June 20, 2024

Bhavana Tv

Its Your Channel

ಸೇಫ್ ಸ್ಟಾರ್ ಸೌಹಾರ್ದ ವತಿಯಿಂದ ಪ್ರಧಾನಮಂತ್ರಿಯವರ ಪರಿಹಾರ ನಿಧಿಗೆ ೧.೫ಲಕ್ಷ ಹಾಗೂ #ಮುಖ್ಯಮಂತ್ರಿ ಪರಿಹಾರ ನಿಧಿಗೆ ೧ಲಕ್ಷ ರೂಪಾಯಿಗಳ ದೇಣಿಗೆ.

ಹೊನ್ನಾವರ : ಇಡಿ ಜಗತ್ತೆ ಮಹಾಮಾರಿ ಕೋರೋನಾ ಅಟ್ಟಹಾಸಕ್ಕೆ ಗುರಿಯಾಗಿದೆ, ಈಡಿ ದೇಶವೆ ಇದರ ವಿರುದ್ದ ಹೊರಾಡುತ್ತಿದೆ, ಈ ಸಂದರ್ಬದಲ್ಲಿ ಪ್ರತಿಯೊಬ್ಬರು ಇದರ ವಿರುದ್ದ ಒಂದಿಲ್ಲ ಒಂದು ರೀತಿಯಲ್ಲಿ ಹೋರಾಡಬೇಕಾಗಿದೆ, ಹೊನ್ನಾವರ ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಸ್ಥೆಯಲ್ಲಿ ಒಂದಾದ ಸೇಪ್ ಸ್ಟಾರ್ ಸೌಹಾರ್ಧ ಸಹಕಾರಿ ಸಂಸ್ಥೆ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳ ನಿಧಿಗೆ ತನ್ನ ಅಲ್ಪ ನಿಧಿಯನ್ನು ನೀಡಿ ಬೆಂಬಲವನ್ನು ಸೂಚಿಸಿದೆ.

ಕಳೆದ ೮ ವರ್ಷಗಳಿಂದ ಸಮಾಜ ಸೇವಕ ಆಡಳಿತ ನಿದೇಶಕರಾದ ಜಿ ಜಿ ಶಂಕರ ಅವರ ನೇತ್ರತ್ವದಲ್ಲಿ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಪಡೆದು ಮುನ್ನುಗುತ್ತಿರುವ ಈ ಸಂಸ್ಥೆ ಈ ಹಿಂದೆ ಪ್ರಕೃತಿ ವಿಕೋಪ ಸಂದರ್ಬದಲ್ಲಿ ಹಾಗೂ ಅನೇಕ ಬಡವರಿಗೆ ಅಲ್ಲದೇ ಉತ್ತರ ಕನ್ನಡದಲ್ಲಿ ಶಿಕ್ಷಣಕ್ಕೆ ಕ್ರೀಡೆಗೆ ಅಪಾರ ಧನ ಸಹಾಯ ಸಹಕಾರವನ್ನು ಸಮಾಜ ಸೇವೆಯನ್ನು ಮಾಡುತ್ತ ಮುನ್ನೆಡೆದುಕೊಂಡು ಬರುತ್ತಿದೆ, ಇಂದು ಇಡಿ ದೇಶ ಕರೋನಾ ಮಹಾಮಾರಿಗೆ ತುತ್ತಾಗಿ ಲಾಕ್ ಡೌನ್ ಆಗಿದೆ. ಇಡಿ ದೇಶದಲ್ಲಿ ಸಾರ್ವಜನಿಕರ ಮೂಲಭೂತ ಸೌಕರ್ಯವನ್ನು ಸರಕಾರವೆ ನೋಡಿಕೊಳ್ಳಲು ಸರಕಾರಕ್ಕೆ ಆರ್ಥಿಕ ಬೆಂಬಲ ಬೇಕಾಗಿದ್ದು ತಮ್ಮ ಸಂಸ್ಥೆಯಿAದ ಪ್ರಧಾನ ಮಂತ್ರಿ ನಿದಿಗೆ ೧,೫೦,೦೦೦/ ಮತ್ತು ಮುಖ್ಯಮಂತ್ರಿ ನಿದಿಗೆ ೧,೦೦,೦೦೦ ರೂಪಾಯಿಗಳ ಚೆಕ್ಕನ್ನು ಶಾಸಕ ದಿನಕರ ಶೆಟ್ಟಿಯವರ ಮುಖಾಂತರ ಇಂದು ಸಂಸ್ಥೆಯ ಆಡಳಿತ ನಿರ್ದೇಶಕರಾದ ಜಿ ಜಿ ಶಂಕರ ಹಸ್ತಾಂತರಿಸಿದರು.


ಈ ಸಂದರ್ಬದಲ್ಲಿ ಆಡಳಿತ ನಿರ್ದೇಶಕ ಜಿ.ಜಿ.ಶಂಕರ ಮಾತನಾಡಿ ನಮ್ಮ ಸಹಕಾರಿ ರಾಜ್ಯ ಹಾಗೂ ಜಿಲ್ಲೆ ಮಟ್ಟದಲ್ಲಿ ಸಂಕಷ್ಟಗೋಳಗಾದವರಿಗೆ ಸಹಾಯ ಸಹಕಾರ ನೀಡುತ್ತ ಬಂದಿದ್ದು ಕಳೆದ ೨೦೦೦ ಇಸ್ವಿಯಿಂದ ಸೇಪ್ ಸ್ಟಾರ್ ಗ್ರೂಪ್ ಹೆಸರಿನಲ್ಲಿ ಸಹಾಯ ನೀಡುತ್ತ ಬಂದಿದ್ದರು ನಾವು ಪ್ರಚಾರ ಬಯಸಿಲ್ಲ ಆದರೆ ಇಂದು ನಾವು ನೀಡುತ್ತಿರುವ ಈ ಸಹಾಯ ಎಲ್ಲರಿಗೂ ತಿಳಿಯುವಂತಾಗಿ ಇನ್ನೊಬ್ಬರು ಸಹಾಯ ನೀಡುವಂತಾಗಬೇಕು, ನಮ್ಮಿಂದ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು, ನಮ್ಮ ದೇಶ ಸಂಕಷ್ಟದಲ್ಲಿದ್ದಾಗ ನಮಗೆ ನೇರವಾಗಿ ಸಹಕಾರ ನೀಡಲು ಆಗದೇ ಇರಬಹುದು ನಮ್ಮ ಈ ದೇಣಿಗೆ ಯಿಂದ ನಮ್ಮಿಂದ ಒಂದು ದೇಶ ಸೇವೆ ಮಾಡಿದಂತಾಗುತ್ತದೆ ಎಂದರು.

ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ ದೇಶ ಲಾಕ್ ಡೌನ್ ನಿಂದ ದೇಶದ ಸಾರ್ವಜನಿಕರು ಕಷ್ಟ ಮತ್ತು ನೋವನ್ನು ಅನುಭವಿಸುತ್ತ ಇದ್ದಾರೆ ಅದನ್ನು ನಿಭಾಯಿಸುವ ಕೆಲಸ ನಮ್ಮ ಪ್ರಧಾನ ಮಂತ್ರಿಯವರು ಮಾಡಿದ್ದಾರೆ, ಅವರಿಗೆ ನಮ್ಮ ಬೆಂಬಲ ಬೇಕಾಗಿದೆ, ಇಂತ ಸಂಧರ್ಬದಲ್ಲಿ ನಮ್ಮ ಜಿಲ್ಲೆಯ ಅದರಲ್ಲೂ ನಮ್ಮ ತಾಲುಕಿನ ಸಹಕಾರಿ ಸಂಸ್ಥೆಯಾದ ಸೇಪ್ ಸ್ಟಾರ್ ಸಂಸ್ಥೆ ಜಿಲ್ಲೆಯಲ್ಲಿಯೇ ಕೋವಿಡ್-೧೯ ಪರಹಾರ ನಿದಿಗೆ ದೇಣಿಗೆ ನೀಡಿದ ಪ್ರಪ್ರಥಮ ಸಂಸ್ಥೆಯಾಗಿದೆ ಈ ಸಂದರ್ಬದಲ್ಲಿ ಸಂಸ್ಥೆಯ ಎಲ್ಲಾ ನಿರ್ದೇಶಕರಿಗೆ ಅಭಿನಂದಸುತ್ತೇನೆ ಎಂದ ಅವರು ಇವರು ನೀಡಿದ ಈ ದೇಣಿಗೆ ಇನ್ನುಳಿದ ಸಂಘ ಸಂಸ್ಥೆ ಹಾಗೂ ಧಾನಿಗಳಿಗೆ ಪ್ರೇರಣೆಯಾಗಲಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ ಮಾತನಾಡಿ ನಮ್ಮ ದೇಶದ ಪ್ರಧಾನಿಯವರ ಮಾತಿಗೆ ಎಲ್ಲರೂ ಸ್ಪಂದಿಸಿ ಕೋವಿಡ-೧೯ ವಿರುದ್ದ ಹೋರಾಟಕ್ಕೆ ಬೆಂಬಲಿಸಿ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವಿ,ಎಸ್ ಕಿಮಾನಿಕರ್, ನಿದೇಶಕರಾದ ಮಾರುತಿ ಗೌಡ, ಲಿಪರ್ಡ ರೋರ್ಡಿಗಿಸ್, ಜನರಲ್ ಮ್ಯನೇಜರ್ ಮಹೇಶ ಶೆಟ್ಟಿ, ಎಜಿಎಮ್ ಎಡವಿನ್,ಮ್ಯಾನೇಜರ ಕೇಶವ ಮೇಸ್ತ , ಬಿಜೆಪಿ ಹೊನ್ನಾವರ ಘಟಕದ ಅಧ್ಯಕ್ಷರಾದ ರಾಜು ಬಂಡಾರಿ, ಶಿವರಾಜ ಮೇಸ್ತ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್,ಎಸ್,ಹೆಗಡೆ, ದತ್ತಾತ್ರಯ ಮೇಸ್ತ, ಟಿ.ಎಸ್.ಹೆಗಡೆ, ಸುರೇಶ ಹೊನ್ನಾವರ ಶಾಸಕರ ಆಪ್ತ ಕಾರ್ಯದರ್ಶಿ ಅಶೋಕ ಭಟ್ ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: