December 22, 2024

Bhavana Tv

Its Your Channel

ಪಾದಚಾರಿಗಳಿಗೆ ಪೋಲೀಸ ನೆರವು

ಹೊನ್ನಾವರ ಮಾ. ೨೯ : ಹುಬ್ಬಳ್ಳಿ ಗ್ರಾಮೀಣ ಭಾಗದಿಂದ ಮಂಗಳೂರಿಗೆ ಕೆಲಸಕ್ಕೆ ಹೋಗಿದ್ದ ಕಾರ್ಮಿಕರನ್ನು ನಾಲ್ಕು ದಿನದ ಹಿಂದೆ ಬಿಡುಗಡೆ ಮಾಡಿ ಕಳಿಸಲಾಗಿತ್ತು. ಇಂತಹ ೨೦ ಕಾರ್ಮಿಕರು ಮಂಗಳೂರಿನಿAದ ನಡೆಯುತ್ತ ನಿನ್ನೆ ಮುರ್ಡೇಶ್ವರಕ್ಕೆ ಬಂದಿದ್ದರು. ಇಂದು ಹೊನ್ನಾವರ ಠಾಣೆಯ ಬಳಿ ಅವರು ಪೋಲೀಸರಿಗೆ ತಮ್ಮ ಗೋಳು ತೋಡಿಕೊಂಡರು.
ನಮ್ಮ ಆರೋಗ್ಯ ತಪಾಸಣೆ ಮಾಡಿ ಕಳಿಸಲಾಗಿದೆ, ಮಕ್ಕಳು, ಹೆಂಗಸರು ಹೆಚ್ಚ ಜನ ಇದ್ದಾರೆ. ನಡೆದು ಸುಸ್ತಾಗಿದೆ, ಹೇಗಾದರೂ ಮಾಡಿ ಊರಿಗೆ ಕಳಿಸಿಕೊಡಿ ಎಂದು ವಿನಂತಿಸಿದರು. ಇದಕ್ಕೆ ಸ್ಪಂದಿಸಿದ ಪೋಲೀಸರು ಅವರಿಗೆ ತಿನ್ನಲು ಮಸಾಲೆ, ಅವಲಕ್ಕಿ, ಬಾಳೆಹಣ್ಣು, ಮೊದಲಾದವುಗಳ ಜೊತೆ ನೀರು ಬಾಟಲಿಗಳನ್ನು ಕೊಟ್ಟು ಹುಬ್ಬಳ್ಳಿಗೆ ಹೋಗುವ ಲಾರಿ ಹತ್ತಿಸಿಕೊಟ್ಟರು. ಸಮಾಧಾನದಲ್ಲಿ ತಮ್ಮ ಸರಂಜಾಮುಗಳೊAದಿಗೆ ಲಾರಿ ಏರಿ ಹೊರಟರು. ಬಂದ್ ತೃಪ್ತಿಕರವಾಗಿ ಮುಂದುವರಿದಿದ್ದು ಪೋಲೀಸರ ಕಾವಲು ಮುಂದುವರಿದಿದೆ. ವಾರ್ಡಿಗೆ ತರಕಾರಿ ಮತ್ತು ಕಿರಾಣಿ ಸಾಮಗ್ರಿಗಳ ಪೂರೈಕೆಯಾಗುತ್ತಿದೆ. ಔಷಧ ಅಂಗಡಿಗಳು ತೆರೆದಿವೆ, ಇನ್ನು ಒಂದೆರಡು ದಿನಗಳಲ್ಲಿ ಸ್ಟಾಕ್ ಖಾಲಿಯಾಗಲಿದ್ದು ಸಗಟು ಪೂರೈಕೆಗೆ ಅಧಿಕಾರಿಗಳು ಪರವಾನಿಗೆ ಕೊಡಿಸಬೇಕಾಗಿದೆ. ಒಂದು ವಾರ ಮಾತ್ರ ಕಳೆದಿದ್ದು ಇನ್ನೆರಡು ವಾರದಲ್ಲಿ ಕೊರೊನಾ ಮಾಯವಾಗಲಿ ಎಂದು ಪ್ರಾರ್ಥಿಸಿ ಕಾಯುವುದೊಂದೇ ಮಾರ್ಗ.

error: