October 4, 2024

Bhavana Tv

Its Your Channel

ಭಟ್ಕಳದಲ್ಲಿ ಇಂದಿನಿoದ ಮುಂದಿನ ಆದೇಶದ ವರೆಗೆ ಸಂಪೂರ್ಣ ಹೆಲ್ತ್ ಎಮರ್ಜೆನ್ಸಿ ಘೋಷಣೆ

ಭಟ್ಕಳ: ಭಟ್ಕಳದಲ್ಲಿ ಇಂದಿನಿoದ ಮುಂದಿನ ಆದೇಶದ ವರೆಗೆ ಸಂಪೂರ್ಣ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದ್ದು ಔಷಧ, ಹಣ್ಣು, ತರಕಾರಿ, ಅಗತ್ಯ ಸಾಮಗ್ರಿಗಳನ್ನು ಪ್ರತಿ ಮನೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಭರತ್ ಎಸ್. ಅವರು ಹೇಳಿದ್ದಾರೆ.
ಅವರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಪರ್ತಕರ್ತರೊಂದಿಗೆ ಮಾತನಾಡುತ್ತಿದ್ದರು.
ಭಟ್ಕಳದಲ್ಲಿ ಅಗತ್ಯ ವಸ್ತುಗಳ ಸರಬರಾಜು ಮಾಡಲು ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡಿದ್ದು ಕೆಲವೊಂದು ತೊಡಕುಗಳು ಕಂಡು ಬಂದ ಮೇರೆಗೆ ಪ್ರತಿಯೋರ್ವರ ಆಧಾರ್ ಕಾರ್ಡ ಹಾಗೂ ಪೋಟೋ ಪಡೆದು ಪರಿಶೀಲಿಸಿದ ನಂತರವಷ್ಟೇ ಅವರಿಗೆ ಸೂಕ್ತ ಪಾಸ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡಾ ಮನೆಯಿಂದ ಹೊರಕ್ಕೆ ಬರುವ ಅಗತ್ಯವಿಲ್ಲ. ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಯಾವುದೇ ತುರ್ತು ಸಂದರ್ಭಗಳಿದ್ದರೆ ದಿನ ೨೪ ಗಂಟೆ ಕಾರ್ಯಾಚರಿಸುವ ೦೮೩೮೫೨೨೬೪೨೨ ನಂಬರಿಗೆ ಸಂಪರ್ಕ ಮಾಡಬಹುದು. ಯಾವುದೇ ವ್ಯಕ್ತಿಗಳು ತಮ್ಮ ವಾಹನವನ್ನು ತುರ್ತು ಅಗತ್ಯತೆಗಾಗಿ ಕೊಡುವುದಿದ್ದಲ್ಲಿ ಅದನ್ನು ತಾಲೂಕಾ ಪಂಚಾಯತ್ ಆವರಣದಲ್ಲಿಟ್ಟು ಜನತೆಯ ತುರ್ತು ಬಳಕೆಗೆ ಉಪಯೋಗಿಸಲಾಗುವುದು ಎಂದ ಅವರು ಅಂತಹ ವಾಹನ ನೀಡುವವರಿದ್ದಲ್ಲಿ ಸಂಪರ್ಕಿಸಬಹುದು ಎಂದೂ ಹೇಳಿದರು.
ಸಿಬ್ಬಂದಿಗಳಿಗೆ ಹಾಗೂ ಕರೋನಾ ಸಂಬAಧ ಕಾರ್ಯ ನಿರ್ವಹಿಸುವವರಿಗೆ ಅಗತ್ಯದ ಆಹಾರ ಪೂರೈಕೆಗೆ ಸಂಬAಧ ಪಟ್ಟಂತೆ ಸಾಜಿದ್ ಅಹಮ್ಮದ್ ಮುಲ್ಲಾ ಅವರು ನೋಡಲ್ ಅಧಿಕಾರಿಯಾಗಿರುತ್ತಾರೆ. ಆರೋಗ್ಯಕ್ಕೆ ಸಂಬAಧ ಪಟ್ಟಂತೆ ಡಾ. ಶರದ್ ನಾಯಕ ನೋಡಲ್ ಅಧಿಕಾರಿಯಾಗಿರುತ್ತಾರೆ. ಕಾನೂನು ಸುವ್ಯವಸ್ಥೆಗೆ ಸಂಬAಧ ಪಟ್ಟಂತೆ ಡಿ.ವೈ.ಎಸ್.ಪಿ. ಗೌತಮ್ ಅವರು ನೋಡಲ್ ಅಧಿಕಾರಿಯಾಗಿರುತ್ತಾರೆ ಎಂದೂ ಅವರು ಹೇಳಿದರು. ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವವರು ತಹಸೀಲ್ದಾರ್ ಕಚೇರಿಯ ಹೆಲ್ಪ್ಲೈನ್ ನಂಬರವನ್ನು ಸಂಪರ್ಕಿಸಿದಲ್ಲಿ ಅವರಿಗೆ ಅಗತ್ಯದ ಮೆಡಿಸಿನ್ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಯಾರೂ ಕೂಡಾ ಮನೆಯಿಂಕದ ಹೊರಕ್ಕೆ ಬರದಂತೆ ವಿನಂತಿ ಮಾಡಿದರು.
ಭಟ್ಕಳದಲ್ಲಿ ಮತ್ತೊಂದು ಪ್ರಕರಣವು ಪತ್ತೆಯಾಗಿದ್ದು ಆತನು ಈ ಮೊದಲು ಹೊರದೇಶದಿಂದ ಬಂದು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇದ್ದ ವ್ಯಕ್ತಿಯಾಗಿದ್ದಾನೆ. ಈತನಿಗೆ ಕೊರೊನಾ ಇರುವುದು ದೃಢವಾಗುತ್ತಿದ್ದಂತೆಯೇ ಭಟ್ಕಳದಲ್ಲಿ ಪತ್ತೆಯಾದ ಮೂರನೇ ಪ್ರಕರಣವಾಗಿದ್ದು ಇನ್ನೊಂದು ಪ್ರಕರಣ ಮಂಗಳೂರಿನಲ್ಲಿ ಪತ್ತೆಯಾಗಿತ್ತು ಎನ್ನುವುದನ್ನು ಸ್ಮರಿಸಬಹುದು. ಈಗಾಗಲೇ ಕೊರೊನಾ ಸೋಂಕಿತರನ್ನು ಪರೀಕ್ಷೆ ಮಾಡಿದ ವೈದ್ಯರುಗಳ ಪರೀಕ್ಷಾ ವರದಿ ಬಂದಿದ್ದು ಅವುಗಳೆರಡೂ ಕೂಡಾ ನೆಗೆಟಿವ್ ಬಂದಿದ್ದರಿAದ ವೈದ್ಯಕೀಯ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತಾಗಿದೆ.
ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ಪೀಡಿತರಿಗಾಗಿಯೇ ಮೀಸಲಿಟ್ಟಿದ್ದರಿಂದ ಸಣ್ಣ ಪುಟ್ಟ ಅಗತ್ಯತೆಗಾಗಿ ಶಿರಾಲಿಯ ಸರಕಾರಿ ಆಸ್ಪತ್ರೆಯನ್ನು ಜನರು ಆವಲಂಬಿಸಬೇಕಾಗಿ ಬಂದಿದೆ.
ತಾಲೂಕಾಡಳಿತಕ್ಕೆ ಸಹಕಾರ: ಬೆಳಿಗ್ಗೆ ಸಹಾಯಕ ಆಯುಕ್ತರನ್ನು ಭೇಟಿ ಮಾಡಿದ ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ ಅವರು ತಮ್ಮ ಪಕ್ಷದ ವತಿಯಿಂದ ತಾಲೂಕಾ ಆಡಳಿತಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಭಟ್ಕಳದಲ್ಲಿ ಕೆಲವೊಂದು ಅಂಗಡಿಗಳನ್ನು ತೆರೆಯುತ್ತಲೇ ಯಾವುದೇ ಸೋಶಿಯಲ್ ಡಿಸ್ಟೆನ್ಸಿಂಗ್ ಕಾಪಾಡದೇ ನುಗ್ಗುತ್ತಿರುವುದು ಕಂಡು ಬಂದಿದೆ. ಹಲವರು ಸಾಮಾಜಿಕ ಕಾರ್ಯಕರ್ತ ಎಂದು ಪಾಸ್ ಪಡೆದು ಅನ್ಯ ಕಾರ್ಯಕ್ಕೆ ಬಳಸುವ ಸಾಧ್ಯತೆ ಇದೆ. ಯರ‍್ಯಾರು ಪಾಸ್ ಪಡೆಯುತ್ತಾರೆ ಅವರು ಅದೇ ಕಾರ್ಯಕ್ಕೆ ಉಪಯೋಗಿಸಬೇಕು ಎನ್ನುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ಅವರ ಫೋಟೋಗಳನ್ನು ಕೂಡಾ ಹಾಕಿ ಪಾಸ್ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ದುರುಪಯೋಗವನ್ನು ತಡೆಯಬೇಕು ಎಂದೂ ಹೇಳಿದ ಅವರು ಜನರು ಸೋಶಿಯಲ್ ಡಿಸ್ಟೆನ್ಸಿಂಗ್ ಕಾಯ್ದುಕೊಳ್ಳುವಂತೆ ಮತ್ತು ಮನೆಯಿಂದ ಹೊರ ಬರದಂತೆ ಕಟ್ಟುನಿಟ್ಟಿಕ ಕ್ರಮ ಅಗತ್ಯ ಎಂದೂ ಅಭಿಪ್ರಾಯ ಪಟ್ಟರು.

error: