April 13, 2024

Bhavana Tv

Its Your Channel

ಅನಾರೋಗ್ಯ ಪೀಡಿತರ ಸಂಕಟ ಅಂತರ್‌ಜಿಲ್ಲಾ ಓಡಾಟ : ಪರವಾನಿಗೆ ಅಧಿಕಾರ ಜಿಲ್ಲಾಧಿಕಾರಿಗಳಿಗೆ

ಹೊನ್ನಾವರ ಎ. ೦೬ : ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜಿಲ್ಲೆಯ ೧೧ತಾಲೂಕುಗಳ ಜನ ನೆರೆ ಜಿಲ್ಲೆಯ ದೊಡ್ಡ ಆಸ್ಪತ್ರೆಗಳನ್ನು ನಂಬಿಕೊಂಡಿದ್ದಾರೆ. ಈ ವರೆಗೆ ನೆರೆ ಜಿಲ್ಲೆಗೆ ವೈದ್ಯಕೀಯ ಚಿಕಿತ್ಸೆಗೆ ಹೋಗಲು ತಾಲೂಕಾ ದಂಡಾಧಿಕಾರಿಗಳು ಪರವಾನಿಗೆ ನೀಡುತ್ತಿದ್ದರು. ಇಂದಿನಿಂದ ಈ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿರುವುದರಿಂದ ಅನಾರೋಗ್ಯವುಳ್ಳವರಿಗೆ ಕಷ್ಟ ಬಂದೊದಗಿದೆ.
ಜಿಲ್ಲಾಸ್ಪತ್ರೆಯೂ ಸಾಕಷ್ಟು ಸುಸಜ್ಜಿತವಾಗಿಲ್ಲ. ಕೊರೊನಾ ಪೀಡಿತರಿಗೆ ನೌಕಾನೆಲೆಯ ಪತಂಜಲಿ ಆಸ್ಪತ್ರೆ ಇಲ್ಲವಾದರೆ ಜಿಲ್ಲೆಯಲ್ಲಿ ಚಿಕಿತ್ಸೆ ಸಾಧ್ಯವಿರಲಿಲ್ಲ. ನೆರೆ ಜಿಲ್ಲೆಗೆ ಹೋಗುವವರಿಗೆ ನಂತರ ಉಪವಿಭಾಗಾಧಿಕಾರಿಗಳು ಪರವಾನಿಗೆ ಕೊಡುತ್ತಿದ್ದರು. ಎರಡು ತಾಲೂಕುಗಳಿಗೆ ಒಬ್ಬ ಉಪವಿಭಾಗಾಧಿಕಾರಿ ಇರುವುದರಿಂದ ವೈದ್ಯರ ಶಿಫಾರಸ್ಸಿನ ಮೇರೆಗೆ ತಾಲೂಕಾ ದಂಡಾಧಿಕಾರಿಗಳು ಪರವಾನಿಗೆ ನೀಡಬೇಕು ಎಂಬುದು ಜನರ ಬೇಡಿಕೆಯಾಗಿತ್ತು. ಇಂದು ಒಂದು ರ‍್ಷ ಮೂರು ತಿಂಗಳ ಮಗುವಿಗೆ ಕರುಳು ಸುತ್ತಿಕೊಂಡ ಪರಿಣಾಮವಾಗಿ ತರ‍್ತು ದೊಡ್ಡ ಆಸ್ಪತ್ರೆಗೆ ಒಯ್ಯಬೇಕಿತ್ತು. ತಾಲೂಕಾ ವೈದ್ಯಾಧಿಕಾರಿಗಳಿಂದ ಪರವಾನಿಗೆ ಮತ್ತು ಆಯುಷ್ಮಾನ್ ಪ್ರಯೋಜನ ಪಡೆಯಲು ಪತ್ರ ಪಡೆಯಲಾಗಿತ್ತು. ಪರವಾನಿಗೆ ಕೇಳಿ ತಹಶೀಲ್ದಾರರಿಗೆ ಹೋದಾಗ ಅಂತರ್ ಜಿಲ್ಲಾ ಓಡಾಟದ ಪರವಾನಿಗೆ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ ಎಂದು ಹೇಳಿದರು.
ತರ‍್ತು ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಬರೆದರೂ ಪರವಾನಿಗೆ ಸಾಧ್ಯವಾಗಲಿಲ್ಲ. ಮಗುವನ್ನು ಅಂಬುಲೆನ್ಸ್ನಲ್ಲಿ ಕೂರಿಸಿಕೊಂಡು ಪೋಲೀಸರಿಗೆ ವಿನಂತಿಸಿಕೊಳ್ಳುತ್ತ ನೆರೆ ಜಿಲ್ಲೆಯ ಆಸ್ಪತ್ರೆಯನ್ನು ಅವರು ತಲುಪಿದ್ದಾರೆ. ಕಾರಿನಲ್ಲಿ ಹೋದರೆ ರ‍್ಚು ಕಡಿಮೆಯಾಗುತ್ತಿತ್ತು. ಅಂಬುಲೆನ್ಸ್ ಬಾಡಿಗೆ ಮೂರುಪಟ್ಟು ಹೆಚ್ಚು ಪಡೆಯಲಾಗುತ್ತದೆ. ಹೃದಯಾಘಾತವಾದಾಗ ಎಂಜಿಯೋಗ್ರಾಂ ಮಾಡಲು ಜಿಲ್ಲೆಯಲ್ಲಿ ಒಂದೂ ಕ್ಯಾತ್ ಲ್ಯಾಬ್ ಇಲ್ಲ. ಸಮಸ್ಯೆಯ ಹೆರಿಗೆಗೆ ತರ‍್ತು ಚಿಕಿತ್ಸೆ ಲಭ್ಯವಿಲ್ಲ. ಅಪಘಾತ ಸಂರ‍್ಭದಲ್ಲಿ ತಲೆ, ಎದೆ, ಕರುಳಿಗೆ ಪೆಟ್ಟಾಗಿ ರಕ್ತಸ್ರಾವವಾಗುತ್ತಿದ್ದರೆ ಜಿಲ್ಲೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲ. ೧೧ತಾಲೂಕುಗಳ ಜನ ತಮ್ಮ ನೆರೆಯ ಶಿವಮೊಗ್ಗಾ, ಉಡುಪಿ, ಹುಬ್ಬಳ್ಳಿ ಹಾಗೂ ಗೋವಾ ಆಸ್ಪತ್ರೆಯ ಕಡೆ ಮುಖ ಮಾಡಬೇಕಾಗಿದೆ.
ಜಿಲ್ಲೆಯ ಮನೋರೋಗಿಗಳಲ್ಲಿ ಹೆಚ್ಚಿನವರು ಮತ್ತು ಹೃದಯಶಸ್ತçಚಿಕಿತ್ಸೆ, ಮೂತ್ರಪಿಂಡ ಬದಲಾವಣೆ, ಮೊದಲಾದ ಗಂಭೀರ ಶಸ್ತçಕ್ರಿಯೆ ಮಾಡಿಸಿಕೊಂಡವರು ತಮಗೆ ಬೇಕಾದ ಔಷಧಿ ಮತ್ತು ವೈದ್ಯಕೀಯ ಸಲಹೆಗಾಗಿ ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ ನೆರೆ ಜಿಲ್ಲೆಯ ವೈದ್ಯರನ್ನು ಕಾಣಬೇಕಾಗುತ್ತದೆ. ಇಂಥವರಿಗೆ ಕೂಡ ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆಯುವುದು ಕಷ್ಟಸಾಧ್ಯವಾಗುತ್ತದೆ. ಹೆಚ್ಚಿನ ಚಿಕಿತ್ಸಾ ಸೌಲಭ್ಯವಿಲ್ಲದ ಕಾರಣ ಸ್ಥಳೀಯ ರ‍್ಕಾರಿ ವೈದ್ಯರ ಶಿಫಾರಸ್ಸಿನ ಆಧಾರದಲ್ಲಿ ತಾಲೂಕಾ ದಂಡಾಧಿಕಾರಿಗಳು ಇಂಥವರಿಗೆ ನಮ್ಮ ನೆರೆ ಜಿಲ್ಲೆಗೆ ಚಿಕಿತ್ಸೆಗೆ ಹೋಗಿಬರಲು ಮುಖ್ಯಮಂತ್ರಿಗಳು ಪರವಾನಿಗೆ ನೀಡಬೇಕಾಗಿದೆ. ನಿತ್ಯವೂ ಜನ ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೂಡಲೇ ಜಿಲ್ಲೆಯ ಮಂತ್ರಿಗಳು, ಶಾಸಕರು ಈ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರವಾನಿಗೆ ಕೊಡಿಸಬೇಕಾದ ಅಗತ್ಯವಿದೆ ಎಂಬುದು ಜನಾಭಿಪ್ರಾಯ.
ಜಿ.ಯು.ಭಟ್. ಹೊನ್ನಾವರ

error: