March 22, 2023

Bhavana Tv

Its Your Channel

ಆರ್ ಎನ್ ಎಸ್ ಸಮೂಹ ಸಂಸ್ಥೆ ಮುರ್ಡೇಶ್ವರ ಇವರ ವತಿಯಿಂದ ೧ ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಮತ್ತು ಬೆಳೆ ವಿತರಣೆ

ಭಟ್ಕಳ ತಾಲೂಕಿನ ಬಲ್ಸೆ, ತುದಳ್ಳಿ, ನರೆಕುಳಿ, ಕೊಡ್ಸುಳು, ಗುಡಿಗಾರ್ ಬೊಳೆ, ಜನತಾಕಲೋನಿ, ಬೈಲೂರು, ಆಚಾರಿಕೇರಿ, ನಾಡವರಕೇರಿ, ವೆಂಕಟಾಪುರ, ಗುಡಿಹಿತ್ತಲು, ಮೂಡಶಿರಾಲಿ, ಸೊನಾರಕೇರಿ, ಡಿ. ಪಿ ಕಲೋನಿ, ಜೋಗಿಮನೆ, ಕಾಸ್ಮೋಡಿ, ಚೌತನಿ ಕುದರೆ ಬೀರಪ್ಪ ದೇವಸ್ಥಾನ ಈ ಎಲ್ಲಾ ಭಾಗಗಳಲ್ಲಿನ ಕಡುಬಡವರ ಮಾಹಿತಿಯನ್ನು ಬೂತ್ ಮಟ್ಟದ ಕಾರ್ಯಕರ್ತರ ಮುಖಾಂತರವಾಗಿ ಕಲೆಹಾಕಿ ೮೮೨ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ಕಾರ್ಯಕರ್ತರ ಮುಖೆನವಾಗಿ ತಲುಪಿಸಲಾಯಿತು. ಈ ಜನಸೇವಾ ಕಾರ್ಯಕ್ಕೆ ಸಹಾಯಾರ್ಥವಾಗಿ ಆರ್ ಎನ್ ಎಸ್ ಸಮೂಹ ಸಂಸ್ಥೆ ಮುರ್ಡೇಶ್ವರ ಇವರ ವತಿಯಿಂದ ೧ ಲಕ್ಷ ರೂಪಾಯಿ ಮೌಲ್ಯದ ಅಕ್ಕಿ ಮತ್ತು ಬೆಳೆಯನ್ನು ನೀಡಿದ್ದು ಆ ಸಾಮಾಗ್ರಿಗಳನ್ನು ಎಲ್ಲಾ ಕಡುಬಡವರಿಗೆ ತಲುಪಿಸಲಾಗುತ್ತಿದೆ ಎಂದು ಶಾಸಕ ಸುನಿಲ ನಾಯ್ಕ ಮಾದ್ಯಮಕ್ಕೆ ತಿಳಿಸಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

About Post Author

error: