September 17, 2024

Bhavana Tv

Its Your Channel

ದ.ಕ., ಉಡುಪಿ ಬೀಗ ಮುದ್ರೆ : ನೆರೆ ಜಿಲ್ಲೆಗಳಿಗೆ ಕಂಟಕ

ಹೊನ್ನಾವರ ಎ. ೧೧ : ದಕ್ಷಿಣ ಭಾರತದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಆಸ್ಪತ್ರೆಗಳನ್ನು ಈ ಜಿಲ್ಲೆಗಳ ಸುತ್ತಮುತ್ತಲಿನ ಜಿಲ್ಲೆಗಳಾದ ಶಿವಮೊಗ್ಗಾ, ಚಿಕ್ಕಮಂಗಳೂರು, ಹಾಸನ, ಕೊಡಗು ಮತ್ತು ಉತ್ತರಕನ್ನಡ ಜಿಲ್ಲೆಗಳು ಅವಲಂಭಿಸಿದ್ದವು. ಇದಲ್ಲದೇ ದೂರದ ಜನ ಕೂಡ ಚಿಕಿತ್ಸೆಗಾಗಿ ಆಗಮಿಸುತ್ತಿದ್ದರು. ಕೊರೊನಾ ಸಮಸ್ಯೆಯಿಂದಾಗಿ ಜನರ ಓಡಾಟ ತಡೆಯಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗೆ ಬೀಗ ಮುದ್ರೆ ಹಾಕಿರುವುದು ತುರ್ತು ಚಿಕಿತ್ಸೆ ಅಗತ್ಯವುಳ್ಳವರಿಗೆ ಮತ್ತು ಗಂಭೀರ ಶಸ್ತçಕ್ರಿಯೆ ಮಾಡಿಸಿಕೊಂಡ ರೋಗಿಗಳಿಗೆ ಆತಂಕ ತಂದಿದೆ.
ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಪರವಾನಿಗೆ ಪಡೆದು ವೈದ್ಯರ ಪತ್ರದೊಂದಿಗೆ ದಕ್ಷಿಣ ಕನ್ನಡಕ್ಕೆ ಹೋದ ವಾಹನಗಳನ್ನೆಲ್ಲಾ ವಾಪಸ್ ಕಳಿಸಲಾಗಿದೆ. ಇದರಲ್ಲಿ ತುರ್ತು ಚಿಕಿತ್ಸೆ ಅಗತ್ಯವುಳ್ಳ ರೋಗಿಗಳೂ ಇದ್ದರು. ಮುಖ್ಯಮಂತ್ರಿಗಳ ಮಟ್ಟದಲ್ಲಿ ಈ ಕುರಿತು ಒಂದು ತೀರ್ಮಾನಕ್ಕೆ ಬರದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ. ಈ ವರೆಗೆ ಜಿಲ್ಲಾಧಿಕಾರಿಗಳ ಪತ್ರ ಪಡೆದು ಅಂಬೆಲೆನ್ಸ್ನಲ್ಲಿ ವೈದ್ಯರ ಶಿಫಾರಸ್ಸಿನೊಂದಿಗೆ ರೋಗಿಗಳು ತುರ್ತು ಚಿಕಿತ್ಸಾ ವಿಭಾಗದ ಮುಖಾಂತರ ದಕ್ಷಿಣಕನ್ನಡ ಮತ್ತು ಉಡುಪಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ೮ಕ್ಕೂ ಹೆಚ್ಚು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿದ್ದು ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ವಿಧದ ತುರ್ತು ಚಿಕಿತ್ಸೆ ಲಭ್ಯವಿದೆ. ೫ಸಾವಿರಕ್ಕೂ ಹೆಚ್ಚು ಹಾಸಿಗೆಗಳು ಅಲ್ಲಿ ತುರ್ತು ಚಿಕಿತ್ಸೆಗೆ, ಒಳರೋಗಿಗಳಿಗೆ ಮೀಸಲಾಗಿವೆ. ವೈದ್ಯರು ಮತ್ತು ಎಲ್ಲ ಉಪಕರಣಗಳು, ಪ್ರಯೋಗಾಲಯಗಳು ಲಭ್ಯವಿದೆ. ಆದ್ದರಿಂದ ಅನಿವರ‍್ಯವಾಗಿ ಅಲ್ಲಿಯ ಆಸ್ಪತ್ರೆಗಳನ್ನು ಜನ ಅವಲಂಭಿಸಿದ್ದರು.
ಹೃದಯ ಮತ್ತು ಮೆದುಳಿನ ಶಸ್ತçಚಿಕಿತ್ಸೆ, ಮೂತ್ರಪಿಂಡ ಕಸಿ, ಮೊದಲಾದ ಶಸ್ತçಕ್ರಿಯೆಗಳನ್ನು ಮಾಡಿಸಿಕೊಂಡ ರೋಗಿಗಳು ತಿಂಗಳಿಗೊಮ್ಮೆ ಪುನಃ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಔಷಧಗಳ ಪ್ರಮಾಣವನ್ನು ಹೆಚ್ಚುಕಡಿಮೆ ಮಾಡಿಸಿಕೊಂಡು ಬರುತ್ತಿದ್ದರು. ಎಲ್ಲ ದೊಡ್ಡ ಆಸ್ಪತ್ರೆಗಳಲ್ಲಿ ಕ್ಯಾಥ್ ಲ್ಯಾಬ್ ಇರುವುದರಿಂದ ಹೃದಯಾಘಾತವಾದ ಎರಡು ತಾಸಿನೊಳಗೆ ಎಂಜಿಯೋಗ್ರಾA ಮಾಡಿ ರೋಗಿಗಳನ್ನು ಬದುಕಿಸಲಾಗುತ್ತಿತ್ತು. ಇದು ಎಲ್ಲರಿಗೆ ತಿಳಿದ ಸಂಗತಿ. ಇಂತಹ ರೋಗಿಗಳಿಗೆ ಅನುಕೂಲ ಮಾಡಿಕೊಡಲು ಉಡುಪಿ ಮತ್ತು ದಕ್ಷಿಣಕನ್ನಡದ ಜಿಲ್ಲಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ತುರ್ತು ಚಿಕಿತ್ಸೆಯ ಅಗತ್ಯವನ್ನು ನಮೂದಿಸಿದ ವೈದ್ಯರ ಪತ್ರದೊಂದಿಗೆ ಅಂಬುಲೆನ್ಸ್ನಲ್ಲಿ ಹೋದ ರೋಗಿಗಳಿಗೆ, ಕ್ಯಾನ್ಸರ್ ರೇಡಿಯೋಥೆರಪಿ ಮಾಡಿಸಿಕೊಳ್ಳಲು ಹೋಗುವ ರೋಗಿಗಳಿಗೆ ಅವಕಾಶ ಮಾಡಿಸಿಕೊಡಬೇಕೆಂಬುದು ಜನರ ಅಭಿಪ್ರಾಯ.

error: