ಭಟ್ಕಳ: ತಾಲ್ಲೂಕಿನಲ್ಲಿ ಸದ್ಯ ಕೊರೊನಾ ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದು ಜನರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಈ ನಡುವೆ ತಾಲ್ಲೂಕಿನ ಹಲವೆಡೆ ವಿವಿಧ ರಾಜ್ಯಗಳ ಜನರು ಇರುವುದು ಬೆಳಕಿಗೆ ಬಂದಿದ್ದು ಅಂತಹವರನ್ನು ಪತ್ತೆ ಮಾಡಿ, ಜೊತೆಗೆ ಸ್ಥಳೀಯರೂ ಸೇರಿದಂತೆ ಸುಮಾರು ೫೪ ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಭಟ್ಕಳದ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ವಿವಿಧ ರಾಜ್ಯದ ೩೦ ಮಂದಿ ಕಾರ್ಮಿಕರು ವಾಸವಾಗಿದ್ದರೆನ್ನುವ ಮಾಹಿತಿಯನ್ನು ತಾಲೂಕಾಡಳಿತ ಕಳೆದೆರಡು ದಿನಗಳಲ್ಲಿ ಪತ್ತೆ ಮಾಡಿದೆ. ಅವರಲ್ಲಿ ಗುಜರಾತ್‌ನ ೧೧ ಮಂದಿ, ತಮಿಳುನಾಡಿನ ೧೯ ಮಂದಿಯನ್ನು ಸದ್ಯ ಹೋಮ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಅಂಜುಮಾನ್ ಕಾಲೇಜಿನಲ್ಲಿ ಇರಿಸಲಾಗಿದೆ. ಇವರೆಲ್ಲರೂ ತಾಲೂಕಿನ ವಿವಿಧೆಡೆ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಇನ್ನು ಕೆಲವರು ಭಟ್ಕಳ ನಿವಾಸಿಗಳಾಗಿದ್ದು ಸ್ಥಳೀಯರೇ ಮುಂದಾಗಿ ೨೪ಮಂದಿಯನ್ನು ಪತ್ತೆ ಮಾಡಿದ್ದಾರೆ. ಅವರ ರಕ್ತ ಹಾಗೂ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು ಸದ್ಯ ಇವರೆಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೊಸದಾಗಿ ಒಟ್ಟು ೫೪ ಮಂದಿಯ ಕೊರೋನಾ ಪರೀಕ್ಷೆಯ ವರದಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನು ಕೆಲ ದಿನದ ಹಿಂದೆ ತಾಲೂಕಿನ ಸುಸಗಡಿ ವ್ಯಾಪ್ತಿಯಲ್ಲಿ ಬಿಹಾರ ಮೂಲದ ಜನರು ಜ್ವರ ಹಾಗೂ ಕೆಮ್ಮಿನಿಂದ ಬಳುತ್ತಿದ್ದ ಬಗ್ಗೆ ತಾಲೂಕಿನ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಕೈಗೊಂಡ ಕ್ರಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲವಾಗಿದ್ದು, ತಾಲೂಕಾಡಳಿತ ಕಾರ್ಯ ಪ್ರವೃತವಾಗಬೇಕಾಗಿದೆ.
ಸದ್ಯ ಲಾಕ್ ಡೌನ್ ಹಿನ್ನಲೆ ಭಟ್ಕಳದಲ್ಲಿ ಕೊರೊನಾ ಸೋಂಕು ಹರಡುವಿಕೆ ಕಡಿಮೆಯಾಗಿದ್ದು ತಾಲ್ಲೂಕಾಡಳಿತ ಸಹ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇದೀಗ ಹೊರರಾಜ್ಯದ ಕಾರ್ಮಿಕರಿಂದಾಗಿ ತಾಲ್ಲೂಕಿನಲ್ಲಿ ಆತಂಕ ಉಂಟಾಗುವAತಾಗಿದ್ದು ಸದ್ಯ ಕಳುಹಿಸಲಾಗಿರುವ ಮಾದರಿಗಳ ಪರೀಕ್ಷಾ ವರದಿಯತ್ತ ಎಲ್ಲರ ಗಮನ ನೆಟ್ಟಿದೆ
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.