December 20, 2024

Bhavana Tv

Its Your Channel

ಭಟ್ಕಳದ ಎಲ್ಲಾ ಎಟಿಎಮ್ ಗಳಿಗೆ ಪೌರ ಕಾರ್ಮಿಕರಿಂದ ಔಷಧಿ ಸಿಂಪಡಣೆ’

ಭಟ್ಕಳ: ಜಿಲ್ಲಾಢಳಿತದ ತುರ್ತು ಆರೋಗ್ಯ ಪರಿಸ್ಥಿತಿಯ ಕಟ್ಟುನಿಟ್ಟಿನ ಆದೇಶದಂತೆ ಭಟ್ಕಳದ ಜನರು ಮನೆಯಲ್ಲಿಯೇ ಇದ್ದು ಪಾಲನೆ ಮಾಡುತ್ತಿದ್ದು ಅತ್ತ ಕಡೆ ಪುರಸಭೆಯ ಪೌರ ಕಾರ್ಮಿಕರು ಕೋರೋನಾ ಕಡಿವಾಣಕ್ಕೆ ತಾಲೂಕಿನ ಎಲ್ಲಾ ಬ್ಯಾಂಕ್ ಎಟಿಮ್ ಗಳ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.

ಕೊರೋನಾ ಭೀತಿಯಿಂದ ಜನರು ತಮ್ಮನ್ನು ತಾವು ಮನೆಯಲ್ಲಿಯೇ ಬಂಧಿಸಿಕೊAಡಿದ್ದಾರೆ. ಇತ್ತ ಮನೆಯಲ್ಲಿನ ಜನರ ರಕ್ಷಣೆಗೆ ಪೌರ ಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದು ಈ ಕಾಯಕ ಭಟ್ಕಳದಲ್ಲಿ ಮುಂದುವರೆಯುತ್ತಿದೆ.

ಶುಕ್ರವಾರದಂದು ಬೆಳಿಗ್ಗೆಯಿಂದ ತಾಲೂಕಿನ ಎಲ್ಲಾ ಪ್ರಮುಖ ರಾಷ್ಟ್ರೀಯ ಬ್ಯಾಂಕ್, ಖಾಸಗಿ ಬ್ಯಾಂಕ್ ಹಾಗೂ ಕೋ ಆಪರೇಟಿವ್ ಬ್ಯಾಂಕಗಳ ಎಟಿಎಮ್ ಗಳ ಹೊರಾಂಗಣ, ಎಟಿಎಮ್ ಕೊಠಡಿಗಳಿಗೆ ಔಷಧಿ ಸಿಂಪಡಣೆ ಮಾಡಲಾಯಿತು. ಅದೇ ರೀತಿ ಬ್ಯಾಂಕಗಳ ಮುಖ್ಯ ದ್ವಾರಗಳ ಬಾಗಿಲಿಗೂ ಸಹ ಸಿಂಪಡಣೆ ಮಾಡಲಾಯಿತು.

ಈ ಸಿಂಪಡಣೆಯಲ್ಲಿ ಸೋಡಿಯಂ ಹೈಫೋ ಕ್ಲೋರೈಡ್ ರಾಸಾಯನಿಕ ಮಿಶ್ರಿತ ಅಂಶವಿದ್ದು ಇದರ ಸಿಂಪಡಣೆಯಿAದ ವೈರಸ್ ಗಳಿಗೆ ಕಡಿವಾಣ ಹಾಕಬಹುದು.
ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಪರವಾನಿಗೆ ಪಡೆದು ಸಿಂಪಡಣೆ ಕಾರ್ಯವನ್ನು ಪೌರ ಕಾರ್ಮಿಕರಾದ ನಾಗರಾಜ್ ಹಾಗೂ ಶ್ರೀನಿವಾಸ ಅವರು ಮಾಡಿದ್ದಾರೆ. ಇನ್ನು ಕೆಲವು ಬ್ಯಾಂಕಗಳು ಬಂದ್ ಆಗಿದ್ದು ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರ ಗಮನಕ್ಕೆ ತಂದು ಅಂತಹ ಬ್ಯಾಂಕ್ ಎಟಿಎಮ್ ಗಳಿಗೂ ಸಹ ಔಷಧಿ ಸಿಂಪಡಿಸಲಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

error: