September 16, 2024

Bhavana Tv

Its Your Channel

ಮುಂಡಗೋಡ ತಾಲೂಕಿನಲ್ಲಿ ನಡೆದ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನ

ವರದಿ: ವೇಣುಗೋಪಾಲ ಮದ್ಗುಣಿ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಆರನೇಯ ಕನ್ನಡ ಸಾಹಿತ್ಯ ಸಮ್ಮೇಳನವು ಮಾರ್ಚ್ ತಿಂಗಳ ಹತ್ತನೆಯ ದಿನಾಂಕದAದು ದೈವಜ್ಞ ಕಲ್ಯಾಣ ಮಂಟಪದಲ್ಲಿ ನಡೆಯಿತು. ರಾಷ್ಟ್ರ ಧ್ವಜಾರೋಹಣವನ್ನು ಶಂಕರ ಗೌಡಿ, ಪರಿಷತ್ತಿನ ಧ್ವಜಾರೋಹಣವನ್ನು ಬೊಮ್ಮಯ್ಯ ವಾಸರೆ, ಕನ್ನಡ ಧ್ವಜಾರೋಹಣವನ್ನು ಸಹದೇವಪ್ಪ ನಡಿಗೇರರವರು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ, ಕೆ.ಇ.ಬೋರ್ಡ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಗೋವಿಂದರಾವ್ ಕುಲಕರ್ಣಿ ಯವರು ನೆರವೇರಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ವಿವಿಧ ಜನಾಂಗದ ಶಾಂತಿಯ ಬೀಡು, ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿದೆ., ಕನ್ನಡಕ್ಕಾಗಿ ನಾವೇಲ್ಲ ಒಟ್ಟಾಗಿ ಸೇರಿ ಕೆಲಸಮಾಡಬೇಕು ಎಂದರು.ದ್ವಾರಗಳ ಉದ್ಘಾಟನೆಯನ್ನು ಶ್ರೀರಂಗ ಕಟ್ಟಿ,ಎಲ್.ಟಿ.ಪಾಟೀಲರು ಮಾಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಹದೇವಪ್ಪ ನಡಿಗೇರ ಎಲ್ಲರನ್ನೂ ಸ್ವಾಗತಿಸಿದರು.ಆಶಯ ನುಡಿಯನ್ನು ಜಿಲ್ಲಾಧ್ಯಕ್ಷರಾದ ಬೊಮ್ಮಯ್ಯ ವಾಸರೆಯವರು ಮಾಡಿದರು.ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ರಾಜಶೇಖರ ನಾಯ್ಕರವರು ಈಗಿನ ಅಧ್ಯಕ್ಷರಾದ ಚಿದಾನಂದ ಪಾಟೀಲರಿಗೆ ಧ್ವಜವನ್ನು ಹಸ್ತಾಂತರಿಸಿದರು.ಪ್ರಧಾನ ವೇದಿಕೆಯ ಪರಿಚಯವನ್ನು ವಸಂತ ಕೋಣಶಾಲಿ,ದ್ವಾರಗಳ ಪರಿಚಯವನ್ನು ಎಸ್.ಕೆ.ಬೋರ್ಕರ,ಸಂಗಪ್ಪ ಕೋಳುರ, ಶಾರದಾಬಾಯಿ ರಾಠೋಡ ನೆರವೇರಿಸಿದರು.ವೇದಿಕೆಯಲ್ಲಿ ಜಿಲ್ಲಾ ಖಜಾಂಚಿ ಮುರ್ತುಜಾಹುಸೇನ , ಶ್ರೀರಂಗ ಕಟ್ಟಿ , ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ದಯಾನಂದ ನಾಯ್ಕ, ರಾಧಾಬಾಯಿ ಶಿರಾಲಿ , ಚಂಪ ರಾಮಾಜಿ,ಶಿವಪ್ಪ ಅದರಗುಂಜಿ , ಮುಂತಾದವರು ಉಪಸ್ಥಿತರಿದ್ದರು. ವಿನಾಯಕ ಶೇಟ ನಿರೂಪಿಸಿದರು.

error: