April 23, 2024

Bhavana Tv

Its Your Channel

ಹೆರಿಗಗೆ ಬಂದ ಮಹಿಳೆ ಸಾವು, ವೈದ್ಯರ ಮೇಲೆ ಪ್ರಕರಣ ದಾಖಲು

ಹೊನ್ನಾವರ ; ಹೆರಿಗೆಗೆಂದು ಆಸ್ಪತ್ರೆಗೆ ಬಂದಾಗ ವೈದ್ಯರ ನಿಲಕ್ಷದಿಂದ ಸಾವನ್ನಪ್ಪಿದ್ದಾಳೆಂದು ಗಂಡ ಪೊಲಿಸ್ ಠಾಣಿಯಲ್ಲಿ ದೂರು ನೀಡಿದ ಘಟನೆ ಹೊನ್ನಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಹೊನ್ನಾವರ ತಾಲೂಕಿನ ರಾಮತೀರ್ಥ ಕ್ರಾಸ ಸಮೀಪದ ವಡಗೇರಿಯ ವಿದ್ಯಾ ನಾಯ್ಕ ಆಗಿದ್ದು ಶುಕ್ರವಾರ ಹೆರಿಗೆಗಾಗಿ ಹೊನ್ನಾವರ ಕರ್ಕಿಯ ಶಾರದಾ ನರ್ಸಿಂಗ್ ಹೋಮ್‌ಗೆ ಕರೆತಂದಾಗ ವೈದ್ಯರಾದ ಕೃಷ್ಣಾನಂದ ಟಿ.ಎಸ್. ಚಿಕಿತ್ಸೆ ನೀಡಲು ಮುಂದಾದರು. ಮಧ್ಯಾಹ್ನ ಶಸ್ರ‍್ತಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವ ಸಮಯದಲ್ಲಿ ತಾಯಿ ಮೃತಪಟ್ಟಿದ್ದು ಮಗು ಆರೊಗ್ಯವಾಗಿದ್ದಾಳೆ. ಈ ಘಟನೆಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಮೃತಳ ಗಂಡನಾದ ಮೋಹನ ನಾಯ್ಕ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸೈ ಶಶಿಕುಮಾರ ತನಿಖೆ ಚುರುಕುಗೊಳಿಸಿದ್ದಾರೆ.

error: