June 8, 2023

Bhavana Tv

Its Your Channel

ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಪಡಿತರ ಸಾಮಗ್ರಿ ವಿತರಣೆಯಲ್ಲಿ ವ್ಯತ್ಯಾಸ -ಜಿಲ್ಲಾಧಿಕಾರಿಗಳು ತಕ್ಷಣ ಸ್ಫಂದಿಸಿ – ರವೀಂದ್ರ ನಾಯ್ಕ ಆಗ್ರಹ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುವ ವಿಧಾನ ಸಭಾ ಕ್ಷೇತ್ರವಾದ ಯಲ್ಲಾಪುರ ತಾಲೂಕಿನಲ್ಲಿಯೇ ಪಡಿತರ ಸಾಮಗ್ರಿ ವಿತರಣೆಯಲ್ಲಿ ವ್ಯತ್ಯಾಸ ಹಾಗೂ ಪಡಿತರ ಸಾಮಗ್ರಿ ಸಂಗ್ರಹವಿಲ್ಲದೇ ವಿತರಣೆ ಕೊರತೆಯಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತಕ್ಷಣ ಸ್ಫಂದಿಸಿ ಈ ದಿಶೆಯಲ್ಲಿ ಸೂಕ್ತ ಸಕರಾತ್ಮಕ ಕ್ರಮ ಜರುಗಿಸುವಂತೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

   ಕೊರೋನಾ ಭಿತಿಯಲ್ಲಿ ಜಿಲ್ಲಾಡಳಿತ ನಿರ್ಭಂದಿಸಿರುವ ಆದೇಶದಂತೆ ಗ್ರಾಮೀಣ ಭಾಗದ ಗ್ರಾಮಸ್ಥರಿಗೆ ಅಕ್ಕಿ ವಿತರಣೆಯಲ್ಲಿ ವಿಳಂಬ ಆಗುತ್ತಿದ್ದು, ಗೋಧಿ ವಿತರಣೆಯ ಕೊರತೆಯಿಂದ ಗ್ರಾಮಸ್ಥರಿಗೆ ತೀವ್ರ ಅನಾನುಕೂಲತೆ ಉಂಟಾಗಿದ್ದು ಇರುತ್ತದೆ ಎಂದು ಅವರು ತಿಳಿಸಿದು,್ದ ತಾಲೂಕಾದ್ಯಂತ ೩೦ ಪಡಿತರ ವಿತರಣೆ ಅಂಗಡಿ ವಿತರಿಸುವ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಿತರಿಸಿದ ಅಂಕಿ-ಅAಶಗಳನ್ನು ಶೇ ೬೦ ರಷ್ಟು ಆಗದಿರುವ ಹಿನ್ನೆಲೆಯಲ್ಲಿ ಸದ್ರಿ ಲೋಪ ಹಾಗೂ ಆಹಾರ ಸಾಮಗ್ರಿ ಕೊರತೆ ಕುರಿತು ತಕ್ಷಣ ಪರಿಶಿಲಿಸುವಂತೆ ಅವರು ಜಿಲ್ಲಾ ಅಧಿಕಾರಿಗಳಿಗೆ ವಿನಂತಿಸಿದ್ದಾರೆ. ಅಲ್ಲದೇ ಪ್ರತಿ ಕಾರ್ಡುದಾರನಿಂದಲೂ ಸಂಖ್ಯೆಗೆ ಅನುಗುಣವಾಗಿ ೨೦ ರಿಂದ ೮೦ ರೂಪಾಯಿ ವರೆಗೂ ಅಂಗಡಿಕಾರರೂ ವಸೂಲಿ ಮಾಡುತ್ತಿರುವ ಕುರಿತು ಗ್ರಾಮಸ್ಥರ ಆರೋಪವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಅವರು ಹೇಳಿದ್ದಾರೆ.

   ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಪಡಿತರ ವಿತರಣೆಯಲ್ಲಿ ಲೋಪವಾಗುತ್ತಿರುವುದು ವಿಷಾಧಕರ. ತಕ್ಷಣ ಪಡಿತರ ಸಾಮಗ್ರಿ ವಿತರಿಸುವ ಕಾರ್ಯ ಪೂರೈಸಬೇಕಾಗಿದ್ದು, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ದಿನನಿತ್ಯದ ಮೂಲಭೂತ ಆಹಾರ ಸಾಮಗ್ರಿಗಳನ್ನು ಮನೆ ಮನೆಗೆ ತಲುಪಿಸುವಂತೆ ಚಿಂತಿಸುವ ಅವಶ್ಯಕತೆ ಇದೆ ಎಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

About Post Author

error: