯು ಕಾಲೇಜು ಶೇಕಡಾ 99.25% ಫಲಿತಾಂಶವನ್ನು ದಾಖಲಿಸಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ನಾಮಪತ್ರ ಸಲ್ಲಿಕೆ.
ದಾಖಲೆಯಿಲ್ಲದೆ ಸಾಗಿಸುತಿದ್ದ 51.20 ಲಕ್ಷ ನಗದು ವಶ