
ಭಟ್ಕಳ ; ಪಟ್ಟಣದಲ್ಲಿ ಕರೊನಾ ವೈರಸ್‌ನ್ನು ಹತೋಟಿಗೆ ತರಲು ತಾಲೂಕಾಡಳಿತ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು ಶುಕ್ರವಾರದ ಮುಸ್ಲಿಂ ಬಂಧುಗಳು ಪ್ರಾರ್ಥನೆಯನ್ನು ಮನೆಗಳಲ್ಲಿ ನಡೆಸುವಂತೆ ಮನವೋಲಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ಯಶಸ್ವಿಯಾಗಿದೆ.

ರಾಜ್ಯದಲ್ಲಿ ಭಟ್ಕಳದಂತಹ ಚಿಕ್ಕ ಪಟ್ಟಣವೊಂದರಲ್ಲಿ ೮ ಪ್ರಕರಣಗಳು ಪತ್ತೆಯಾಗುವ ಮೂಲಕ ಹಾಟ್‌ಸ್ಪಾಟ್ ಆಗಿ ಗುರುತಿಸಲ್ಪಟ್ಟಿತ್ತು. ಇದರಿಂದ ಜಿಲ್ಲಾಡಳಿತ ಮುಜುಗರಕ್ಕೆ ಒಳಗಾಗಿದ್ದು ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಪ್ರಯತ್ನಿಸಿತ್ತು. ಒಂದು ವೇಳೆ ಭಟ್ಕಳದಲ್ಲಿ ೮ ಪ್ರಕರಣ ಪತ್ತೆಯಾಗದಿದಲ್ಲಿ ಉತ್ತರ ಕನ್ನಡ ಜಿಲ್ಲೆ ಶೂನ್ಯದಲ್ಲಿಯೆ ಇರುತ್ತಿತ್ತು. ವಿದೇಶದಿಂದ ಬಂದ ಭಟ್ಕಳಿಗರಿಗೆ ಹೋಮ್ ಕ್ವಾರಂಟೈನ್ ವಿಧಿಸಿದ್ದರೂ ಅಲ್ಲಲ್ಲಿ ತಿರುಗಾಡುತ್ತಿರುವದು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಇಡಿ ಜಿಲ್ಲೆಯಲ್ಲಿ ಭಟ್ಕಳವನು ಸೂಕ್ಷ್ಮ ಪ್ರದೇಶವನ್ನಾಗಿ ಗುರುತಿಸಿದ ಜಿಲ್ಲಾಡಳಿತ ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಆರಂಭಿಸಿದೆ. ಪೊಲೀಸರು ಗಸ್ತು ತಿರುಗುವ ಸೂಚನೆ ಸಿಕ್ಕ ಕೂಡಲೆ ಒಡಿ ಮರೆಯಾಗುತ್ತಿದ್ದ ಜನ ಅವರು ಆತ್ತ ತೆರಳುತ್ತಿರುವಂತೆ ಮತ್ತೆ ತಮ್ಮ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದರು. ಹಾಗಾಗಿ ಭಟ್ಕಳದಲ್ಲಿ ಡ್ರೋಣ್ ಕಾರ್ಯಚರಣೆ ನಡೆಸುವ ಕುರಿತು ಎಸ್‌ಪಿ ಶಿವಪ್ರಕಾಶ ದೇವರಾಜು ಸೂಚನೆ ನೀಡಿ ಅದನ್ನು ಕಾರ್ಯಗತಗೊಳಿಸಿದ್ದರು. ಕಳೆದ ಶುಕ್ರವಾರವೂ ಕೆಲವು ಮಸೀದಿಗಳಲ್ಲಿ ಗುಟ್ಟಾಗಿ ಪ್ರಾರ್ಥನೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಇಲಾಖೆಗೆ ದೊರಕಿತ್ತು. ಸಮುದಾಯದಲ್ಲಿ ಕರೊನಾ ಪಸರಿಸಬಾರದಂತೆ ತಡೆಯಲು ಶುಕ್ರವಾರ ಬೆಳಿಗ್ಗೆಯಿಂದಲೆ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದರು. ಪಟ್ಟಣದ ಮುಖ್ಯ ಪ್ರದೇಶಗಳಲ್ಲಿ ದ್ರೋಣ್ ಹಾರಾಟ ನಡೆಸಿ ಜನರ ಚಲನವಲನಗಳ ಮೇಲೆ ಕಣ್ಣಿದ್ದರು. ಇದರಿಂದ ಶುಕ್ರವಾರ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದಿದ್ದು ಜನರು ಮನೆಯಿಂದ ಹೊರಬರುವ ಸಾಹಸಕ್ಕೆ ಕೈ ಹಾಕಲಿಲ್ಲ. ಸದ್ಯ ಭಟ್ಕಳದ ಪರಿಸ್ಥಿತಿ ಒಂದು ಹಂತಕ್ಕೆ ಹತೋಟಿಯಲ್ಲಿ ಬಂದಿದ್ದು ಮುಂದಿನ ಕೆಲವು ದಿನ ಜನರು ಇದೆ ತರನಾದ ಸಹಾಕಾರ ನೀಡಬೇಕು ಎಂದು ಡಿವೈಎಸ್‌ಪಿ ಗೌತಮ್ ಕೆ.ಸಿ ವಿನಂತಿದ್ದಾರೆ.
More Stories
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನ ದೇವರ ಪಲ್ಲಕ್ಕಿ ಉತ್ಸವ
ಶ್ರೀ ಕ್ಷೇತ್ರ ಮುಗ್ವಾದಲ್ಲಿ ಮಹಾದ್ವಾರ ಮತ್ತು ರಾಜಗೋಪುರ ಉದ್ಘಾಟನೆ ಫೆಬ್ರವರಿ ೩ ರಿಂದ ೬ರವರೆಗೆ ನಡೆಯಲಿದೆ.