October 4, 2024

Bhavana Tv

Its Your Channel

ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ

ಜೊಯಿಡಾ: ರಾಜ್ಯದ ಗಡಿ ಪ್ರದೇಶಗಳ ಕನ್ನಡ ಶಾಲೆಗಳ ಅಭಿವೃದ್ದಿ ಹಾಗೂ ಅಲ್ಲಿಯ ವಿದ್ಯಾರ್ಥಿಗಳಲ್ಲಿ ಚಿಕ್ಕಂದಿನಿoದಲೇ ಕನ್ನಡ ಭಾಷೆಯ ಕುರಿತು ಅಭಿಮಾನ ಮೂಡಿಸುವ ರೀತಿಯಲ್ಲಿ ಕನ್ನಡತನ ಕಾಪಿಟ್ಟುಕೊಳ್ಳುವ ಮತ್ತು ಭಾಷಾ ಸಾಮರಸ್ಯ ವೃದ್ಧಿಸುವ ನಿಟ್ಟಿನಲ್ಲಿ ನಿಟ್ಟಿನಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ  ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಇದೀಗ ತಾಲೂಕಿನ ಉಳವಿ ಕ್ಷೇತ್ರದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ನುಡಿದರು. 
ಅವರು ಶ್ರೀ ಕ್ಷೇತ್ರ ಉಳವಿಯ ಚೆನ್ನ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಹಾಗೂ ಹಾವೇರಿಯ ಮಕರಂದ ಸ್ವರ ಸಂಗೀತ ಕಲಾ ಸಂಸ್ಥೆ ಇವರ ಸಹಭಾಗಿತ್ವದಲ್ಲಿ ಸ್ವಾತಂತ್ಯç ಅಮೃತ ಮಹೋತ್ಸವ ಪ್ರಯುಕ್ತ ಗಡಿ ಪ್ರದೇಶ ಉಳವಿಯಲ್ಲಿ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. 
ಗಡಿ ಪ್ರದೇಶದ ಜನರ ಭಾವನೆಗಳಿಗೆ ಸ್ಪಂಧಿಸಿ ಕನ್ನಡ ಪ್ರಜ್ಞೆ ಅರಳಿಸುವ ಮೂಲಕ ಕನ್ನಡ ಶಾಲೆಗಳ ಸಶಕ್ತೀಕರಣದೊಂದಿಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಸರಕಾರ 2010 ರಲ್ಲಿ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ರಾಜ್ಯದ 63 ತಾಲೂಕುಗಳು ಬರುತ್ತಿದ್ದು, ಈ ಭಾಗಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ ಎಂದು ಡಾ. ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಕವಿಗಳಾದ ಸತೀಶ ಕುಲಕರ್ಣಿ,  ಮಾಸ್ಕೇರಿ ಎಂ.ಕೆ. ನಾಂiÀiಕ, ಹಿರಿಯ ಪತ್ರಕರ್ತ, ಹಣತೆ ಉತ್ತರ ಕನ್ನಡ ಸಂಘಟನೆಯ ಜಿಲ್ಲಾ ಪ್ರಧಾನ ಸಂಚಾಲಕ ಎನ್. ಜಯಚಂದ್ರನ್, ಖ್ಯಾತ ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ಗ್ರಾಮ ಪಂಚಾಯತ ಅಧ್ಯಕ್ಷೆ ಮಂಗಲಾ ಮಿರಾಶಿ, ಕೆ.ವಿ.ಜಿ ಬ್ಯಾಂಕ್ ಮ್ಯಾನೇಜರ್ ದುರ್ಗೇಶ ದೊಡ್ಡಮನಿ, ಕ್ಷೇತ್ರದ ಮುಖ್ಯ ಅರ್ಚಕ ಕಲ್ಮಠ ಶಾಸ್ತಿçÃ, ಸಾಹಿತಿ ಸಿದ್ಧರಾಜ ಪೂಜಾರಿ ಉಪಸ್ಥಿತರಿದ್ದು ಶುಭ ಹಾರೈಸಿದರು. 

ಮಕರಂದ ಸ್ವರ ಸಂಗೀತ ಕಲಾ ಸಂಸ್ಥೆ ಅಧ್ಯಕ್ಷೆ ರಾಜೇಶ್ವರಿ ಆರ್. ಭಿಷ್ಠನಗೌಡರ ಸ್ವಾಗತಿಸಿದರು. ನ್ಯಾಯವಾದಿ ಜಯಾ ಡಿ. ನಾಯ್ಕ ವಂದಿಸಿದರು. ಶ್ರೀನಿವಾಸ್ ವಿ. ರಾಘವ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಸಂಭ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ದಾಂಡೇಲಿ ಸುಸ್ವರ ಸಂಗೀತ ಸಂಸ್ಥೆಯ ಶಶಿಕಲಾ ಗೋಪಿ, ಶ್ರೀನಿವಾಸ್ ಕುಲಕರ್ಣಿ, ಶ್ರೀಧರ ಕುಲಕರ್ಣಿ, ನಾಗಾರ್ಜುನ, ನಂದಿನಿ ನಾಯ್ಕ, ರಾಜೇಶ್ವರಿ ಆರ್. ಭಿಷ್ಠನಗೌಡರ, ಜ್ಯೋತಿ ಹಿರೇಮಠ, ಮೇಘನಾ ಹಳಿಯಾಳ ಅÀವರಿಂದ ಭಾವ ಸಂಗೀತ ಕಾರ್ಯಕ್ರಮ ನಡೆಯಿತು. ದಾಂಡೇಲಿಯ ಸುಸ್ವರ ಸಂಗೀತ ವಿದ್ಯಾ ಸಂಸ್ಥೆಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಂದ ಸಮೂಹ ಗಾಯನ ನಡೆಯಿತು. ಅನಂತರ ಕವಿ ಸತೀಶ ಕುಲಕರ್ಣಿ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾದ ಕವಿಗೊಷ್ಠಿಯಲ್ಲಿ ಜಿ.ಎಂ.ಓoಕಾರಣ್ಣನವರ, ವಾಗೀಶ ಹುಗಾರ, ಮಧುಮತಿ ಚಿಕ್ಕಗೌಡರ್, ಲತಾ ಮಂಜಪ್ಪ, ಅನುಪಮ ಡಿ. ಹಿರೇಮಠ, ರೇಣುಕಾ ಪಿ. ನರಗುಂದ ಕಾವ್ಯ ವಾಚನ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಶೇಖರ ದಂಪತಿ, ಸಂಗೀತ ನಿರ್ದೇಶಕ ಮೃತ್ಯುಂಜಯ ದೊಡ್ಡವಾಡ, ಹಿರಿಯ ಪತ್ರಕರ್ತ ಎನ್. ಜಯಚಂದ್ರನ್ ದಂಪತಿ, ಹಿರಿಯ ಕವಿಗಳಾದ ಸತೀಶಕುಲಕರ್ಣಿ, ಮಾಸ್ಕೇರಿ ಎಂ.ಕೆ.ನಾಯಕ, ಹಣತೆ ಸಂಘಟನೆಯ ತಾಲೂಕಾಧ್ಯಕ್ಷ ರಾಘವೇಂದ್ರ ಗಡಪ್ಪನವರ್,, ಗಾಯಕಿ ಶಶಿಕಲಾ ಗೋಪಿ ಅವರನ್ನು ಸನ್ಮಾನಿಸಲಾಯಿತು.

error: