ಹೊನ್ನಾವರ: ಪಟ್ಟಣದ ತಹಶೀಲ್ದಾರ ಕಛೇರಿ, ಪಟ್ಟಣಪಂಚಾಯತಿ,ಪೋಲಿಸ್ ಇಲಾಖೆಯವರು ಕರೋನಾ ಸಮಯದಲ್ಲಿ ತಮ್ಮ ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದು ಸುರಕ್ಷತೆಯ ದೃಷ್ಠಿಯಿಂದ ಸೈನಿಟೈಜರ್ ಅಗತ್ಯವಿದ್ದು ಹೊನ್ನಾವರ ಆರ್.ಎಸ್.ಎಸ್ ಸೇವಾಭಾರತಿಯ ವತಿಯಿಂದ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.ತಹಶೀಲ್ದಾರ ವಿವೇಕ ಶೇಣ್ವೆ, ಪ.ಪಂ. ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಪಿಎಸೈ ಶಶಿಕುಮಾರ್ ಸ್ವೀಕರಿಸಿ ಸಂಘಟನಾ ಕಾರ್ಯಕ್ಕೆ ಅಭಿನಂದನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ನಾಯ್ಕ ಮಾತನಾಡಿ ಸಂಘಟನೆ ಹಲವು ಕ್ಲಿಷ್ಟಕರ ಸನ್ನೀವೇಶದಲ್ಲಿ ನೆರವು ನೀಡುತ್ತಾ ಬಂದಿದ್ದು ಈಗಲೂ ಕರೋನಾ ನಿಯಂತ್ರಿಸಲು ಅಧಿಕಾರಿಗಳು, ಪೋಲಿಸ್ ಇಲಾಖೆ, ಪುರಸಭೆಯ ಅಧಿಕಾರಿಗಳು, ಪೌರ ಕಾರ್ಮಿಕರು ಶ್ರಮಿಸುತ್ತಿದ್ದು ಇವರ ಅಗತ್ಯತೆಗೆ ಅನುಗುಣವಾಗಿ ೮೦ ಸೈನಿಟೈಜರ್ ವಿತರಣೆ ಮಾಡಲಾಗಿದ್ದು ಅಗತ್ಯವಿದ್ದಲ್ಲಿ ಇನ್ನು ವಿತರಿಸಲು ಸಿದ್ದರಿದ್ದೇವೆ ಎಂದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎನ್.ಎಮ್.ಮೇಸ್ತ ಸಂಘಟನೆ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.
ಸೇವಾಭಾರತಿ ಜಿಲ್ಲಾ ಘಟಕದ ಸಂಚಾಲಕರಾದ ವಿಮಲ್ ರೆವಣ್ಕರ್, ತಾಲೂಕ ಸಂಘಟನೆಯ ಸಂತೋಷ ಕಾಮತ್ ವಿನೋದ ಪೈ ಶಿವಾನಂದ ಮೇಸ್ತ, ವಿಜು ಕಾಮತ ಮುರುಳಿದರ್ ಗಾಯತೊಂಡೆ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.