March 30, 2023

Bhavana Tv

Its Your Channel

ಹೊರ ಜಿಲ್ಲೆಗೆ ಹೋಗಿಬಂದ್ರೆ ೧೪ ದಿನ ಕ್ವಾರಂಟೈನ್: ಜಿಲ್ಲಾಧಿಕಾರಿ ಆದೇಶ

ಕಾರವಾರ: ಕೊರೋನಾ ವೈರಸ್ ಕಡಿವಾಣಕ್ಕೆ ಈಗಾಗಲೇ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ಆದಾಗ್ಯೂ ಹೊರ ಜಿಲ್ಲೆ ಹೊರ ರಾಜ್ಯದಿಂದ ಬರುವವರಿಂದ ಇಲ್ಲದೇ ಬೇರೆ ಜಿಲ್ಲೆಗೆ ಹೋಗಿ ಬಂದವರಲ್ಲಿ ಕೊರೋನಾ ವೈರಸ್ ಹರಡುವ ಸಾಧ್ಯತೆ ಇದೆ. ಉತ್ತರ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆ ಅಥವಾ ಹೊರ ರಾಜ್ಯದಿಂದ ಬಂದವರನ್ನ ಜೊತೆಗೆ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ಹೋಗಿ ಬರುವವರನ್ನ ೧೪ ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಆದೇಶಿಸಿದ್ದಾರೆ.

ಹೊರ ಜಿಲ್ಲೆ ಹೊರ ರಾಜ್ಯದಿಂದ ಬರುವವರು ಸಾರ್ವಜನಿಕರು ಕಡ್ಡಾಯವಾಗಿ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಜ್ವರ ತಪಾಸಣೆ ಮಾಡಿಸಿಕೊಳ್ಳಬೇಕು. ತಪಾಸಣೆ ಮಾಡಿಕೊಂಡ ವ್ಯಕ್ತಿಯ ಕೈ ಮೇಲೆ ಸೀಲು ಹಾಕಲಿದ್ದು ೧೪ ದಿನ ಗೃಹ ಕ್ವಾರಂಟೈನ್ ನಲ್ಲಿರಬೇಕು. ಗೃಹ ಕ್ವಾರಂಟೈನ್ ಗೆ ಒಪ್ಪದಿದ್ದರೇ ಸರ್ಕಾರಿ ಕ್ವಾರಂಟೈನ್ ನಲ್ಲಿಡಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಜಿಲ್ಲೆಗೆ ಯಾರು ಬರುತ್ತಾರೋ ಅವರ ವಿವರ, ಅವರ ಪಾಸ್ ಗಳ ವಿವರವನ್ನ ಪಡೆದು ತಹಶಿಲ್ದಾರರಿಗೆ ನೀಡಬೇಕು ಎಂದು ಜಿಲ್ಲೆಯ ಗಡಿಭಾಗದಲ್ಲಿ ಇರುವ ಚೆಕ್ ಪೊಸ್ಟ್ ಗಳಿಗೆ ಜಿಲ್ಲಾಧಿಕಾರಿ ಡಾ ಹರೀಶ್ ಕುಮಾರ್ ಆದೇಶಿಸಿದ್ದಾರೆ.

About Post Author

error: