September 17, 2024

Bhavana Tv

Its Your Channel

ಕೆ ಆರ್ ಪೇಟೆ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವರಹಾನಾಥಕಲ್ಲಹಳ್ಳಿಯ ಭೂವರಾಹಾಸ್ವಾಮಿ ದೇವಸ್ಥಾನದಲ್ಲಿ ದೀಪಜ್ಯೋತಿ

ಪ್ರಧಾನಮಂತ್ರಿ ನರೇಂದ್ರಮೋಧಿ ಅವರ ಸಂದೇಶದAತೆ ಏಪ್ರಿಲ್ ೫ರ ಭಾನುವಾರ ರಾತ್ರಿ ೯ಗಂಟೆಗೆ ಸರಿಯಾಗಿ ಸ್ವಾಮಿಗೆ ವಿಶೇಷ ಮಂಗಳಾರತಿ ಮಾಡಿ ದೀಪಜ್ಯೋತಿಯನ್ನು ಪ್ರಜ್ವಲಿಸಿ ಕೊರೋನಾ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಿಸಿ ವಿಶ್ವಕ್ಕೆ ಆರೋಗ್ಯವನ್ನು ಕರುಣಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸರಾಘವನ್ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕೊರೋನಾ ವೈರಾಣು ಭೀತಿಗೆ ಇಂದು ಇಡೀ ವಿಶ್ವವೇ ಸಿಲುಕಿದೆ ಅಪಾರವಾದ ಸಾವು-ನೋವುಗಳು ಸಂಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಬೆಳಕಿನ ಪ್ರಖರ ಶಕ್ತಿಯ ಯುದ್ಧದಲ್ಲಿ ಕೊರೋನಾ ವೈರಾಣುಗಳನ್ನು ನಾಶಪಡಿಸಿ ಇಡೀ ಭಾರತ ದೇಶ ಸೇರಿದಂತೆ ವಿಶ್ವದ ಕೊರೋನಾ ಪೀಡಿತ ರಾಷ್ಟ್ರಗಳನ್ನು ಕಾಪಾಡಿ ರಕ್ಷಿಸುವಂತೆ ಪ್ರಾರ್ಥಿಸಲಾಯಿತು.

error: