April 27, 2024

Bhavana Tv

Its Your Channel

ಅಂಗನವಾಡಿ, ಆಶಾಕಾರ್ಯಕರ್ತೆಯರ ಸೇವೆ

ಹೊನ್ನಾವರ ಮಾ. ೨೯ : ಗ್ರಾಮೀಣ ಭಾಗದಲ್ಲಿ ಜ್ವರ ಪೀಡಿತರನ್ನು ಗುರುತಿಸಲು ಇಂದಿನಿAದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಹಾಯ ಪಡೆಯಲಾಗಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಹೇಳಿದರು. ಇಂದು ಆಗಮಿಸಿದ ಇವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಳಿಸಲಾಗಿದೆ.
ಮುಂಜಾನೆ ೯ಗಂಟೆಗೆ ಮೇಲಾಧಿಕಾರಿಗಳು ಬರಹೇಳಿದ್ದರು, ೧೨ಗಂಟೆಯವರೆಗೆ ಯಾರೂ ಬರದೇ ಇರುವ ಕಾರಣ ಅಂಗನವಾಡಿ ಕಾರ್ಯಕರ್ತೆಯರ ಸಂಘದ ರಾಜ್ಯಕಾರ್ಯದರ್ಶಿ ಅನಿತಾ ಶೇಟ್ ಮಾಧ್ಯಮದೊಂದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದಳು. ನಾವು ಬಂದು ೪ತಾಸುಗಳಾಗಿವೆ, ಇಲ್ಲಿ ಉತ್ತರ ಕೊಡುವವರೇ ಇಲ್ಲ. ಆರೋಗ್ಯ ಇಲಾಖೆ, ಕಂದಾಯ ಇಲಾಖೆಯ ಯಾರೂ ಬರಲಿಲ್ಲ. ನಾವು ಕೆಲಸಮಾಡಲು ಸಿದ್ಧರಿದ್ದೇವೆ, ನಮಗೆ ಭದ್ರತೆಯೇನು. ಸೆನಿಟೈಸರ್, ಮಾಸ್ಕ್ ಯಾವುದೂ ಕೊಡಲಿಲ್ಲ. ನಾವು ಮಕ್ಕಳು, ಮರಿಯನ್ನು ಮನೆಯಲ್ಲಿ ಬಿಟ್ಟುಬಂದಿದ್ದೇವೆ, ಸಂಜೆ ಮನೆಗೆ ಹೋಗಬೇಕು. ನಮ್ಮ ಆರೋಗ್ಯದ ಗ್ಯಾರಂಟಿ ಯಾರದುಎಂದು ಪ್ರಶ್ನಿಸಿದ ಅವರು ಮಹಿಳೆಯರದಾ ತಮ್ಮನ್ನು ಸತಾಯಿಸುವದರ ಕುರಿತು ಆಕ್ಷೇಪ ವ್ಯಕ್ತಮಾಡಿದರು.

error: