
ಮುರ್ಡೇಶ್ವರ ; ಕರೋನಾ ಭಯದ ನಡುವೆ ಅನಾರೊಗ್ಯ ಸಂಭವಿಸಿದರೆ ತುರ್ತು ಅಂಬುಲೆನ್ಸ ಸೇವೆಯು ಮುರ್ಡೆಶ್ವರದಲ್ಲಿ ಇಲ್ಲದೇ ಇರುವುದು ಆತಂಕಕಾರಿಯಾಗಿದೆ ಎಂದು ಕರವೇ ಅಧ್ಯಕ್ಷ ಮಂಜುನಾಥ ಗೌಡ ಆತಂಕ ವ್ಯಕ್ತಪಡಿಸಿ ಜಿಲ್ಲಾದೀüಕಾರಿಗಳು ಈ ಬಗ್ಗೆ ಮಧ್ಯೆ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ
ಐತಿಹಾಸಿಕ ಹಾಗೂ ಪ್ರವಾಸಿ ಸ್ಥಳ ಎಂದು ಹಿರಿಮೆ ಹೊಂದಿರುವ ಮುರ್ಡೇಶ್ವರದ ಸುತ್ತಮುತ್ತಲಿನಲ್ಲಿ ವಾಸಿಸುವವರಿಗೆ ಅನಾರೊಗ್ಯ ಸಂಭವಿಸಿದರೆ ತುರ್ತು ಸಾಗಟ ಮಾಡಲು ಅಂಬುಲೆನ್ಸ ಸೇವೆ ಇಲ್ಲದೇ ಹಲವು ದಿನಗಳು ಕಳೆದಿದೆ. ಭಟ್ಕಳಕ್ಕೆ ಸಮೀಪವಿರುವ ಈ ಸ್ಥಳದಲ್ಲಿ ದೇಶದೆಲ್ಲಡೆಯಂತೆ ಈ ಭಾಗದಲ್ಲಿಯೂ ಲಾಕ್ ಡೌನ ಸ್ಥಿತಿ ನಿರ್ಮಾಣವಾಗಿದೆ. ಅನಾರೊಗ್ಯ ಸಂಭವಿಸಿದರೆ ಇಲ್ಲಿಯ ಜನರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಇಲ್ಲಿಯ ಸಮಸ್ಯೆ ಬಗ್ಗೆ ತಿಳಿಸಿದಾಗ ಅಧಿಕಾರಿಗಳು ಕಣ್ಣಮುಚ್ಚಾಲೆ ಆಟ ಆಡಿದ್ದರು. ಮಂಕಿಯಲ್ಲಿರುವ ಅಂಬುಲೆನ್ಸ ಹಗಲಿನಲ್ಲಿ ಇಟ್ಟು ರಾತ್ರಿ ಮಂಕಿಗೆ ತರುತ್ತಿದ್ದರು. ಇದು ಬೇಕಿಲ್ಲ ಈ ಹಿಂದೆ ಮುರ್ಡೆಶ್ವರದಲ್ಲಿ ಇದ್ದ ಅಂಬುಲೆನ್ಸ ಸೇವೆ ಪುನಃ ಆರಂಭಿಸಬೇಕು ಎಂದು ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ ಒತ್ತಾಯಿಸಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.