
ಉತ್ತರ ಕನ್ನಡ: ಕೋವಿಡ್ 19 ಸಂಬಂಧವಾಗಿ ದೇಶದಾದ್ಯಂತ ಲಾಕ್ ಡೌನ್ ಹೇರಲಾಗಿದ್ದು ಜನರಿಗೆ ಅಗತ್ಯವಿರುವ ಸೇವೆಗಳನ್ನು ನೀಡುವ ಭರವಸೆ ಸರಕಾರ ನೀಡಿದೆ.ಆದರೆ ಬಹಳಷ್ಟು ಜನರು ಸಂಕಷ್ಟಗಳನ್ನು ಎದುರಿಸುತ್ತಿದ್ದು ಅಗತ್ಯ ವೈದ್ಯಕೀಯ ಸೇವೆಗಳಿಗೆ ಪರದಾಡುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜನರು ವೈದ್ಯಕೀಯ ಅಗತ್ಯಗಳಿಗೆ ಬಹುತೇಕ ಉಡುಪಿ ಜಿಲ್ಲೆಯನ್ನೇ ಅವಲಂಬಿಸಿದ್ದಾರೆ. ಇದುವರೆಗೆ ಉತ್ತರ ಕನ್ನಡ ಕಡೆಯಿಂದ ಬರುವ ಆಂಬುಲೆನ್ಸ್ ಗಳನ್ನು ಮತ್ತು ಪಾಸ್ ಇರುವವರನ್ನು ಉಡುಪಿ ಗಡಿಯಲ್ಲಿ ಪರಿಶೀಲಿಸಿ ಬಿಡುತ್ತಿದ್ದರು, ಆದರೆ ಇದೀಗ ಶಿರೂರು ಚೆಕ್ ಪೋಸ್ಟ್ ನಿಂದ 108 ಆಂಬುಲೆನ್ಸ್ ವಾಹನವನ್ನೇ ವಾಪಾಸು ಕಳುಹಿಸುತ್ತಿದ್ದು ಜನರು ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ.ದೈನಂದಿನ ಸಾವಿರಾರು ಜನ ಮಣಿಪಾಲ ಆಸ್ಪತ್ರೆ ಹಾಗೂ ಇನ್ನಿತರ ಆಸ್ಪತ್ರೆ ಗಳನ್ನು ಅವಲಂಬಿಸಿದ್ದು ಇದೀಗ ಉಡುಪಿ ಜಿಲ್ಲಾಧಿಕಾರಿಗಳ ಈ ಆದೇಶದಿಂದ ಜನರಿಗೆ ದಿಕ್ಕೇ ತೋಚದಂತಾಗಿದೆ. ಆಸ್ಪತ್ರೆಗೆ ಹೋಗುವವರು ಎಲ್ಲರೂ ತುರ್ತು ಎಂದೇ ಪರಿಗಣಿಸಬೇಕಾಗುತ್ತದೆ.ಅದಕ್ಕಾಗಿಯೇ ಜನರು ಅಷ್ಟು ದೂರದ ಆಸ್ಪತ್ರೆಗಳಿಗೆ ಹೋಗುತ್ತಾರೆ. ಎಲ್ಲರೂ ಪಾಸ್ ಪಡೆಯೋದು,ಅಥವಾ ಆಂಬುಲೆನ್ಸ್ ಬಳಸುವುದು ಪ್ರಾಯೋಗಿಕವೂ ಅಲ್ಲ. ಆದ್ದರಿಂದ ಈ ಕೂಡಲೇ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತವಾರಿ ಸಚಿವರು ಮಧ್ಯ ಪ್ರವೇಶಿಸಿ ಚಿಕಿತ್ಸೆಗಾಗಿ ಹೋಗುವವರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಮಸ್ಯೆಯನ್ನು ಪರಿಹರಿಸಿ ಕ್ರಮ ಕೈಗೊಳ್ಳ ಬೇಕಾಗಿ ಎಸ್ ಡಿ ಪಿ ಐ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ತೌಫೀಕ್ ಬ್ಯಾರಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
More Stories
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ