May 30, 2023

Bhavana Tv

Its Your Channel

‘ಸೋಂಕು ನಿವಾರಕ ಸುರಂಗಗಳಿಂದ ಯಾವುದೇ ಪ್ರಯೋಜನವಿಲ್ಲ’

ಕಾರವಾರ: ಕೊರೋನಾ ವೈರಸ್‌ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆ ಸೇರಿದಂತೆ ರಾಜ್ಯ, ದೇಶದ ವಿವಿಧೆಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುವ ಸುರಂಗವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇದು ಮಾನವನ ದೇಹದ ಆರೋಗ್ಯಕ್ಕೆ ಹಾನಿಕರವಾಗಿದ್ದು, ಇವುಗಳು ಸೋಂಕು ತಡೆಗಟ್ಟುವಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.

ಈ ಬಗ್ಗೆ ಚೆನ್ನೈನ ಸಾರ್ವಜನಿಕ ಆರೋಗ್ಯ ಮತ್ತು ತಡೆಗಟ್ಟುವ ಔಷಧಿ (ಪಬ್ಲಿಲ್ ಹೆಲ್ತ್ ಆ್ಯಂಡ್ ಪ್ರಿವೆಂಟಿವ್ ಮೆಡಿಸಿನ್) ವಿಭಾಗದ ನಿರ್ದೇಶಕರು ಸುತ್ತೋಲೆಯೊಂದನ್ನು ತಮ್ಮ ‌ವಿಭಾಗದಲ್ಲಿ ಹೊರಡಿಸಿದ್ದಾರೆ.

ಜಿಲ್ಲೆಯ ದಾಂಡೇಲಿ, ರಾಜ್ಯದ ಮೈಸೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಹಾಗೂ ಚೆನ್ನೈನಲ್ಲಿ ಹೈಪೋ ಕ್ಲೋರೈಡ್‌ ದ್ರಾವಣವನ್ನು ಸಿಂಪಡಿಸುವ ವ್ಯವಸ್ಥೆ ಇರುವ ಸುರಂಗವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇದರೊಳಗೆ ಪ್ರವೇಶಿಸಿಸಬಹುದಾಗಿದ್ದು, ಸೋಂಕು ನಿವಾರಕ ಸ್ವಯಂಚಾಲಿತವಾಗಿ ಸಿಂಪಡಣೆಗೊಳ್ಳುವ ಕಾರಣ ಜನರು ಇದರಲ್ಲಿ ಓಡಾಟ ನಡೆಸಬಹುದಾಗಿ ಎಂದು ಹೇಳಲಾಗಿತ್ತು.

ಆದರೆ, ಇದೀಗ ಚೆನ್ನೈನ ಪಬ್ಲಿಲ್ ಹೆಲ್ತ್ ಆ್ಯಂಡ್ ಪ್ರಿವೆಂಟಿವ್ ಮೆಡಿಸಿನ್ ವಿಭಾಗದ ಡೈರೆಕ್ಟರ್ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಇದು ಸರಿಯಾದ ಕ್ರಮವಲ್ಲವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಲಹಾ ಸಮಿತಿಯು ಎಲ್ಲ ಆರೋಗ್ಯ ಸೇವೆಯ ಸಂಸ್ಥೆಗಳಿಗೆ ಒಂದು ಸಂದೇಶ ನೀಡಿದೆ. ಸೋಂಕು ನಿವಾರಕ ಸುರಂಗ ಸ್ಥಾಪನೆಯಿಂದಾಗಿ ಜನರಲ್ಲಿ ತಪ್ಪು ತಿಳಿವಳಿಕೆ ಮೂಡಲಿದೆ. ಜನರು ಹ್ಯಾಂಡ್ ವಾಶರ್ ಬದಲಾಗಿ ಈ ಸೋಂಕು ನಿವಾರಕ ಸುರಂಗದೊಳಗೆ ಪ್ರವೇಶಿಸಿದರೆ ಆರೋಗ್ಯಯುತವಾಗಿರುತ್ತೇವೆ ಎಂಬ ತಪ್ಪು ಭಾವನೆ ಮೂಡಿಸುತ್ತದೆ. ಅಲ್ಲದೇ, ದೇಹದ ಮೇಲೆ ಆಲ್ಕೋಹಾಲ್, ಕ್ಲೋರೈನ್ ಅಥವಾ ಲೈಜೋಲ್ ಸೇರಿದಂತೆ ಇತರ ಸೋಂಕು ನಿವಾರಕಗಳನ್ನು ಸಿಂಪಡಿಸುವುದರಿಂದ ಹಾನಿಕಾರಕವೂ ಆಗಿದ್ದು, ಸೋಂಕು ತಡೆಗಟ್ಟುವಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ.

ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಇಂಥ ಸುರಂಗಗಳನ್ನು ಸ್ಥಾಪನೆ ಮಾಡಬಾರದು ಎಂದು ತಿಳಿಸಿರುವುದಾಗಿ ಚೆನ್ನೈನ ಪಬ್ಲಿಲ್ ಹೆಲ್ತ್ ಆ್ಯಂಡ್ ಪ್ರಿವೆಂಟಿವ್ ಮೆಡಿಸಿನ್ ವಿಭಾಗದ ಡೈರೆಕ್ಟರ್ ತಿಳಿಸಿದ್ದಾರೆ.

source : nudijenu

About Post Author

error: