December 22, 2024

Bhavana Tv

Its Your Channel

ಹೊನ್ನಾವರ ಪಟ್ಟಣದ ರಸ್ತೆಗಳಿಗೆ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣ ಸಿಂಪಡಣೆ

ಕೊರೊನಾ ಸೋಂಕು ಹರಡದಂತೆ ಪಟ್ಟಣವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಶ್ರಮಿಸುತ್ತಿರುವ ಪಟ್ಟಣ ಪಂಚಾಯತ ಶನಿವಾರ ಅಗ್ನಿಶಾಮಕ ದಳದ ನೆರವನ್ನು ಪಡೆದು ಪಟ್ಟಣದ ರಸ್ತೆಗಳಿಗೆ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಸಿಂಪಡಿಸಿದ್ದಾರೆ.
ತಹಶೀಲ್ದಾರ್ ವಿವೇಕ ಶೇಣ್ವಿ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಿ.ಪಿ.ಐ ವಸಂತ ಆಚಾರಿ, ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ, ಪಿ.ಎಸ್.ಐ ಶಶಿಕುಮಾರ, ನೋಡಲ್ ಅಧಿಕಾರಿ ಸುನಿಲ್ ಗಾವಡಿ ಮಾರ್ಗದರ್ಶನದಲ್ಲಿ ಪಟ್ಟಣದ ಕೋರ್ಟರಸ್ತೆ, ಶರಾವತಿ ವೃತ್ತ, ಬಜಾರ್ ರಸ್ತೆ, ಬಂದರ್ ರಸ್ತೆ, ತಾಲೂಕಾಸ್ಪತ್ರೆಯ ಆವರಣ, ತಹಶೀಲ್ದಾರ್ ಕಛೇರಿ, ಪಟ್ಟಣ ಪಂಚಾಯತ ಮುಂತಾದ ಕಡೆ ರಾಸಾಯನಿಕ ಸಿಂಪಡಿಸಿ ಶುಚಿತ್ವ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

error: