November 14, 2024

Bhavana Tv

Its Your Channel

ಲಾಕ್ ಡೌನ್ ಸಮಯದಲ್ಲಿ ರಿಕ್ಷಾ ಚಾಲಕರಿಗೆ ಧನಸಹಾಯ ಮಾಡುವ ಮೂಲಕ ನೆರವಾದ ಶಾಸಕ ದಿನಕರ ಶೆಟ್ಟಿ

ಮಾರ್ಚ ೨೪ ರಿಂದ ಕರೋನಾ ನಿಯಂತ್ರಣಕ್ಕೆ ಭಾರತ ಲಾಕ್ ಡೌನ್ ಮಾಡಲಾಗಿತ್ತು. ಇದರ ನಂತರ ದಿನನಿತ್ಯ ಬಾಡಿಗೆ ಮೂಲಕ ದಿನನಿತ್ಯದ ಜೀವನ ನಡೆಸುತ್ತಿದ್ದ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಇದನ್ನು ಮನಗಂಡ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಆಟೋ ಚಾಲಕರ ನೆರವಿಗೆ ಧಾವಿಸಿ ಪ್ರತಿ ಆಟೋದವರಿಗೆ ತಲಾ ೧೦೦೦ರೂನಂತೆ ನೆರವಿಗೆ ಮುಂದಾಗಿದ್ದಾರೆ.ಕುಮುಟಾ ಪಟ್ಟಣದ ೭೦೦ ಹಾಗೂ ಹೊನ್ನಾವರ ಪಟ್ಟಣದ ೩೦೦ ಆಟೋಗಳಿಗೆ ಹಣ ನೀಡಿದ್ದಾರೆ. ಅಲ್ಲದೇ ಗ್ರಾಮೀಣ ಭಾಗದವರಿಗೂ ನೆರವು ನೀಡಲು ಚಿಂತನೆ ನಡೆಸಿದ್ದು ಅದರಂತೆ ಕವಲಕ್ಕಿ ಹುಲಿಯಪ್ಪನಕಟ್ಟೆಯ ೨೯ ಆಟೋ ಚಾಲಕರಿಗೆ ಭಾಸ್ಕೇರಿ, ಸಂತೆಗುಳಿಯ ೧೭ ಆಟೋಗಳಿಗೆ ತಲಾ ಒಂದು ಸಾವಿರ ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ.
ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ದೇಶಾದ್ಯಂತ ಮಹಾಮಾರಿ ಕರೊನಾ ನಿಯಂತ್ರಣಕ್ಕೆ ಮುಂದಾದ ಪ್ರಧಾನಿ ಮೋದಿಯವರು ಲಾಕ್ ಡೌನ ಘೋಷಣೆ ಮಾಡಿದ್ದು ನನ್ನ ಕ್ಷೇತ್ರದಲ್ಲಿ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅಲ್ಲದೇ ಆರೊಗ್ಯ ಇಲಾಖೆಯ ವೈದ್ಯರು, ನರ್ಸಗಳು ಸಿಬ್ಬಂದಿಗಳು, ಪೋಲಿಸ್ ಇಲಾಖೆ, ಆಶಾಕಾರ್ಯಕರ್ತೆಯರು ಹಗಲಿರುಳು ಶ್ರಮಿಸಿದ್ದಾರೆ.ಅಲ್ಲದೇ ಈ ಮಧ್ಯೆ ರಿಕ್ಷಾ ಚಾಲಕರ ಸಮಸ್ಯೆ ಅರಿತುನಮ್ಮ ಪಕ್ಷದ ಕಾರ್ಯಕರ್ತರ ಸಹಕಾರದಿಂದ ಪಟ್ಟಣವಷ್ಟೆ ಅಲ್ಲದೇ ಗ್ರಾಮೀಣ ಭಾಗದವರಿಗೂ ೧ಸಾವಿರದಂತೆ ಹಣ ನೀಡಿದ್ದೇನೆ. ಇದರಿಂದ ಅವರಿಗೆ ಅನೂಕುಲವಾಗಲಿದೆ. ಅಲ್ಲದೆ ಈಗಾಗಲೇ ಕೆಲ ಗ್ರಾಮಗಳಿಗೆ ತರಕಾರಿಯನ್ನು ಉಚಿತವಾಗಿ ವಿತರಿಸಿದ್ದು ದಿನಸಿ ವಿತರಿಸಲು ಈಗಾಗಲೇ ೬೦೦ ಪ್ಯಾಕ್ ಸಿದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷರಾದ ಟಿ.ಎಸ್.ಹೆಗಡೆ, ಸುರೇಶ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸುಬ್ರಹ್ಮಣ್ಯ ಶಾಸ್ತ್ರಿ, ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಮುಖಂಡರಾದ ಎಮ್.ಎಸ್.ಹೆಗಡೆ, ನಾರಾಯಣ ಹೆಗಡೆ, ದತ್ತಾತ್ರೇಯ ಮೇಸ್ತ, ಸುಭಾಷ ಗೌಡ, ರಮೇಶ ನಾಯ್ಕ ಹಾಜರಿದ್ದರು.

error: