ಭಾರತ ಲಾಕ್ ಡೌನ್ ಎರಡನೇ ದಿನ ಪಟ್ಟಣದಲ್ಲಿ ಪ್ರಥಮ ದಿನಕ್ಕಿಂತ ಸುಧಾರಣೆ ಕಂಡುಬAದಿದೆ. ಪೋಲಿಸರು ರಸ್ತೆ ಮೇಲೆ ಮಾಸ್ಕ ಧರಿಸಿ ಲಾಠಿ ಹಿಡಿದು ನಿಂತಿದ್ದು ಪ್ರತಿಯೊಂದು ವಾಹನ ಸಂಚಾರನ್ನು ವಿಚಾರಿಸಿ ಮಾಸ್ಕ ಇಲ್ಲದೇ ಇದ್ದವರನ್ನು ತಡೆದು ಮಾಸ್ಕ ಧರಿಸಿಯೇ ಹೋಗುವಂತೆ ಸೂಚಿಸಲಾಗುತ್ತಿದೆ. ಅಲ್ಲದೇ ಪಟ್ಟಣದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು ಮೆಡಿಕಲ್ ಶಾಪ್ ಮಾತ್ರ ತೆರೆಯಲಾಗಿದೆ. ವಾಹನ ಸಂಚಾರ ನಿಯಂತ್ರಿಸಲು ಅನಾವಶ್ಯಕ ಓಡಾಡುವವರಿಗೆ ಪೋಲಿಸ್ ಲಾಠಿ ರುಚಿ ತೋರಿಸಲಾಗಿದೆ. ಅಲ್ಲದೆ ಪೆಟ್ರೋಲ್ ಕೂಡಾ ಎಲ್ಲರಿಗೂ ಓದಗಿಸಕಲು ನಿರಾಕರಿಸಲಾಗಿದ್ದು ಸರ್ಕಾರಿ ಅಧಿಕಾರಿಗಳು, ಮಧ್ಯಮದವರು, ತುರ್ತು ಕಾರ್ಯ ನಿರ್ವಹಿಸುವರಿಗೆ ಮಾತ್ರ ನೀಡಲಾಗುತ್ತಿದೆ. ಇದರ ಮಧ್ಯೆ ಹೊನ್ನಾವರ ತಹಶೀಲ್ಧಾರ ವಿವೇಕ ಶೇಣ್ವೆ ಅಧ್ಯಕ್ಷತೆಯಲ್ಲಿ ಪಟ್ಟಣ ಭಾಗಕ್ಕೆ ಬರದೇ ಇರಲು ೨೦ ವಾರ್ಡಗಳಿಗೂ ಮನೆ ಸಮೀಪ ಕಿರಾಣಿ, ತರಕಾರಿ ಅಗತ್ಯವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಲು ಸಭೆ ನಡೆದಿದ್ದು ಚರ್ಚಿಸಿ ತಿರ್ಮಾನಿಸಲಾಗಿದೆ. ಇದರ ಅನುಷ್ಟಾನ ಪ್ರಕ್ರೀಯೆಯನ್ನು ನಾಳೆ ಶುಕ್ರವಾರ ತಿಳಿಸಲಾಗುವುದು. ಅಲ್ಲದೇ ಪಟ್ಟಣದಲ್ಲಿ ಆಟೋ, ಸಾರಿಗೆ ಬಸ್, ಖಾಸಗಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರುದರಿಂದ ಪಟ್ಟಣದ ರಸ್ತೆಗಳೆಲ್ಲ ಬಿಕೋ ಎನಿಸುತ್ತದೆ ಅಲ್ಲದೆ ಪಟ್ಟಣದಲ್ಲಿ ಎಲ್ಲಾ ಅಂಗಡಿಗಳು ಬಂದ್ ಆಗಿರುದರಿಂದ ಸಾರ್ವಜನಿಕ ಸಂಚಾರ ಕೂಡಾ ಇರಲಿಲ್ಲ. ಈ ಮರ್ಧಯೆ ಕೆಲವರು ಮೆಡಿಕಲ್ ಶಾಪ್ ಬಂದಿದ್ದೇವೆ ಎಂದು ಹೇಳುವವರ ಸಂಖ್ಯೆ ಜಾಸ್ತಿಯಾಗಿದ್ದು ಪೋಲಿಸರು ಇದರ ಬಗ್ಗೆ ಪರೀಶೀಲನೆ ನಡೆಸುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ತಾಲೂಕು ಆಡಳಿತ ಕಳಕಳಿಯಿಂದ ವಿನಂತಿಸುತ್ತಿದ್ದು ಅನಾರೋಗ್ಯ ಸಮಸ್ಯೆ ಎದುರಾದಲ್ಲಿ ತುರ್ತು ಸಂಖ್ಯೆಗೆ ಕರೆ ಮಾಡಿದರೆ ಅಂಬುಲೆನ್ಸ ಕಳಿಸಿಕೊಡಲಾಗುವುದು. ಅನಾಗತ್ಯವಾಗಿ ಹೊರಬರಬೇಡಿ ಎಂದು ತಹಶೀಲ್ಧಾರ ಮನವಿ ಮಾಡಿದ್ದಾರೆ. ಪಟ್ಟಣ ಪಂಚಾಯತ ಕಛೇರಿ ಮುಂದೆ ತಪಾಸಣಾ ಹಾಗೂ ಜಾಗೃತಿ ಮೂಡಿಸುವ ಕಾರ್ಯವು ನಡೆಯುತ್ತಿದೆ. ೨೧ ದಿನಗಳ ಕಾಲ ಮನೆಯಲ್ಲಿದ್ದು ಸಹಕರಿಸಿ ಎನ್ನುವುದು ಎಲ್ಲರ ಆಶಯವಾಗಿದೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.