September 17, 2024

Bhavana Tv

Its Your Channel

ಲಾಕ್ ಡೌನ್ ಇದ್ದರೂ ಅನಾವಶ್ಯಕ ವಾಹನದಲ್ಲಿ ಓಡಾಡುವವರಿಗೆ ದಂಡದ ಬಿಸಿ ಮುಟ್ಟಿಸಿದ ಹೊನ್ನಾವರ ಪೋಲಿಸರು

ಪಾಸ್ ಇದ್ದವರು ಪೆಟ್ರೂಲ್ ಹಾಕಿಕೊಂಡು ದುರುಪಯೋಗ ಮಾಡಿಕೊಂಡಿದ್ದು ಪತ್ತೆಯಾದಲ್ಲಿ ಅವರಿಗೂ ದಂಡದ ಜೊತೆ ಪಾಸ್ ಕೂಡಾ ರದ್ದು ಎಂದು ಎಚ್ಚರಿಸಿದ ಇಲಾಖೆ
ಹೊನ್ನಾವರ ;ಮಾರ್ಚ್ ೨೪ರಿಂದ ಭಾರತ ಲಾಕ್ ಡೌನ ಇದ್ದು ಹೊನ್ನಾವರ ತಾಲೂಕಿನಲ್ಲಿಯೂ ಪೋಲಿಸ್ ಇಲಾಖೆ ಪಟ್ಟಣ ಪಂಚಾಯತ್, ತಾಲೂಕ ಆಡಳಿತ ಕಟ್ಟುನಿಟ್ಟಾಗಿ ಪಾಲಿಸಲು ಹಲವು ಕ್ರಮ ಕೈಗೊಳ್ಳಲು ಮುಂದಾಗಿತ್ತು. ಸರ್ಕಾರ ಕರೋನಾ ನಿಯಂತ್ರಣಕ್ಕೆ ತರಲು ಪ್ರತಿಯೊರ್ವರಿಗೂ ಮನೆಯಲ್ಲಿಯೇ ಇರುವಂತೆ ಸೂಚಿಸಿತ್ತು. ಈ ಮಧ್ಯೆ ಬೇಕಾಬಿಟ್ಟಿ ವಾಹನ ಸಂಚಾರ ನಡೆಸುವವರಿಗೂ ಲಾಠಿ ರುಚಿ ತೋರಿಸಿತ್ತು. ಗ್ರಾಮೀಣ ಭಾಗದಲ್ಲಿಯೂ ಕ್ರೀಕೆಟ್ ಆಡುವವರು ಹಾಗೂ ರಸ್ತೆ ಪಕ್ಕ ಕುಳಿತು ಹರಟೆ ಹೊಡೆಯುವದಕ್ಕೂ ನಿಯಂತ್ರಣಕ್ಕೆ ತಂದಿತ್ತು. ಈ ಮಧ್ಯೆ ತಾಲೂಕು ಆಡಳಿತ ದಿನನಿತ್ಯ ವಸ್ತು ತರಕಾರಿ ತರಲು ಪಾಸ್ ವಿತರಣೆ ಮಾಡಿತ್ತು. ಇದರಿಂದ ಹಲವು ದಿನಗಳ ಕಾಲ ವಾಹನ ಸಂಚಾರ ಕಳೆದೆರಡು ದಿನದಿಂದ ಆರಂಭಗೊಂಡು ಅಲಲ್ಲಿ ಬೈಕ್ ಆಟೊ ಕಾರು ಸಂಚಾರ ನಡೆಯುತ್ತಿತ್ತು. ಈ ಮಧ್ಯೆ ತಾಲೂಕಿನ ಪೆಟ್ರೂಲ್ ಬಂಕ್ ನಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಆದೇಶವಿದ್ದರೂವಾಹನ ಸಂಚಾರ ನಡೆಯುತ್ತಿತ್ತು. ಸೋಮವಾರ ವಿನಾ ಕಾರಣ ಓಡಾಡುವ ವಾಹನವನ್ನು ತಡೆದು ವಿಚಾರಿಸಿ ತಾಲೂಕಿನ ವಿವಿಧ ಭಾಗದಲ್ಲಿ ೩೦ಕ್ಕೂ ಹೆಚ್ಚು ವಾಹನಗಳಿಂದ ದಂಡ ವಸೂಲಿ ಮಾಡಿ ಎಚ್ಚರಿಸಿದ್ದಾರೆ‌. ನಾಳೆಯಿಂದ ಕಾನೂನು ಇನ್ನಷ್ಟು ಬಿಗಿಗೊಳಸಲಿದ್ದೆವೆ ಎಂದರು. ಅಲ್ಲದೇ ಪಾಸ್ ಇರುವವರ ಮೇಲೂ ನಿಗಾವಹಿಸಿ ಪೆಟ್ರೂಲ್ ಹಾಕಿಸಿಕೊಳ್ಳುವ ಮಾಹಿತಿ ಪಡೆಯಲು ತಿರ್ಮಾನಿಸಿದ್ದಾರೆ. ಅವಶ್ಯವೆನಿಸಿದ್ದಲ್ಲಿ ಬಂಕ್ ನಲ್ಲಿರುವ ಸಿಸಿಕ್ಯಾಮರ್ ಪರಿಶೀಲನೆ ನಡೆಸಲು ತಿರ್ಮಾನಿಸಿದ್ದಾರೆ. ಪೆಟ್ರೂಲ್ ಹಾಕಿಸಿಕೊಂಡು ಗ್ರಾಮೀಣ ಭಾಗಕ್ಕೆ ವಾಹನದಿಂದ ತೆಗೆದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವದನ್ನು ಮಾಹಿತಿ ಗಮನಕ್ಕೆ ಬಂದಿದ್ದು ಇದರ ಬಗ್ಗೆ ಸಾರ್ವಜನಿಕರು‌ ಮಾಹಿತಿ‌ ನೀಡಿದ್ದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲು ತಿರ್ಮಾನಿಸಲಾಗಿದೆ. ಲಾಕ್ ಡೌನ್ ಕಟ್ಡುನಿಟ್ಟಾಗಿ ಪಾಲಿಸದಿದ್ದಲ್ಲಿ ಕಾನೂನುಕ್ರಮಕ್ಕೆ ಪೋಲಿಸ್ ಇಲಾಖೆ ಮುಂದಾಗಿದ್ದು ಸಾರ್ವಜನಿಕರಿಗೆ ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಕರೋನಾ ನಿಯಂತ್ರಣವಾಗುತ್ತಿದ್ದು ದೇಶಾದ್ಯಂತ ಏಪ್ರೀಲ್ ೧೪ರವರೆಗೆ ಲಾಕ್ ಡೌನ್ ಪಾಲಿಸುವಂತೆ ಸೂಚಿಸಿದ್ದಾರೆ.

error: