ಬಿಜೆಪಿ ರಾಜ್ಯ ಘಟಕದ ಸೂಚನೆ ಮೇರೆಗೆ ಕರೋನಾ ವಿರುದ್ದ ಸಂಕಷ್ಟದಲ್ಲಿದ್ದವರಿಗೆ ಹಾಗೂ ಮೆಡಿಸಿನ್ ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಅಗತ್ಯತೆ ಇದ್ದಲ್ಲಿ ಮಹಾಶಕ್ತಿಕೇಂದ್ರವಾರು ತಂಡ ರಚಿಸಲಾಗಿದೆ ಎಂದು ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ ಮಾಹಿತಿ ನೀಡಿದ್ದಾರೆ. ತಾಲೂಕಿನ ಮಹಾಶಕ್ತಿ ಕೇಂದ್ರವಾದ ಮುಗ್ವಾ, ಹಳದೀಪುರ, ಮಂಕಿ, ಹೊನ್ನಾವರ, ನಗರಬಸ್ತಿಕೇರಿ, ಮಾವಿನಕುರ್ವಾ ಎಂದು ವಿಂಗಡಿಸಲಾಗಿದೆ. ಈ ಮಹಾಶಕ್ತಿಕೇಂದ್ರವಾರು ಬರುವ ಗ್ರಾಮಗಳಿಗೆ ಪ್ರತಿ ಕೇಂದ್ರದಿಂದ ೧೨ ಜನ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ . ಈಗಾಗಲೇ ದೇಶದೆಲ್ಲಡೆ ಲಾಕ್ ಡೌನ್ ಮಾಡಲಾಗಿದ್ದು ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಮಸ್ಯೆಯಾಗಬಾರದು ಅದರಲ್ಲೂ ಮೆಡಿಕಲ್ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇದರಂತೆ ನಮ್ಮಲ್ಲಿ ತಂಡ ರಚಿಸಿದ್ದು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿನ ಮಾಹಿತಿಯನ್ನು ಮನೆಯಿಂದ ಹೊರಹೋಗದೇ ಲಭ್ಯವಿರುವ ತಂತ್ರಾಶವನ್ನು ಬಳಸಿಕೊಂಡು ಮಾಡುವಂತೆ ಸೂಚಿಸಲಾಗಿದೆ. ಸಹಾಯವಾಣಿ ಸಂಖ್ಯೆ 9448331519
8073829314 ಮಾಹಿತಿಗಾಗಿ ಸಂಪರ್ಕಿಸಬಹುದು .
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ